ಅರ್ಜುನ್ ಕಪೂರ್ ಬರ್ತ್‌ಡೇ: ಮಲೈಕಾ ಅರೋರಾ ಜೊತೆ 'ಪ್ಯಾರಿಸ್' ಪ್ರಣಯ!

ಬಾಲಿವುಡ್‌ನ ಕ್ಯೂಟ್ ಜೋಡಿಯಲ್ಲೊಂದು ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ. ಈ ಜೋಡಿ ವಿಶೇಷ ಸಂದರ್ಭಗಳಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತವೆ. ಸದ್ಯ ಈ ಜೋಡಿ ಈಗ ಪ್ಯಾರಿಸ್‌ನಲ್ಲಿ ಎಂಜಾಯ್ ಮಾಡುತ್ತಿದೆ. ಅಂದ್ಹಾಗೆ (ಜೂನ್ 26) ರಂದು ಅರ್ಜುನ್ ಕಪೂರ್ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭವನ್ನು ಸೆಲೆಬ್ರೆಟ್ ಮಾಡುವುದಕ್ಕಾಗಿಯೇ ಪ್ಯಾರಿಸ್‌ಗೆ ಹಾರಿದೆ ಈ ಜೋಡಿ.

ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಇಬ್ಬರೂ ಒಟ್ಟಿಗೆ ಸುತ್ತಾಡೋದು ಇದೇ ಮೊದಲೇನಲ್ಲ. ಈ ಹಿಂದೆ ಮಾಲ್ಡೀವ್ಸ್‌ ಸೇರಿದಂತೆ ಬೇರೆ ಬೇರೆ ಕಡೆ ಟ್ರಿಪ್‌ಗೆ ಹೋಗಿದ್ದರು. ಸಿನಿಮಾದಿಂದ ಬಿಡುವು ಮಾಡಿಕೊಂಡು ತನ್ನ ಗೆಳತಿಯನ್ನು ಕರೆದುಕೊಂಡು ಯುರೋಪ್ ಸುತ್ತಾಡುತ್ತಿದ್ದಾರೆ. ಆ ಫೋಟೊ ಹಾಗೂ ವಿಡಿಯೋವನ್ನು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅರ್ಜುನ್ ಮಲೈಕಾ ಪ್ಯಾರಿಸ್ ಪ್ರಣಯ!

ಅರ್ಜುನ್ ಮಲೈಕಾ ಪ್ಯಾರಿಸ್ ಪ್ರಣಯ!

ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಇಬ್ಬರೂ ಪ್ಯಾರಿಸ್‌ಗೆ ಹಾರಿದ್ದಾರೆ. ಅರ್ಜುನ್ ಕಪೂರ್ ಬರ್ತ್‌ಡೇಯನ್ನು ಆಚರಣೆ ಮಾಡಲೆಂದೇ ಮಲೈಕಾ ಅರೋರಾ ಪ್ಯಾರಿಸ್‌ಗೆ ತೆರಳಿದ್ದಾರೆ. ಇಬ್ಬರೂ ತಮ್ಮ ಸೆಲ್ಫಿ ಫೋಟೊವನ್ನು ಶೇರ್ ಮಾಡಿಕೊಂಡಿದ್ದು, ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ವಿಶೇಷ ಅಂದರೆ, ಈ ಫೋಟೊದಲ್ಲಿ ಐಫೆಲ್ ಟವರ್‌ ಕೂಡ ಕಾಣಿಸುತ್ತಿದ್ದು, ಅದರಿಂದಲೇ " ಐಫೆಲ್ ಚೆನ್ನಾಗಿದೆ.. ನಾನೂ ಕೂಡ ಎಂದು ತಿಳಿದಿದೆ." ಎಂದು ಬರೆದುಕೊಂಡಿದ್ದಾರೆ.

ಮಲೈಕಾ ಅರೋರಾರಿಂದ ವಿಡಿಯೋ ಶೇರ್

ಮಲೈಕಾ ಅರೋರಾ ಕೂಡ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಾಗೂ ಫೋಟೊಗಳನ್ನು ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಅರ್ಜುನ್ ಕಪೂರ್‌ಗೆ ಕೇಕ್ ತಿನ್ನಿಸುತ್ತಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಕೂತಿರುವ ಪೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೇ " ನನ್ನ ಲವ್‌ಗೆ ವಿಶ್ ಮಾಡಿ.. ನಿನ್ನ ಎಲ್ಲಾ ಆಸೆ ಹಾಗೂ ಕನಸುಗಳು ನನಸಾಗಲಿ.. ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಮಲೈಕಾದಿಂದ ನಾನು ಬದಲಾದೆ

ಮಲೈಕಾದಿಂದ ನಾನು ಬದಲಾದೆ

ಈ ಹಿಂದೆ ನೀಡಿದ ಅರ್ಜುನ್ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಲೈಕಾರನ್ನು ಹಾಡಿಹೊಗಳಿದ್ದರು. "ಒಬ್ಬ ವ್ಯಕ್ತಿಯಾಗಿ ನನ್ನ ಬಗ್ಗೆ ನಾನು ನಂಬಲು ಮಲೈಕಾ ತುಂಬಾನೇ ಸಹಾಯ ಮಾಡಿದ್ದಾಳೆ. ನಾನು ಯಾವಾಗೂ ನನ್ನ ಬಗ್ಗೆ ನಂಬಿಕೆ ಇಟ್ಟುಕೊಂಡವನು. ಆದರೆ ಮಲೈಕಾ ನನ್ನ ಕಷ್ಟದ ಕ್ಷಣದಲ್ಲೂ ಹಾಗೇ ಇರಲು ಸಹಾಯ ಮಾಡಿದಳು." ಎಂದು ಅರ್ಜುನ್ ಕಪೂರ್ ಹೇಳಿದ್ದರು.

ಸಿನಿಮಾಗಳಲ್ಲಿ ಅರ್ಜುನ್ ಫುಲ್ ಬ್ಯುಸಿ

ಸಿನಿಮಾಗಳಲ್ಲಿ ಅರ್ಜುನ್ ಫುಲ್ ಬ್ಯುಸಿ

ಅರ್ಜುನ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಮೋಹಿತ್ ಸೂರಿ ನಿರ್ದೇಶಿಸುತ್ತಿರುವ ಬಹು ನಿರೀಕ್ಷೆಯ ಸಿನಿಮಾ 'ಏಕ್ ವಿಲನ್ ರಿಟರ್ನ್ಸ್‌' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆಸ್ಮಾನ್ ಭಾರದ್ವಾಜ್ ನಟನೆಯ 'ಕುಟ್ಟಿ' ಹಾಗೂ ಅಜಯ್ ಬೆಹಲ್ ನಿರ್ದೇಶಿಸುತ್ತಿರುವ 'ಲೇಡಿ ಕಿಲ್ಲರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Arjun Kapoor Birthday: Actor Celebrated in Paris With His Ladylove Malaika Arora, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X