Just In
Don't Miss!
- News
ಸ್ಟಾರ್ಟ್ ಅಪ್ಗಳ ಅನುಷ್ಠಾನದಲ್ಲಿ ಕರ್ನಾಟಕದ ನಂಬರ್ 1
- Finance
Gold Silver Rate: ಪ್ರಮುಖ ನಗರಗಳಲ್ಲಿ ಜ.26ರ ಚಿನ್ನ, ಬೆಳ್ಳಿ ದರ
- Sports
ಸಯ್ಯದ್ ಮುಷ್ತಾಕ್ ಅಲಿ: ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಹೀನಾಯ ಸೋಲು
- Automobiles
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೇನಾ ಸಮವಸ್ತ್ರಗೆ ಅವಮಾನ; ಕ್ಷಮೆಯಾಚಿಸಿದ ನಟ ಅನಿಲ್ ಕಪೂರ್
ಬಾಲಿವುಡ್ ನಟ ಅನಿಲ್ ಕಪೂರ್ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ಒಟ್ಟಿಗೆ ನಟಿಸಿರುವ ಎಕೆ v/s ಎಕೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ ನಲ್ಲಿ ಅನಿಲ್ ಕಪೂರ್ ವಾಯುಸೇನೆಯ ಸಮವಸ್ತ್ರ್ ಧರಿಸಿದ್ದಾರೆ. ಈ ಸಮವಸ್ತ್ರ ನಿಯಮದ ಅನುಸಾರವಾಗಿ ಇಲ್ಲ, ಅಲ್ಲದೆ ಅನಿಲ್ ಕಪೂರ್ ಆಡಿರುವ ಮಾತುಗಳು ವಾಯುಸೇನೆಗೆ ಕೆಟ್ಟ ಅಭಿಪ್ರಾಯ ಮೂಡಿಸುವಂತಿದೆ, ತಕ್ಷಣವೇ ಈ ದೃಶ್ಯವನ್ನು ಹಿಂಪಡೆಯುವಂತೆ ಐಎಎಫ್ ಹೇಳಿತ್ತು.
ಇದೀಗ ನಟ ಅನಿಲ್ ಕಪೂರ್ ವಿಡಿಯೋ ಬಿಡುಗಡೆ ಮಾಡಿ ವಿನಮ್ರದಿಂದ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ವಿಡಿಯೋ ಮಾಡಿ ರಿಲೀಸ್ ಮಾಡಿರುವ ಅನಿಲ್ ಕಪೂರ್ ಉದ್ದೇಶಪೂರ್ವಕವಾಗಿ ಯಾರನ್ನು ನೋಯಿಸಿಲ್ಲ ಎಂದಿದ್ದಾರೆ.
ಸೇನೆ ಸಮವಸ್ತ್ರಕ್ಕೆ ಅವಮಾನ: ದೃಶ್ಯ ಹಿಂಪಡೆವಂತೆ ವಾಯುಸೇನೆ ಆಗ್ರಹ
'ನನ್ನ ಹೊಸ ಚಿತ್ರ ಎಕೆ v/s ಎಕೆ ಚಿತ್ರದ ಟ್ರೈಲರ್ ಕೆಲವರಿಗೆ ನೋವುಂಟು ಮಾಡಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಯೋಗ್ಯವಲ್ಲದ ಭಾಷೆಯನ್ನು ಬಳಸುವಾಗ ನಾನು ವಾಯುಪಡೆಯ ಸಮವಸ್ತ್ರ ಧರಿಸಿರುತ್ತೇನೆ. ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನಾನು ವಿನಮ್ರವಾಗಿ ಕ್ಷಮೆಯಾಚಿಸುತ್ತೇನೆ.' ಎಂದು ಅನಿಲ್ ಕಪೂರ್ ಹೇಳಿದ್ದಾರೆ.
ಚಿತ್ರದಲ್ಲಿ ಒಬ್ಬ ಚಲನಚಿತ್ರ ನಿರ್ದೇಶಕ (ಅನುರಾಗ್ ಕಶ್ಯಪ್) ಒಬ್ಬ ಸಿನಿಮಾ ನಟನ ಮಗಳನ್ನು ಅಪಹರಿಸುತ್ತಾರೆ. (ಅನಿಲ್ ಕಪೂರ್ ಮಗಳು) ಅನಿಲ್ ಕಪೂರ್ ತನ್ನ ಮಗಳನ್ನು ಹುಡುಕುವುದು ಸಿನಿಮಾದ ಸಾರಂಶ.
@IAF_MCC pic.twitter.com/rGjZcD9bCT
— Anil Kapoor (@AnilKapoor) December 9, 2020
ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ, ಅನಿಲ್ ಕಪೂರ್ ಹಲವು ದೃಶ್ಯಗಳಲ್ಲಿ ವಾಯುಸೇನೆಯ ಸಮವಸ್ತ್ರ ಧರಿಸಿದ್ದಾರೆ. ಅದೇ ಸಮವಸ್ತ್ರ ಧರಿಸಿ ಅನುರಾಗ್ ಕಶ್ಯಪ್ ಅನ್ನು ಅಶ್ಲೀಲ ಪದಗಳನ್ನು ಬಳಸಿ ಬೈಯುತ್ತಾರೆ. ವೇದಿಕೆ ಮೇಲೆ ಕುಣಿಯುತ್ತಾರೆ. ಅನುರಾಗ್ ಕಶ್ಯಪ್ ಅನ್ನು ಕಾಲಿನಿಂದ ಒದೆಯುತ್ತಾರೆ. ಬಂದೂಕು ಹಿಡಿದು ಬೆದರಿಸುತ್ತಾರೆ.
ವಾಯುಸೇನೆಯ ಸಮವಸ್ತ್ರ ಧರಿಸಿದ ವ್ಯಕ್ತಿ ಈ ರೀತಿ ವರ್ತಿಸುವುದು ಸಮಂಜಸವಲ್ಲ. ಸಮವಸ್ತ್ರವನ್ನು ದಿನವೂ ಧರಿಸುವ ಸೈನಿಕನ ಗುಣ ಹೀಗೆ ಇರುವುದಿಲ್ಲ ಹಾಗಾಗಿ ಈ ದೃಶ್ಯಗಳನ್ನು ಸಿನಿಮಾದಿಂದ ಹಿಂಪಡೆಯಬೇಕು ಎಂದು ವಾಯುಸೇನೆ ಹೇಳಿತ್ತು.