For Quick Alerts
  ALLOW NOTIFICATIONS  
  For Daily Alerts

  ಅನಿಲ್ ಕಪೂರ್ ಇಲ್ಲದೆ ಹನಿಮೂನ್ ಗೆ ಹೋಗಿದ್ರಂತೆ ಪತ್ನಿ ಸುನೀತಾ.! ಯಾಕ್ಹೀಗೆ.?

  By Harshitha
  |

  ಇತ್ತೀಚೆಗಷ್ಟೇ ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ ನಟಿ ಸೋನಂ ಕಪೂರ್ ಮದುವೆ ಆದರು. ತಾವು ಇಷ್ಟ ಪಟ್ಟಿದ್ದ ಹುಡುಗ ಆನಂದ್ ಅಹುಜಾ ರನ್ನೇ ಸೋನಂ ಕಪೂರ್ ವಿವಾಹವಾದರು. ಆನಂದ್ ಅಹುಜಾ-ಸೋನಂ ಕಪೂರ್ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್.

  ಮಗಳ ಪ್ರೀತಿಗೆ ಕೊಂಚ ಕೂಡ ಅಡ್ಡಿ ಮಾಡದೆ, ಧಾಂ ಧೂಂ ಆಗಿ ಮದುವೆ ಮಾಡಿಕೊಟ್ಟರು ನಟ ಅನಿಲ್ ಕಪೂರ್. ಯಾಕಂದ್ರೆ, ಅನಿಲ್ ಕಪೂರ್ ರದ್ದೂ ಪ್ರೇಮ ವಿವಾಹವೇ.!

  ಸಂಗೀತ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ನವ ವಧು ಸೋನಂ ಕಪೂರ್ಸಂಗೀತ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ನವ ವಧು ಸೋನಂ ಕಪೂರ್

  ನಲವತ್ತೈದು ವರ್ಷಗಳ ಹಿಂದೆ ಸುನೀತಾ ಕಪೂರ್ ರನ್ನ ಭೇಟಿ ಆಗಿದ್ದ ಅನಿಲ್ ಕಪೂರ್, ಅವರನ್ನೇ ಪ್ರೀತಿಸಿ ಕೈಹಿಡಿದರು. ಹತ್ತು ವರ್ಷಗಳ ಕಾಲ ಪ್ರೀತಿಸಿದ್ದ ಅನಿಲ್ ಕಪೂರ್-ಸುನೀತಾ ಒಂದಿನ ಇದ್ದಕ್ಕಿದ್ದಂತೆ ಮದುವೆ ಆಗಲು ತೀರ್ಮಾನಿಸಿದರಂತೆ.

  ತಮ್ಮ ರೋಚಕ ಹಾಗೂ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನ ಅನಿಲ್ ಕಪೂರ್ ಬಾಯ್ಬಿಟ್ಟಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

  ಫೂಲ್ ಮಾಡಲು ಹೋಗಿ ಪರಿಚಯ ಆಯ್ತು

  ಫೂಲ್ ಮಾಡಲು ಹೋಗಿ ಪರಿಚಯ ಆಯ್ತು

  ''ಫೋನ್ ನಂಬರ್ ಕೊಟ್ಟು ನನ್ನನ್ನ ಫೂಲ್ ಮಾಡುವಂತೆ ಸುನೀತಾಗೆ ಸ್ನೇಹಿತರೊಬ್ಬರು ಹೇಳಿದ್ದರು. ಸುನೀತಾ ಹಾಗೆ ಫೋನ್ ಮಾಡಿದಾಗಲೇ, ನಾವಿಬ್ಬರು ಮೊಟ್ಟ ಮೊದಲ ಬಾರಿಗೆ ಮಾತನಾಡಿದ್ದು. ಸುನೀತಾ ಧ್ವನಿ ನನಗೆ ತುಂಬಾ ಇಷ್ಟ ಆಗಿತ್ತು'' - ಅನಿಲ್ ಕಪೂರ್, ನಟ

  ನೀರ್ಜಾಳ ಯಶಸ್ಸು: ಮಗಳ ಬಗ್ಗೆ ಅಪ್ಪ ಹೇಳಿದ್ದಾದರೂ ಏನುನೀರ್ಜಾಳ ಯಶಸ್ಸು: ಮಗಳ ಬಗ್ಗೆ ಅಪ್ಪ ಹೇಳಿದ್ದಾದರೂ ಏನು

  ಮುಖಾಮುಖಿ ಆಗಿದ್ದು ಯಾವಾಗ.?

  ಮುಖಾಮುಖಿ ಆಗಿದ್ದು ಯಾವಾಗ.?

  ''ಕೆಲವು ವಾರಗಳ ನಂತರ ಪಾರ್ಟಿಯಲ್ಲಿ ನನಗೆ ಸುನೀತಾ ರನ್ನ ಪರಿಚಯ ಮಾಡಿಕೊಡಲಾಯಿತು. ಬಳಿಕ ಒಳ್ಳೆಯ ಫ್ರೆಂಡ್ಸ್ ಆದ್ವಿ. ಅಷ್ಟೊತ್ತಿಗಾಗಲೇ ನಾನು ಓರ್ವ ಹುಡುಗಿಯನ್ನ ಇಷ್ಟ ಪಡುತ್ತಿದ್ದೆ. ಆ ಹುಡುಗಿ ಬಗ್ಗೆ ನಾನು ಸುನೀತಾ ಬಳಿ ಮಾತನಾಡುತ್ತಿದ್ದೆ. ಒಂದು ದಿನ ಇದ್ದಕ್ಕಿದ್ದ ಹಾಗೆ, ಆ ಹುಡುಗಿ ನನಗೆ ಕೈಕೊಟ್ಟಳು. ನನ್ನ ಹೃದಯ ಚೂರು ಚೂರಾಯಿತು. ಆಗಲೇ, ನನ್ನ-ಸುನೀತಾ ಸ್ನೇಹ ಇನ್ನಷ್ಟು ಗಟ್ಟಿಯಾಗಿದ್ದು'' - ಅನಿಲ್ ಕಪೂರ್, ನಟ

  ಚಿರಯುವಕ ಅನಿಲ್ ಕಪೂರ್ ಫಿಟ್‌ನೆಸ್ ರಹಸ್ಯ ಬಯಲುಚಿರಯುವಕ ಅನಿಲ್ ಕಪೂರ್ ಫಿಟ್‌ನೆಸ್ ರಹಸ್ಯ ಬಯಲು

  ಡೇಟಿಂಗ್ ಆರಂಭ

  ಡೇಟಿಂಗ್ ಆರಂಭ

  ''ಸಿನಿಮಾದಲ್ಲಿ ತೋರಿಸುವ ಹಾಗೆ, ನಾನು ಸುನೀತಾ ರನ್ನ ಪ್ರಪೋಸ್ ಮಾಡಲಿಲ್ಲ. ಆದ್ರೆ, ನಮ್ಮ ಅರಿವಿಗೆ ಬಾರದೇ ನಾವಿಬ್ಬರೂ ಡೇಟ್ ಮಾಡುತ್ತಿದ್ವಿ. ನಾನು ಹಾಗೂ ನನ್ನ ವೃತ್ತಿ ಬಗ್ಗೆ ಸುನೀತಾ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಸುನೀತಾ ಹೇಳಿ ಕೇಳಿ ಬ್ಯಾಂಕರ್ ಮಗಳು. ಮಾಡೆಲಿಂಗ್ ನಲ್ಲಿ ಮಿಂಚುತ್ತಿದ್ದರು. ಆದ್ರೆ, ನನ್ನ ಬಳಿ ದುಡ್ಡಿರಲಿಲ್ಲ'' - ಅನಿಲ್ ಕಪೂರ್, ನಟ

  ಆಗಿನ ಪರಿಸ್ಥಿತಿ

  ಆಗಿನ ಪರಿಸ್ಥಿತಿ

  ''ನಾನು ಸುನೀತಾ ರನ್ನ ಮೀಟ್ ಮಾಡಲು ಬಸ್ ನಲ್ಲಿ ಹೋಗಬೇಕಿತ್ತು. ಆದ್ರೆ, ''ಬಸ್ ನಲ್ಲಿ ಲೇಟ್ ಆಗುತ್ತೆ, ಟ್ಯಾಕ್ಸಿಯಲ್ಲಿ ಬನ್ನಿ.. ನಾನೇ ದುಡ್ಡು ಕೊಡುವೆ'' ಎಂದು ಸುನೀತಾ ಹೇಳ್ತಿದ್ಲು'' - ಅನಿಲ್ ಕಪೂರ್, ನಟ

  ಸುನೀತಾ ಒತ್ತಡ ಹಾಕಲಿಲ್ಲ

  ಸುನೀತಾ ಒತ್ತಡ ಹಾಕಲಿಲ್ಲ

  ''ನಾವಿಬ್ಬರು ಹತ್ತು ವರ್ಷಗಳ ಕಾಲ ಡೇಟ್ ಮಾಡಿದ್ವಿ. ಅಡುಗೆ ಮನೆಗೆ ಹೋಗಿ ಅಡುಗೆ ಮಾಡುವ ಮನಃಸ್ಥಿತಿ ಸುನೀತಾಗೆ ಇರಲಿಲ್ಲ. ಹೀಗಾಗಿ, ಮದುವೆ ಆಗುವಂತೆ ನಾನು ಆಕೆಯನ್ನ ಕೇಳುವ ಮುನ್ನ ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕು ಎಂಬುದು ನನಗೆ ಗೊತ್ತಿತ್ತು. ನನ್ನ ಬಳಿ ಕೆಲಸ ಇರಲಿಲ್ಲ ನಿಜ. ಆದ್ರೆ, ಆಕೆಯಿಂದ ಯಾವುದೇ ಒತ್ತಡ ಬರಲಿಲ್ಲ'' - ಅನಿಲ್ ಕಪೂರ್, ನಟ

  ಮದುವೆ ಆಗಿದ್ದು...

  ಮದುವೆ ಆಗಿದ್ದು...

  ''ಮೇರಿ ಜಂಗ್' ಚಿತ್ರದ ಮೂಲಕ ನನಗೆ ಬ್ರೇಕ್ ಸಿಕ್ತು. ಹೀಗಾಗಿ, ನನ್ನದೊಂದು ಮನೆ ಆಗುತ್ತೆ ಎಂಬ ಖಾತ್ರಿ ಆಯ್ತು. ಆಗಲೇ ಮದುವೆ ಆಗಲು ಮುಂದಾದೆ. ಸುನೀತಾಗೆ ಫೋನ್ ಮಾಡಿ, ''ನಾಳೆ ಮದುವೆ ಆಗೋಣ'' ಅಂತ ಹೇಳಿದೆ. ಮಾರನೇ ದಿನ ಹತ್ತು ಜನರ ಸಮ್ಮುಖದಲ್ಲಿ ನಮ್ಮಿಬ್ಬರ ಮದುವೆ ನಡೆದು ಹೋಯ್ತು'' - ಅನಿಲ್ ಕಪೂರ್, ನಟ

  ಪರ್ಫೆಕ್ಟ್ ಹೆಂಡತಿ

  ಪರ್ಫೆಕ್ಟ್ ಹೆಂಡತಿ

  ''ಮದುವೆ ಆದ ಮೂರು ದಿನಗಳ ಬಳಿಕ ನಾನು ಶೂಟಿಂಗ್ ಗೆ ಹೋದೆ. ಸುನೀತಾ ನನ್ನ ಬಿಟ್ಟು ವಿದೇಶಕ್ಕೆ ಹನಿಮೂನ್ ಗೆ ಹಾರಿದಳು. ನಾವಿಬ್ಬರೂ ನಮ್ಮ ಜೀವನವನ್ನ ಕಟ್ಟಿಕೊಂಡಿದ್ದೇವೆ. ಮೂವರು ಮಕ್ಕಳನ್ನು ಬೆಳೆಸಿದ್ದೇವೆ. ಕಷ್ಟ-ಸುಖವನ್ನ ಜೊತೆಯಾಗಿ ಹಂಚಿಕೊಂಡಿದ್ದೇವೆ. ನಾವಿಬ್ಬರೂ 45 ವರ್ಷಗಳಿಂದ ಜೊತೆಗಿದ್ದೇವೆ. ಸುನೀತಾ ಪರ್ಫೆಕ್ಟ್ ತಾಯಿ, ಪರ್ಫೆಕ್ಟ್ ಪತ್ನಿ'' ಎಂದಿದ್ದಾರೆ ನಟ ಅನಿಲ್ ಕಪೂರ್

  English summary
  Bollywood Actor Anil Kapoor reveals his love story with Sunita.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X