»   » 72 ರ ಇಳಿವಯಸ್ಸಲ್ಲಿ ಅಮಿತಾಬ್ ಬಚ್ಚನ್ ಗೆ ಇದೆಂಥ ಚಪಲ?

72 ರ ಇಳಿವಯಸ್ಸಲ್ಲಿ ಅಮಿತಾಬ್ ಬಚ್ಚನ್ ಗೆ ಇದೆಂಥ ಚಪಲ?

Posted By:
Subscribe to Filmibeat Kannada

ಬಿಗ್ ಬಿ ಅಮಿತಾಬ್ ಬಚ್ಚನ್ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟು ನಾಲ್ಕು ದಶಕಗಳೇ ಉರುಳಿವೆ. ಭಿನ್ನವಿಭಿನ್ನ ಪಾತ್ರಗಳಲ್ಲಿ ಎಲ್ಲರನ್ನ ರಂಜಿಸಿರುವ ಬಚ್ಚನ್, ಜಯಾ ಬಚ್ಚನ್, ಹೇಮಾ ಮಾಲಿನಿ, ರೇಖಾ, ಶ್ರೀದೇವಿ, ಜಯಪ್ರದಾ, ಸೌಂದರ್ಯ ಸೇರಿದಂತೆ ಅನೇಕ ಸುರಸುಂದರಿಯರ ಜೊತೆ ಡ್ಯುಯೆಟ್ ಹಾಡಿದ್ದಾರೆ.

ಚಿತ್ರರಂಗಕ್ಕೆ ಬಚ್ಚನ್ ಕಾಲಿಟ್ಟಾಗಿನಿಂದಲೂ, ಎಲ್ಲಾ ಟಾಪ್ ನಟೀಮಣಿಯರೊಂದಿಗೆ ರೋಮ್ಯಾನ್ಸ್ ಮಾಡಿರುವ ಬಚ್ಚನ್, ಈಗೀಗ ಅಪ್ಪ, ತಾತ, ಮಾವನ ಪಾತ್ರಗಳಿಗೆ ಮಾತ್ರ ಸೀಮಿತವಾಗ್ತಿದ್ದಾರೆ. ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಬಾಲಿವುಡ್ ನಲ್ಲಿ ಚಾಲ್ತಿಯಲ್ಲಿರುವ ಬಿಗ್ ಬಿಗೆ ಈಡೇರದ ಒಂದು ಬಯಕೆ ಇದೆ.

ಬಾಲಿವುಡ್ ನಲ್ಲಿ ಹಲ್ ಚಲ್ ಎಬ್ಬಿಸುತ್ತಿರುವ ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್, ಪ್ರಿಯಾಂಕಾ ಛೋಪ್ರಾ, ವಿದ್ಯಾ ಬಾಲನ್ ಅಂತಹ ಬೆಡಗಿಯರ ಜೊತೆ ರೋಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಆಸೆ ಬಹಳ ದಿನಗಳಿಂದ ಬಿಗ್ ಬಿ ಅಮಿತಾಬ್ ಗೆ ಕಾಡುತ್ತಿದ್ಯಂತೆ.

Amitabh Bachchan's unfulfilled desire: Wants to romance Deepika Padukone

'ಪಿಕು' ಚಿತ್ರದಲ್ಲಿ ದೀಪಿಕಾಗೆ ಅಪ್ಪನಾಗಿ ಕಾಣಿಸಿಕೊಳ್ಳುತ್ತಿರುವ ಅಮಿತಾಬ್, ''ಆಕೆಯೊಂದಿಗೆ ಡ್ಯುಯೆಟ್ ಹಾಡುವ ಚಾನ್ಸ್ ನನಗೆ ಸಿಕ್ಕಿದ್ದರೆ ಎಷ್ಟು ಚೆಂದ ಇರುತ್ತಿತ್ತು'' ಅಂತ ಹೇಳಿಕೆ ನೀಡಿದ್ದಾರೆ. [ಡಿಂಪಲ್ ಬ್ಯೂಟಿ ದೀಪಿಕಾ ಪಡುಕೋಣೆ ಹಿಂತಿರುಗಿ ನೋಡಿದಾಗ!]

ಇತ್ತೀಚೆಗಷ್ಟೇ ನಡೆದ ಮಾಧ್ಯಮ ಸಂವಾದ ಒಂದರಲ್ಲಿ ಅಮಿತಾಬ್ ಬಚ್ಚನ್ ರವರ ಮನದಾಳದ ಇಂಗಿತದ ಬಗ್ಗೆ ಪ್ರಶ್ನೆ ಎದುರಾದಾಗ, ಕೊಂಚವೂ ಸಂಕೋಚ ಪಡದೆ ತಮ್ಮ ಬಯಕೆಯನ್ನ ವ್ಯಕ್ತಪಡಿಸಿದ್ದಾರೆ.

''ಈಗ ನನ್ನ ಟೈಮ್ ಅಲ್ಲ. ದೀಪಿಕಾ, ವಿದ್ಯಾ, ಪರಿಣಿತಿ ಛೋಪ್ರಾ, ಕತ್ರೀನಾ ಅಂತಹ ಯುವ ಪ್ರತಿಭೆಗಳನ್ನ ನೋಡಿದಾಗ ಅವರೊಂದಿಗೆ ರೋಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು ಅನಿಸುತ್ತದೆ. ಆದರೆ, ದುರಾದೃಷ್ಟವಶಾತ್ ನನಗೆ ವಯಸ್ಸಾಗಿದೆ. ಆದರೆ, ನನ್ನ ಕಾಲದ ಎಲ್ಲಾ ನಟೀಮಣಿಯರೊಂದಿಗೆ ಪರದೆ ಹಂಚಿಕೊಂಡಿರುವುದು ನನಗೆ ಖುಷಿ ತಂದಿದೆ'' ಅಂತ ಅಮಿತಾಬ್ ಹೇಳಿದ್ದಾರೆ. [ಬಿಗ್ ಬಿ ಅಮಿತಾಬ್ ಬಚ್ಚನ್ ಕಾಲಿಗೆ ಬಿದ್ದ ರಜನಿ]

ಹರೆಯದ ಹುಡುಗಿ ಜಿಯಾ ಖಾನ್ ಜೊತೆ ಕಾಣಿಸಿಕೊಂಡು ಒಮ್ಮೆ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದ ಬಿಗ್ ಬಿಗೆ ವಯಸ್ಸಾದರೂ, ಆಸೆಗಳು ಮಾತ್ರ ಬೆಟ್ಟದಷ್ಟಿವೆ. ಅದಕ್ಕೆ ಈ ಹೇಳಿಕೆಯೊಂದು ಸಾಕಲ್ವಾ?

English summary
Amitabh Bachchan playing the role of Deepika Padukone's Father in the movie Piku, wishes that if he could play a romantic role with the Actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada