Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗಳಿಸಿದ್ದ ಗೌರವವನ್ನೆಲ್ಲಾ ಈ ಸಿನಿಮಾದಲ್ಲಿ ಪಣಕ್ಕಿಟ್ಟಿದ್ದೇನೆ: ಅನಿಲ್ ಕಪೂರ್
ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ 41 ವರ್ಷಗಳಾಗಿವೆ. ದಕ್ಷಿಣ ಭಾರತ ಸಿನಿಮಾರಂಗದಿಂದ ಸಿನಿಜೀವನ ಆರಂಭಿಸಿದ ಅನಿಲ್ ಕಪೂರ್ ಕನ್ನಡದಲ್ಲಿ 'ಪಲ್ಲವಿ ಅನುಪಲ್ಲವಿ' ಹೆಸರಿನ ಸುಂದರ ಸಿನಿಮಾದಲ್ಲಿ ನಟಿಸಿದ್ದರು.
ಆಸ್ಕರ್ ವಿಜೇತ 'ಸ್ಲಂ ಡಾಗ್ ಮಿಲೇನಿಯರ್ ಸಿನಿಮಾದಲ್ಲೂ ನಟಿಸಿರುವ ಅನಿಲ್ ಕಪೂರ್, ಇಷ್ಟು ವರ್ಷದ ಸುದೀರ್ಘ ಸಿನಿಪಯಣದಲ್ಲಿ ಸಾಕಷ್ಟು ಗೌರವ, ಖ್ಯಾತಿಯನ್ನು ಗಳಿಸಿದ್ದಾರೆ.
ಅವರ ನಟನೆಯ 'ಎಕೆ vs ಎಕೆ' ಹೆಸರಿನ ಸಿನಿಮಾ ನಿನ್ನೆಯಷ್ಟೆ (ಡಿಸೆಂಬರ್ 24) ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ಅನಿಲ್ ಕಪೂರ್ ಹೇಳಿರುವ ಪ್ರಕಾರ, ತಾವು ಇಷ್ಟು ವರ್ಷ ಸಿನಿಮಾರಂಗದಲ್ಲಿ ಗಳಿಸಿದ ಖ್ಯಾತಿ, ಗೌರವನ್ನೆಲ್ಲಾ ಈ ಸಿನಿಮಾದಲ್ಲಿ ಪಣಕ್ಕಿಟ್ಟಿದ್ದಾರಂತೆ ಅನಿಲ್ ಕಪೂರ್.
ಬಹಳ ಭಿನ್ನವಾದ ಕತೆ ಹೊಂದಿರುವ ಈ ಸಿನಿಮಾದಲ್ಲಿ ಅನಿಲ್ ಕಪೂರ್ ಸ್ವತಃ ಅನಿಲ್ ಕಪೂರ್ ಪಾತ್ರದಲ್ಲಿಯೇ ನಟಿಸಿದ್ದಾರೆ. ನಿರ್ದೇಶಕ ಅನುರಾಗ್ ಕಶ್ಯಪ್ ಅವರದ್ದೇ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾದಲ್ಲಿ ಅನುರಾಗ್ ಕಶ್ಯಪ್, ಅನಿಲ್ ಕಪೂರ್ ಮಗಳು, ನಟಿ ಸೋನಂ ಕಪೂರ್ ಅನ್ನು ಅಪಹರಣ ಮಾಡುತ್ತಾರೆ, ಆಕೆಯನ್ನು ಅನಿಲ್ ಕಪೂರ್ ಹೇಗೆ ಬಿಡಿಸಿಕೊಂಡು ಬರುತ್ತಾರೆ ಎಂಬುದೇ ಕತೆ. ಅನಿಲ್ ಕಪೂರ್ ನಟಿಸುತ್ತಿರುವ ಸಿನಿಮಾಗಳ ಸೆಟ್‌ನಲ್ಲಿ, ಅನಿಲ್ ಕಪೂರ್ ಮನೆ-ಕಚೇರಿಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.
ಸಿನಿಮಾದಲ್ಲಿ ನಿಜವಾದ ಅನಿಲ್ ಕಪೂರ್ ಪಾತ್ರವನ್ನೇ ಜನರು ನೋಡುತ್ತಿರುತ್ತಾರೆ, ಆಗ ಸಿನಿಮಾದ ನಟನ ವರ್ತನೆಯನ್ನೇ ನನ್ನ ಸ್ವಂತ ವರ್ತನೆ ಎಂದುಕೊಳ್ಳುವ ಅಪಾಯ ಇರುತ್ತದೆ ಆದರೆ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನಿ ಎಲ್ಲವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ನಿರ್ದೇಶಕನಾಗಿ ವಿಕ್ರಮಾದಿತ್ಯ ಮೋಟ್ವಾನಿ ಇಲ್ಲದೇ ಹೋಗಿದ್ದಿದ್ದರೆ ನಾನು ಈ ಸಿನಿಮಾ ಒಪ್ಪಿಕೊಳ್ಳುವ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ ಎಂದಿದ್ದಾರೆ ನಟ ಅನಿಲ್ ಕಪೂರ್. 'ಎಕೆ vs ಎಕೆ' ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.