Don't Miss!
- Sports
ಭಾರತ vs ನ್ಯೂಜಿಲೆಂಡ್: 3ನೇ ಏಕದಿನ ಪಂದ್ಯ, ವೈಟ್ವಾಶ್ ಮೇಲೆ ಭಾರತದ ಕಣ್ಣು
- News
ಒಡಿಶಾ: ಭೂಮಿ ಕಳೆದುಕೊಂಡ ಗ್ರಾಮಸ್ಥರಿಗೆ ಪರಿಹಾರ ಸಿಗುವವರೆಗೆ ಜಿಲ್ಲಾಧಿಕಾರಿಗೆ ಸಂಬಳವಿಲ್ಲ ಎಂದ ಹೈಕೋರ್ಟ್
- Finance
America IT Company Layoffs: ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ: ಲಕ್ಷಾಂತರ ವೃತ್ತಿಪರರ ಬದುಕು ಅತಂತ್ರ
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ 2023ರ ಹೋಂಡಾ ಸಿಟಿ ಕಾರು
- Technology
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬ್ರೇಕಪ್ ಗಾಳಿಸುದ್ದಿ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಮಲೈಕಾ ಅರೋರಾ-ಅರ್ಜುನ್ ಕಪೂರ್: ಫೋಟೊ ವೈರಲ್
ಕಳೆದ ಕೆಲವು ದಿನಗಳಿಂದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ. ಇಬ್ಬರು ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. ಅದ್ಯಾವಾಗ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಲು ಶುರುವಾಯಿತೋ ಆಗ ಇಬ್ಬರೂ ಜೊತೆಗಿದ್ದ ಫೋಟೊವೊಂದನ್ನು ಶೇರ್ ಮಾಡಿ, ಬ್ರೇಕಪ್ ರೂಮರ್‌ಗೆ ಖಡಕ್ ಉತ್ತರ ನೀಡಿದ್ದರು.
Recommended Video
ಈ ರೂಮರ್ ಸುಳ್ಳು ಅಂತ ಸ್ವತ: ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಹೇಳಿದ್ದರೂ ಯಾರಿಗೂ ನಂಬಿಕೆ ಬಂದಿರಲಿಲ್ಲ. ಆದ್ರೀಗ ಬಾಲಿವುಡ್‌ನ ಈ ಹಾಟ್ ಜೋಡಿ ಬ್ರೇಕಪ್ ಸುದ್ದಿಯನ್ನು ಹಬ್ಬಿಸಿದವರಿಗೆಲ್ಲಾ ಸಖತ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಬ್ರೇಕಪ್ ಸುದ್ದಿ ಹಬ್ಬಿದ ಬಳಿಕ ಇದೇ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಮಲೈಕಾ ಮನೆ ಮುಂದೆ ಅರ್ಜುನ್ ಕಪೂರ್
ಮಲೈಕಾ ಹಾಗೂ ಅರ್ಜುನ್ ಕಪೂರ್ ಸಂಬಂಧದಲ್ಲಿ ಬಿರುಕು ಬಿಟ್ಟಿದೆ. ನಾಲ್ಕು ವರ್ಷ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಅರ್ಜುನ್ ಕಪೂರ್, ಮಲೈಕಾ ಅರೋರಾ ಮನೆಗೆ ಹೋಗದೆ ವಾರವೇ ಕಳೆದಿದೆ ಎಂದು ಸಾಕ್ಷಿಯನ್ನೂ ಒದಗಿಸಿದ್ದರು. ಈಗ ಮಲೈಕಾ ಅರೋರಾರನ್ನು ಹೊರಗಡೆ ಕರೆದುಕೊಂಡು ಹೋಗಲು ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಆಕೆಯ ಮನೆ ಮುಂದೆ ಕಾಯುತ್ತಿರುವ ಫೋಟೊಗಳು ವೈರಲ್ ಆಗಿವೆ.

ಮಲೈಕಾ ಹಾಗೂ ಅರ್ಜುನ್ ಔಟಿಂಗ್
ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ ಇಬ್ಬರೂ ನಿನ್ನೆ (ಭಾನುವಾರ) ಔಟಿಂಗ್ ಹೊರಟಿದ್ದರು. ಇಬ್ಬರೂ ಮಧ್ಯಾಹ್ನದ ಊಟಕ್ಕೆ ಹೊರಗೆ ಹೊರಟಿದ್ದರು ಎಂದು ಬಾಲಿವುಡ್ ಮೂಲಗಳು ವರದಿ ಮಾಡಿವೆ. ಮಲೈಕಾ ಹಾಗೂ ಅರ್ಜುನ್ ಕಪೂರ್ ಇಬ್ಬರ ಆರಾಗಿದ್ದು, ಈ ಫೋಟೊಗಳನ್ನು ನೋಡಿದವರಿಗೆ ಇಬ್ಬರ ಸಂಬಂಧದಲ್ಲಿ ಯಾವುದೇ ಬಿರುಕು ಇಲ್ಲವೆಂದು ಬಾಲಿವುಡ್ ಹೇಳುತ್ತಿದೆ.

ಬಾಯ್‌ಫ್ರೆಂಡ್ ಜೊತೆ ಮಲೈಕಾ ಹಾಟ್ ಲುಕ್
ಮಲೈಕಾ ಅರೋರಾ ಮನೆಯಿಂದ ಹೊರಬೀಳುತ್ತಿದ್ದಾರೆ ಅಂದರೆ, ಅವರ ಕಾಸ್ಟೂಮ್ ಬಗ್ಗೆ ಎಲ್ಲರೂ ಗಮನ ಹರಿಸುತ್ತಾರೆ. ಸಿಕ್ಕಾ ಪಟ್ಟೆ ಹಾಟ್ ಡ್ರೆಸ್‌ಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಅರ್ಜುನ್ ಜೊತೆ ಹೊರಗೆ ಹೊರಟಿದ್ದ ಮಲೈಕಾ ಅರೋರಾ, ಲೇಯರ್ಸ್ ಇರುವ ವೈಟ್ ಶಾರ್ಟ್ ಡ್ರೆಸ್ ತೊಟ್ಟಿದ್ದರು. ಅದಕ್ಕೆ ಬಲೂನ್ ಸ್ಲೀವ್ಸ್ ಇತ್ತು. ಕಪ್ಪು ಬಣ್ಣದ ಹೈ ಹೀಲ್ಡ್ ಬೂಟ್ಸ್ ಧರಿಸಿದ್ದರು. ಮಲೈಕಾ ಪ್ರತಿದಿನ ಜಿಮ್‌ಗಾಗಿ ಹೊರಗೆ ಬರುತ್ತಾರೆ. ಇಲ್ಲವೆ ತಮ್ಮ ಪ್ರೀತಿಯ ಶ್ವಾನವನ್ನು ವಾಕಿಂಗ್ ಕರೆದುಕೊಂಡು ಬರುತ್ತಾರೆ. ಆದರೆ, ಕಳೆದೊಂದು ವಾರದಿಂದ ಹೊರಗೆ ಬಂದಿರಲಿಲ್ಲ. ಹೀಗಾಗಿ ಬ್ರೇಕಪ್ ರೂಮರ್ ಹಬ್ಬಿಸಿದ್ದರು.

25 ವರ್ಷಕ್ಕೆ ಬದುಕು ಮುಗಿಯುವುದಿಲ್ಲ
ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಲವ್ ಸ್ಟೋರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಹಬ್ಬಿದಾಗ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. "40ನೇ ವಯಸ್ಸಿನಲ್ಲೂ ಪ್ರೀತಿ ಹುಡುಕುವುದು ಸಾಮಾನ್ಯ ಎನ್ನುವಂತಾಗಬೇಕು. 30ರ ವಯಸ್ಸಿನಲ್ಲಿ ಕನಸುಗಳನ್ನು ಚೇಸ್ ಮಾಡುವುದು ಸಾಮಾನ್ಯ ಆಗಬೇಕು. 50ನೇ ವಯಸ್ಸಿನಲ್ಲೂ ನಮ್ಮನ್ನು ನಾವು ಹುಡುಕಿಕೊಂಡು ಬದುಕಿಗೆ ಒಂದು ಉದ್ದೇಶ ಹುಡುಕುವಂತಾಗ ಬೇಕು. ಬದುಕು 25 ವರ್ಷಕ್ಕೆ ಮುಗಿದು ಹೋಯ್ತು ಅಂತ ಯೋಚಿಸುವುದನ್ನು ನಿಲ್ಲಿಸಿ." ಎಂದು ಮಲೈಕಾ ಬರೆದುಕೊಂಡಿದ್ದರು.