For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ ರೇಸ್ ನಿಂದ ಹೊರಬಿದ್ದ ಬರ್ಫಿ

  By Mahesh
  |

  ಆಸ್ಕರ್ ಅಂಗಳಕ್ಕೆ ಭಾರತದ ಅಧಿಕೃತ ಚಿತ್ರವಾಗಿ ಎಂಟ್ರಿ ಪಡೆದಿದ್ದ ಬರ್ಫಿ, ರೇಸ್ ನಲ್ಲಿ ಮುನ್ನುಗ್ಗಲಾಗದೆ ಕುಸಿದಿದೆ.

  ನಿರ್ದೇಶಕ ಅನುರಾಗ್ ಬಸು ಅವರ ಬರ್ಫಿ ಚಿತ್ರ ಶ್ರೇಷ್ಠ ವಿದೇಶಿ ಚಿತ್ರಗಳ ವಿಭಾಗದಲಿ ಸ್ಪರ್ಧಿಸಿತ್ತು. ಆದರೆ, ಆಸ್ಕರ್ ನ ಅಂತಿಮ ಪಟ್ಟಿ ಹೊರ ಬೀಳುವ ಮೊದಲೇ ಬರ್ಫಿ ಚಿತ್ರಹೊರಬಿದ್ದಿದೆ.

  ಕಿವುಡ, ಮೂಗ ಯುವಕನಾಗಿ ರಣಬೀರ್ ಕಪೂರ್ ಹಾಗೂ ಬುದ್ಧಿಮಾಂದ್ಯ ಯುವತಿಯಾಗಿ ಪ್ರಿಯಾಂಕಾ ಛೋಪ್ರಾ ಪ್ರೇಮದ ಜೊತೆ ತ್ಯಾಗ ಜೀವಿಯಾಗಿ ಇಲಿಯಾನಾ ಕಾಣಿಸಿಕೊಂಡಿದ್ದರು.

  ಈ ರೀತಿ ವಿಭಿನ್ನ ಕಥಾಹಂದರವಿರುವ ಬರ್ಫಿ ಚಿತ್ರ ಅಧಿಕೃತವಾಗಿ ಭಾರತದಿಂದ ಸ್ಪರ್ಧಿಸಿ, ಅಕಾಡೆಮಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹೊಂದಿತ್ತು.

  ಈಗ, ಕಹಾನಿ, ಪಾನ್ ಸಿಂಗ್ ತೋಮಾರ್, ಏಳಾಂ ಅರಿವು, ಗ್ಯಾಂಗ್ಸ್ ಆಫ್ ವಸ್ಸೆಪುರ್,ಹೀರೋಯಿನ್' ಸೇರಿದಂತೆ ಒಟ್ಟು 20 ಚಿತ್ರಗಳು ಭಾರತದ ಅಧಿಕೃತ ಚಿತ್ರವಾಗಿ ಆಸ್ಕರ್ ಅಂಗಳ ಸೇರಲು ಪೈಪೋಟಿ ನಡೆಸಿದ್ದವು.

  ಅಂತಿಮವಾಗಿ ಬರ್ಫಿಯನ್ನು 16 ಜನರ ಆಯ್ಕೆ ಸಮಿತಿ ಹೊಂದಿದ್ದ ಫಿಲ್ಮ್ ಫೆಡರೇಷನ್ ನಾಮನಿರ್ದೇಶನ ಮಾಡಿತ್ತು.

  ಟಾಪ್ 9 ಪಟ್ಟಿಗೆ ಆಯ್ಕೆಯಾದ ಚಿತ್ರಗಳು ಹೀಗಿದೆ:
  * ಆಸ್ಟ್ರೀಯಾದ 'Amour'
  * ಕೆನಡಾದ 'War Witch'
  * ಚಿಲಿ ದೇಶದ 'No'
  * ಡೆನ್ಮಾರ್ಕ್ ನ A Royal Affair,
  * ಫ್ರಾನ್ಸ್ ದೇಶದ The Intouchables
  * ಐಸ್ ಲ್ಯಾಂಡ್ The Deep
  * ನಾರ್ವೆ ದೇಶದ Kon-Tiki
  * ರೋಮಾನಿಯಾದ Beyond the Hills
  * ಸ್ವಿಜರ್ಲೆಂಡ್ ನ 'Sister

  ಫೆಬ್ರವರಿ 24, 2013ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆಗೊಂಡಿದೆ, 5000ಕ್ಕೂ ಅಧಿಕ ಅಕಾಡೆಮಿ ಸದಸ್ಯರ ಮನಸ್ಸಿಗೆ ಚಿತ್ರ ಓಕೆ ಏನಿಸಿಬೇಕಿತ್ತು.

  ಆದರೆ, ವಿಶ್ವದ ಅನೇಕ ದೇಶಗಳ 71ಕ್ಕೂ ಅಧಿಕ ಚಿತ್ರಗಳು ಅಂತಿಮ 5 ಚಿತ್ರಗಳ ಪಟ್ಟಿ ಸೇರಲು ಪೈಪೋಟಿ ನಡೆಸಿತ್ತು. ಸದ್ಯಕ್ಕೆ 9 ಚಿತ್ರಗಳು ಪಟ್ಟಿಯಲ್ಲಿ ಉಳಿದಿದೆ. ಅಂತಿಮ ಸುತ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿ ಜ.10 ರಂದು ಪ್ರಕಟಿಸಲಾಗುತ್ತದೆ.

  English summary
  Anurag Basu's 'Barfi', is out of the Oscars race in the Foreign Language Film category for the 85th Academy Awards. nine shortlisted films announced. Barfi movie had exemplary performances by Ranbir Kapoor, Priyanka Chopra and Illeana D'Cruz.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X