»   » ನೋವಿನಲ್ಲಿದ್ದರೂ ವಿರುಷ್ಕಾ ರಿಸೆಪ್ಶನ್ನಿಗೆ ಬಂದ ಅಮಿತಾಬ್

ನೋವಿನಲ್ಲಿದ್ದರೂ ವಿರುಷ್ಕಾ ರಿಸೆಪ್ಶನ್ನಿಗೆ ಬಂದ ಅಮಿತಾಬ್

Posted By:
Subscribe to Filmibeat Kannada

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಭುಜದ ನೋವಿನಿಂದ ಬಳಲುತ್ತಿದ್ದು, ಆ ನೋವಿನಲ್ಲೂ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಶೂಟಿಂಗ್ ಸೆಟ್ ನಲ್ಲಿ ತೂಕದ ವಸ್ತು ಎತ್ತಿದ್ದರಿಂದ ಅಮಿತಾಬ್ ಗೆ ಹಳೆಯ ನೋವು ಮತ್ತೆ ಕಾಡಿದೆಯಂತೆ. ಇದರಿಂದ ಎಡಭುಜದ ನೋವು ಹೆಚ್ಚಾಗಿದೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೂಡ ಪಡೆದುಕೊಂಡಿರುವ ಅಮಿತಾಬ್ ವಿಶ್ರಾಂತಿ ಪಡೆಯುತ್ತಿದ್ದಾರೆ.

ಅದ್ಭುತ ಕಲಾವಿದ ಬಚ್ಚನ್ ಅವರ ಅದ್ಭುತ ಸಿನಿಮಾಗಳ ಜೊತೆ ಒಂದು ಸುತ್ತು

Amitabh Bachchan suffering from Shoulder Injury

ಮುಂಬೈನಲ್ಲಿ ನಡೆದ ವಿರುಷ್ಕಾ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಅಮಿತಾಬ್ ಬಚ್ಚನ್ ತಮ್ಮ ಫ್ಯಾಮಿಲಿ ಜೊತೆಯಲ್ಲಿ ಆಗಮಿಸಿದ್ದರು. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಅಮಿತಾಬ್ ಮಗಳು ಶ್ವೇತಾ ಬಚ್ಚನ್ ಮತ್ತು ಮಕ್ಕಳು ನವಜೋಡಿಗೆ ಶುಭಕೋರಿದರು.

'IFFI 2017' ಪ್ರಶಸ್ತಿ ಪ್ರಕಟ : 'ವರ್ಷದ ವ್ಯಕ್ತಿತ್ವ ಪ್ರಶಸ್ತಿ'ಗೆ ಭಾಜನರಾದ ಬಚ್ಚನ್

ಸದ್ಯ, ಅಮೀರ್ ಖಾನ್ ಅಭಿನಯಿಸುತ್ತಿರುವ 'ಥಗ್ಸ್ ಹಿಂದೂಸ್ತಾನ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅಭಿನಯಿಸುತ್ತಿದ್ದಾರೆ. ಅದಾದ ನಂತರ ಚಿರಂಜೀವಿ ಅಭಿನಯದ ತೆಲುಗಿನ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲೂ ಬಿಗ್-ಬಿ ವಿಶೇಷ ಪಾತ್ರವನ್ನ ನಿರ್ವಹಿಸಲಿದ್ದಾರೆ.

English summary
The 75-year-old actor Amitabh Bachchan took to his personal blog, where he said that the injury recently got aggravated after some heavy-lifting on a film's sets. Amitabh Bachchan is currently under medication and applying ice compresses to his injury.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X