»   » ಅಮಿತಾಬ್ ಬಚ್ಚನ್ ಅಭಿಮಾನಿಗಳಿಗೆ ಲಕ್ಕಿ ಗಿಫ್ಟ್

ಅಮಿತಾಬ್ ಬಚ್ಚನ್ ಅಭಿಮಾನಿಗಳಿಗೆ ಲಕ್ಕಿ ಗಿಫ್ಟ್

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಜೀವನ ಪಯಣದಲ್ಲಿ ಇನ್ನೊಂದು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಇಂದು ಅವರು (ಅ.11) 72ನೇ ವರ್ಷಕ್ಕೆ ಅಡಿಯಿಟ್ಟರು. ಅವರ ಬಂಧುಬಳಗ, ಅಪಾರ ಅಭಿಮಾನಿಗಳು, ಸ್ನೇಹಿತರು ಹಿತೈಷಿಗಳಿಂದ ಶುಭಾಶಯಗಳ ಸುರಿಮಳೆಯಲ್ಲಿ ಮಿಂದೇಳುತ್ತಿದ್ದಾರೆ.

ಅವರ ಮುದ್ದಿನ ಸೊಸೆ ಐಶ್ವರ್ಯಾ ರೈ ಮಾತ್ರ ತಮ್ಮ ತೀರ್ಥರೂಪು ಸಮಾನಾರಾಧ ಮಾವನವರಿಗೆ ರಹಸ್ಯ ಬರ್ತ್ ಡೇ ಪಾರ್ಟಿಯನ್ನು ಆಯೋಜಿಸಿದ್ದರು. ಕಳೆದ ಎರಡು ವಾರಗಳಿಂದ ಐಶ್ವರ್ಯಾ ರೈ ಬಚ್ಚನ್ ಸದ್ದಿಲ್ಲದಂತೆ ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರಂತೆ. ಈ ಬಗ್ಗೆ ಬಚ್ಚನ್ ಸಾಹೇಬರಿಗೆ ಕೆಲ ದಿನಗಳ ಹಿಂದಷ್ಟೇ ಗೊತ್ತಾಗಿದೆ. [ಲಂಡನ್ ನಲ್ಲಿ ಖುಲ್ಲಂ ಖುಲ್ಲಾ ಒಂದಾದ ಅತ್ತೆ-ಸೊಸೆ]

Happy birthday to Big B

ಇಷ್ಟಕ್ಕೂ ಐಶ್ವರ್ಯಾ ರೈ ಆಯೋಜಿಸಿರುವ ಪಾರ್ಟಿಯಲ್ಲಿನ ವಿಶೇಷಗಳೆಂದರೆ ಅಮಿತಾಬ್ ಅವರಿಗೆ ಇಷ್ಟವಾದ ತಿನಿಸುಗಳ ಪಟ್ಟಿ, ಅವರ ಮೆಚ್ಚಿನ ಹಿಟ್ ಸಾಂಗ್ಸ್ ಎಲ್ಲವೂ ಇರುತ್ತವೆ. ಅಮಿತಾಬ್ ಅವರಿಗೆ ನೆನಪಿನಲ್ಲಿ ಉಳಿಯುವಂತಹ ವಿನೋದ ಕೂಟ ಇದಾಗಲಿದೆ.

ಇದೇ ಸಂದರ್ಭದಲ್ಲಿ ಅಮಿತಾತ್ ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನೂ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಇಳಿವಯಸ್ಸಿನಲ್ಲೂ ಅಮಿತಾಬ್ ಯುವಕರನ್ನೂ ನಾಚಿಸುವಷ್ಟೂ ಸಖತ್ ಆಕ್ಟೀವ್ ಆಗಿರುವುದು ಗೊತ್ತೇ ಇದೆ. ಟ್ವಿಟ್ಟರ್ ನಲ್ಲಿ ಹುಟ್ಟುಹಬ್ಬ ಶುಭಾಶಯ ಹೇಳುವವರಿಗೆ ಡಿಜಿಟಲ್ ಹಸ್ತಾಕ್ಷರದ ಅವರ ಫೋಟೋ ಕಳುಹಿಸುತ್ತಿದ್ದಾರೆ.

ಬಿಗ್ ಬಿ ಅಭಿಮಾನಿಗಳ ಸಂಭ್ರಮಕ್ಕೆ ಇದಕ್ಕಿಂತ ಇನ್ನೇನು ಬೇಕು. ಫಿಲ್ಮಿಬೀಟ್ ಕಡೆಯಿಂದ ಅಮಿತಾಬ್ ಬಚ್ಚನ್ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ದೇವರು ಅವರಿಗೆ ಆಯುರಾರೋಗ್ಯ ಕರುಣಿಸಲಿ. (ಫಿಲ್ಮಿಬೀಟ್ ಕನ್ನಡ)

English summary
Bollywood superstar Amitabh Bachchan turns 72 today. As he turns a year older, his family, friends and well-wishers are pouring in their birthday wishes. The Bachchan bahu, Aishwarya Rai planned a secret birthday party for him.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada