For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಪ್ರಚಾರಕ್ಕೆ ಅಭಿಮಾನಿಗಳ ನಡುವೆ ಜಗಳ ಹಚ್ಚಿದ ನಟ-ನಿರ್ದೇಶಕ

  |

  ಸಿನಿಮಾ ಪ್ರಚಾರಕ್ಕಾಗಿ ಏನೆನೆಲ್ಲಾ ಮಾಡುತ್ತಾರೆ ನಟ-ನಟಿಯರ, ನಿರ್ದೇಶಕ-ನಿರ್ಮಾಪಕರು. ಸಿನಿಮಾಕ್ಕೆ ಪ್ರಚಾರ ಸಿಗಲೆಂದು ಬೇಕೆಂದೇ ವಿವಾದ ಎಬ್ಬಿಸುವುದು, ಸುಳ್ಳು ಮಾಹಿತಿ ಹರಡುವುದು, ಹಣ ಕೊಟ್ಟು ಲೈಕ್ಸ್ ಹೆಚ್ಚಿಸಿಕೊಳ್ಳುವುದು ಇನ್ನೂ ಹಲವು ಸ್ಟಂಟ್ಸ್‌ ಮಾಡುತ್ತಾರೆ.

  ಬಾಲಿವುಡ್‌ನಲ್ಲಿ ಬಹುಕಾಲದಿಂದ ಇರುವ ನಟ-ನಿರ್ದೇಶಕರೆ ಈ ರೀತಿ ಅಡ್ಡದಾರಿಗಳು ತುಳಿದಾಗ ಬೇಸರ ಎನಿಸುತ್ತದೆ. ದುರಾದೃಷ್ಟವಶಾತ್ ಹೀಗೆಯೇ ಆಗಿದೆ.

  ಹಿರಿಯ ನಟ ಹಾಗೂ ನಿರ್ದೇಶಕರುಗಳು ತಮ್ಮ ಸಿನಿಮಾದ ಪ್ರಚಾರಕ್ಕಾ ಇಬ್ಬರ ಅಭಿಮಾನಿಗಳ ನಡುವೆ ಜಗಳ ತಂದಿಟ್ಟಿದ್ದಾರೆ.

  ಅನುರಾಗ್ ಕಶ್ಯಪ್ ಹಾಗೂ ನಟ ಅನಿಲ್ ಕಪೂರ್ ನಿನ್ನೆ ಇದ್ದಕ್ಕಿದ್ದಂತೆ ಟ್ವಿಟ್ಟರ್‌ನಲ್ಲಿ ಜಗಳವಾಡಿಕೊಂಡಿದ್ದಾರೆ. ಇಬ್ಬರು ಪರಸ್ಪರರನ್ನು ವ್ಯಂಗ್ಯಮಾಡಿಕೊಂಡು, ಬೈದಾಡಿಕೊಂಡಿದ್ದಾರೆ. ಇದರಿಂದ ಈ ಇಬ್ಬರ ಅಭಿಮಾನಿಗಳು ಸಹ ಟ್ವಿಟ್ಟರ್‌ನಲ್ಲಿ ಜಗಳ ಪ್ರಾರಂಭಿಸಿದ್ದಾರೆ.

  ಆದರೆ ಕೊನೆಗೆ ನೋಡಿದರೆ, ಈ ಇಬ್ಬರ ಜೋಡಿಯಲ್ಲಿ ಸಿದ್ಧವಾಗುತ್ತಿರುವ 'ಎಕೆ v/s ಎಕೆ' ಸಿನಿಮಾದ ಪ್ರಚಾರಕ್ಕಾಗಿ ಈ ನಟರಿಬ್ಬರೂ ಟ್ವಿಟ್ಟರ್‌ನಲ್ಲಿ ಕಿತ್ತಾಡಿದ್ದಾರಂತೆ. ಈ ಇಬ್ಬರ ಕಿತ್ತಾಟ ನಿಜವೆಂದುಕೊಂಡು ಹಲವಾರು ಮಂದಿ ತಮ್ಮ ಮೆಚ್ಚಿನ ವ್ಯಕ್ತಿಯ ಪರವಾಗಿ ಟ್ವೀಟ್ ಮಾಡುತ್ತಿದ್ದರು. ಕೊನೆಗೆ ಎಲ್ಲರೂ ಫೂಲ್ ಆದರು.

  ಅದು ನನಗೆ ಬಹಳ ಮುಖ್ಯವಾದ ದಿನ ಎಂದ ಶಕೀಲ | Shakeela | Filmibeat Kannada

  'ನಿಮಗೆ ಆಸ್ಕರ್ ಸಿಗಲಿಲ್ಲವಲ್ಲ?' ಎಂದು ಅನುರಾಗ್ ಕಶ್ಯಪ್ ಅನಿಲ್ ಕಪೂರ್ ಅನ್ನು ಕಾಲೆಳೆದರೆ, 'ನೀನು ಆಸ್ಕರ್ ಸನಿಹಕ್ಕೆ ಬಂದಾಗ, ಸ್ಲಂ ಡಾಗ್ ಮಿಲೇನಿಯರ್‌ ಸಿನಿಮಾಕ್ಕೆ ಆಸ್ಕರ್ ಬಂದಿದ್ದನ್ನು ಟಿವಿಯಲ್ಲಿ ನೋಡಿದಾಗ ಮಾತ್ರ. ನಿನ್ನಿಂದ ಆಸ್ಕರ್ ಗೆಲ್ಲಲು ಸಾಧ್ಯವೇ ಇಲ್ಲ ಎಂದಿದ್ದಾರೆ.

  English summary
  Director Anurag Kashyap and Anil Kapoor engaged in a fake twitter war to promote their upcoming movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X