Don't Miss!
- News
'ರಾಜ್ಯದ ಜನ ಮತ್ತೆ ಬಿಎಸ್ ಯಡಿಯೂರಪ್ಪರನ್ನು ನಂಬುವುದಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನನ್ನ ನಗುವಿಗೆ ನೀನೆ ಕಾರಣ: ಪತ್ನಿಯ ಬಗ್ಗೆ ಅನಿಲ್ ಕಪೂರ್ ಭಾವನಾತ್ಮಕ ಪೋಸ್ಟ್
ಬಾಲಿವುಡ್ ನ ಎವರ್ ಗ್ರೀನ್ ನಟ ಅನಿಲ್ ಕಪೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಇಂಟರೆಸ್ಟಿಂಗ್ ವಿಚಾರಗಳ ಮೂಲಕ ಅನಿಲ್ ಕಪೂರ್ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಪತ್ನಿಗೆ ಹೃದಯಸ್ಪರ್ಶಿ ಪತ್ರ ಬರೆಯುವ ಮೂಲಕ ಅನಿಲ್ ಎಲ್ಲರ ಮನ ಗೆದ್ದಿದ್ದಾರೆ.
ಇಂದು (ಮಾರ್ಚ್ 25) ಅನಿಲ್ ಕಪೂರ್ ಪ್ರೀತಿಯ ಮಡದಿ ಸುನೀತಾ ಕಪೂರ್ ಹುಟ್ಟುಹಬ್ಬ. ಈ ವಿಶೇಷ ದಿನದೊಂದು ಪತ್ನಿಗೆ ವಿಶೇಷವಾದ ಪತ್ರ ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಜೊತೆಗಿರುವ ಸುಂದರ ಫೋಟೋಗಳನ್ನು ಶೇರ್ ಮಾಡಿ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಖುಷಿಗೆ ನೀನೆ ಕಾರಣ ಎಂದು ದೀರ್ಘವಾಗಿ ಬರೆದು ಪತ್ನಿಯನ್ನು ಹಾಡಿಹೊಗಳಿದ್ದಾರೆ. ಮುಂದೆ ಓದಿ..
ಕೇವಲ
ಹಣಕ್ಕಾಗಿ
ಕೆಲವು
ಸಿನಿಮಾಗಳಲ್ಲಿ
ನಟಿಸಿದ್ದೆ:
ಅನಿಲ್
ಕಪೂರ್

ಇದೆಲ್ಲ ಮಾಡಿದ್ದು ಖುಷಿಯಿಂದ ಮತ್ತು ಪ್ರೀತಿಯಿಂದ
'ನಮ್ಮ ಪಯಣ 3ನೇ ಕ್ಲಾಸ್ ರೈಲಿನಿಂದ ಲೋಕಲ್ ಬಸ್, ಆಟೋರಿಕ್ಷಾ, ಟ್ಯಾಕ್ಸಿ ವರೆಗೂ ಮತ್ತು ಎಕಾನಮಿ ಯಿಂದ ಬ್ಯುಸಿನೆಸ್ ಫಸ್ಟ್ ಕ್ಲಸ್ ವರೆಗೂ ದಕ್ಷಿಣದ ಕಾರೈಕುಡಿಯಂತಹ ಹಳ್ಳಿಯಲ್ಲಿನ ಸಣ್ಣ ಹೋಟೆಲ್‌ನಿಂದ ಲೇಹ್ ಲಡಾಖ್ ಟೆಂಟ್ ನಲ್ಲಿ ಉಳಿಯವವರೆಗೆ ನಾವು ಇದೆಲ್ಲವನ್ನು ಮಾಡಿದ್ದು, ನಮ್ಮ ಸಂತೋಷದಿಂದ ಮತ್ತು ಪ್ರೀತಿಯಿಂದ.'

ನನ್ನ ನಗುವಿನ ಹಿಂದಿನ ಕಾರಣ ನೀನೆ
'ಇವುಗಳು ನಾನು ನಿನ್ನನ್ನು ಪ್ರೀತಿಸುವ ಮಿಲಿಯನ್ ಕಾರಣಗಳಲ್ಲಿ ಕೆಲವು ಮಾತ್ರ. ನನ್ನ ನಗುವಿನ ಹಿಂದಿನ ಕಾರಣ ನೀನು. ನಮ್ಮ ಜೀವನ ತುಂಬಾ ಸಂತೋಷವಾಗಿ ನಡೆದುಕೊಂಡು ಬರಲು ಕಾರಣ ನೀನೆ. ಪ್ರತಿದಿನ ಮತ್ತು ಎಂದೆಂದಿಗೂ ನನ್ನ ಆತ್ಮ ಸಂಗಾತಿಯಾಗಿರುವುದು ನನ್ನ ಪುಣ್ಯ. ಜನ್ಮ ದಿನದ ಶುಭಾಶಯಗಳು' ಎಂದು ಪ್ರೀತಿಯ ಮಡದಿಯ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳ ಪ್ರತಿಕ್ರಿಯೆ
ಅನಿಲ್ ಕಪೂರ್ ಈ ಪೋಸ್ಟ್ ಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಲೈಕ್ಸ್ ಮತ್ತು ಕಾಮೆಂಟ್ ಗಳ ಸುರಿಮಳೆಯೆ ಹರಿದುಬರುತ್ತಿದೆ. ಸುನೀತಾ ಕಪೂರ್ ಗೆ ಎಲ್ಲರೂ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ಜೋಯಾ ಅಖ್ತರ್, ಮಂದಿರಾ ಬೇಡಿ ಸೇರಿದಂತೆ ಅನೇಕರು ಈ ಪೋಸ್ಟ್ ಗೆ ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಕಳುಹಿಸಿದ್ದಾರೆ.
'ನನ್ನಿಂದ
ಸಾಕಷ್ಟು
ಹಣ
ಪಡೆದಿದ್ದೀಯ
ನೀನು'
ಕರೀನಾ
ಗೆ
ಅನಿಲ್
ಕಪೂರ್
ಟಾಂಗ್
Recommended Video

ಪತ್ನಿ ಸುನೀತರನ್ನು ಮೊದಲು ಭೇಟಿ ಮಾಡಿದ್ದು ಯಾವಾಗ?
ಈ ಹಿಂದೆ ಒಂದು ಸಂದರ್ಶನದಲ್ಲಿ ಅನಿಲ್ ಕಪೂರ್ ಪತ್ನಿ ಬಗ್ಗೆ ಮಾತನಾಡಿ, ನನ್ನ ಸ್ನೇಹಿತನೊಬ್ಬ ನನಗೆ ಕರೆ ಮಾಡಿ ತಮಾಷೆ ಮಾಡಲು ಸುನೀತಾಗೆ ನನ್ನ ನಂಬರ್ ಕೊಟ್ಟರು. ಆಗ ಮೊದಲ ಬಾರಿಗೆ ನಾನು ಅವಳೊಂದಿಗೆ ಮಾತನಾಡಿದ್ದು ಮತ್ತು ಅವಳ ಧ್ವನಿ ಕೇಳಿ ಪ್ರೀತಿಯಲ್ಲಿ ಬಿದ್ದೆ. ಬಳಿಕ ಒಂದು ಪಾರ್ಟಿಯಲ್ಲಿ ಭೇಟಿಯಾದೆವು. ಇಬ್ಬರು ಮಾತನಾಡಿದೆವು ನಂತರ ಸ್ನೇಹಿತರಾದೆವು' ಎಂದು ಪತ್ನಿಯ ಮೊದಲ ಭೇಟಿಯ ಬಗ್ಗೆ ಬಹಿರಂಗ ಪಡಿಸಿದ್ದರು.
ಅನಿಲ್ ಕಪೂರ್ ಮತ್ತು ಸುನೀತಾ ಇಬ್ಬರು 1984ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನ ಈ ಸುಂದರ ಜೋಡಿಗೆ ಸೋನಂ ಕಪೂರ್ ಸೇರಿದಂತೆ ಮೂವರು ಮಕ್ಕಳಿದ್ದಾರೆ.