Don't Miss!
- News
ವಂಚನೆ ಪ್ರಕರಣ: ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಸುಕೇಶ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಲೈಕಾ ಅರೋರ, ಅರ್ಜುನ್ ಕಪೂರ್ ಬ್ರೇಕಪ್ : ಗಾಸಿಪ್‌ಗೆ ಬ್ರೇಕ್ ಹಾಕಿದ ಅರ್ಜುನ್ ಕಪೂರ್!
ಬಾಲಿವುಡ್‌ನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿತ್ತು, ನಟಿ ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ಬ್ರೇಕಪ್ ಸುದ್ದಿ. ಹಲವು ವರ್ಷಗಳಿಂದ ಅನ್ಯೋನ್ಯವಾಗಿ ಜೊತೆಗೆ ಇದ್ದ ಈ ಜೋಡಿ ಮಧ್ಯೆ ಬ್ರೇಪಕ್ ಆಗಿದೆ ಎನ್ನುವ ಸುದ್ದಿ ಹಬ್ಬಿತು. ಸುದ್ದಿ ಜೋರಾಗುತ್ತಲೆ ಇದಕ್ಕೆ ನಟ ಅರ್ಜುನ್ ಕಪೂರ್ ಪೂರ್ಣ ವಿರಾಮ ಇಟ್ಟಿದ್ದಾರೆ.
ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ಲವ್ವಿ-ಡವ್ವಿ ಸಿಕ್ಕಾಪಟ್ಟೆ ಫೇಮಸ್. ಇವರ ಪ್ರೇಮ್ ಕಹಾನಿ ಪುಟ್ಟ ಮಕ್ಕಳಿಗೂ ಗೊತ್ತು. ಇವರ ಲವ್ ಸ್ಟೋರಿಯೇ ಒಂದು ರೀತಿ ವಿಭಿನ್ನ. ಅರ್ಜುನ್ ಕಪೂರ್ ವಯಸ್ಸಿನಲ್ಲಿ ಮಲೈಕಾಗಿಂತಲೂ ತುಂಬಾ ಚಿಕ್ಕವರು. ಹಾಗಾಗಿ ಇದೇ ವಿಚಾರಕ್ಕೆ ಇವರು ಟ್ರೋಲ್ ಆಗಿದ್ದು, ಸುದ್ದಿ ಆಗಿದ್ದು ಹೆಚ್ಚು. ಆದರೆ ಎಲ್ಲದಕ್ಕಿಂತಲೂ ತಮ್ಮ ನಡುವಿನ ಪ್ರೇಮವೇ ಶ್ರೇಷ್ಠ ಎನ್ನುವಂತೆ ಈ ಜೋಡಿ ಬಿಂಬಿಸಿತ್ತು.
ಇವರು ಬಾಲಿವುಡ್‌ನ ಅಮರ ಪ್ರೇಮಿಗಳು ಎನ್ನುವ ಮಟ್ಟಿಗೆ ಇಬ್ಬರೂ ಪ್ರೀತಿಯ ಅಮಲಿನಲ್ಲಿ ಮಿಂದೆದ್ದಿದ್ದಾರೆ. ಆದರೆ ಇಂಥ ಪ್ರೇಮದ ಬಗ್ಗೆ ಗಾಸಿಪ್ ಹಬ್ಬಿತ್ತು. ಈ ಬಗ್ಗೆ ಮತ್ತಷ್ಟು ಗಾಸಿಪ್ ಹೆಚ್ಚಾಗಂತೆ ಅರ್ಜುನ್ ಕಪೂರ್ ಕ್ರಮ ತೆಗೆದುಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅರ್ಜುನ್ ಕಪೂರ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಪೋಸ್ಟ್ ಹಂಚಿಕೊಂಡು ಗಾಸಿಪ್‌ಗೆ ಬ್ರೇಕ್ !
ಮಲೈಕಾ ಮತ್ತು ಅರ್ಜುನ್ ಕಪೂರ್ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಲೇ, ನಟ ಅರ್ಜುನ್ ಕಪೂರ್ ಎಚ್ಚೆತ್ತುಕೊಂಡಿದ್ದಾರೆ. ಇದು ಕೇವಲ ಗಾಸಿಪ್ ಎನ್ನುವುದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಮಚಿಕೊಳ್ಳುವ ಮೂಲಕ ಸ್ಪಷ್ಟ ಪಡಿಸಿದ್ದಾರೆ. ಮಲೈಕಾ ಜೊತೆಗೆ ಇರುವ ಪೋಸ್ಟ್ ಹಂಚಿಕೊಂಡ ಅರ್ಜುನ್ ಕಪೂರ್ " ಬೇಸರದ ಗಾಳಿ ಸುದ್ದಿಗಳಿಗೆ ಇಲ್ಲಿ ಅವಕಾಶ ಇಲ್ಲ. ಸೇವ್ ಆಗಿ ಇರಿ, ಎಲ್ಲರಿಗೂ ಒಳ್ಳೆಯದನ್ನೇ ಬಯಸಿ, ಲವ್ ಯು ಆಲ್" ಎಂದು ಬರೆದು ಕೊಂಡಿದ್ದಾರೆ.

ಬ್ರೇಕಪ್ ಗಾಸಿಪ್ ಸುದ್ದಿ ಹಬ್ಬಿದ್ದು ಹೇಗೆ!
ನಟಿ ಮಲೈಕಾ ಅರೋರ ಇತ್ತೀಚೆಗೆ ಮನೆಯಿಂದ ಹೊರ ಬಂದಿಲ್ಲವಂತೆ. ಇದು ಅವರ ಬ್ರೇಕಪ್ ಗಾಸಿಪ್‌ಗೆ ಕಾರಣ ಆಗಿದೆ. ಮಲೈಕಾ ಸುಮಾರು ಆರು ದಿನಗಳಿಂದ ಬಿಟ್ಟು ಹೊರಗೇ ಬಂದಿಲ್ಲ. ಅಷ್ಟೇ ಅಲ್ಲಾ ಆಕೆ ಸದ್ಯ ಅತ್ಯಂತ ಬೇಸರದಲ್ಲಿ ಇದ್ದಾಳಂತೆ. ಹಾಗಾಗಿ ಯಾರ ಜೊತೆಗೂ ಮಾತನಾಡು ಬಯಸುತ್ತಿಲ್ಲವಂತೆ. ಇನ್ನು ಮಾತಿಗೆ ಮುನ್ನ ಅರ್ಜುನ್ ಕಪೂರ್ ಜೊತೆಗೆ ಕಾಣಿಸಿಕೊಳ್ಳುವ ಈಕೆ ಆತನಿಂದ ದೂರ ಉಳಿದು ಬಿಟ್ಟಿದ್ದಾಳಂತೆ. ಎನ್ನುವ ವಿಚಾರ ಇವರ ಬಗ್ಗೆ ಬ್ರೇಕಪ್ ಗಾಸಿಪ್ ಹಬ್ಬಲು ಇದು ಒಂದು ಕಾರಣವಾಗಿದೆ.

ಮಲೈಕಾಳನ್ನು ಪ್ರೇಮಿ ಅರ್ಜುನ್ ಕಪೂರ್ ಭೇಟಿ ಆಗಲಿಲ್ಲವಂತೆ?
ಇನ್ನು ಅರ್ಜುನ್ ಕಪೂರ್ ಮಲೈಕಾಳನ್ನು ಕೆಲವು ದಿನಗಳಿಂದ ಭೇಟಿ ಮಾಡದೇ ಇರುವುದು ಅವರ ಬ್ರೇಕಪ್ ಗಾಸಿಪ್‌ಗೆ ಕಾರಣ ಆಗಿದೆ ಎಂದು ಬಾಲಿವುಡ್‌ನಲ್ಲಿ ವರದಿ ಆಗಿದೆ. ಅರ್ಜುನ್ ಕಪೂರ್ ಮಲೈಕಾ ಮನೆ ಬಳಿ ಇರುವ ತನ್ನ ಸಹೋದರಿ ರಿಯಾ ಕಪೂರ್ ಮನೆಗೆ ಭೇಟಿ ನೀಡಿದ್ದಾರೆ. ಸಹೋದರಿ ಮನೆಗೆ ಊಟಕ್ಕಾಗಿ ಅಲ್ಲು ಅರ್ಜುನ್ ಹೋಗಿದ್ದಾರೆ. ಆದರೆ ಅಲ್ಲೇ ಪಕ್ಕದಲ್ಲಿ ಇರುವ ಮಲೈಕಾ ಮನೆಗೆ ಭೇಟಿ ನೀಡಿಲ್ಲ. ಇತ್ತ ಅರ್ಜುನ್ ಕುಟುಂಬದೊಂದಿಗೆ ಚೆನ್ನಾಗಿ ಇರುವ ಮೈಕಾ ಔತಣ ಕೂಟದಲ್ಲಿ ಭಾಗಿ ಆಗಿಲ್ಲ. ಎನ್ನುವ ವಿಚಾರ ಇವರು ಬೇರೆ ಆಗಿದ್ದಾರೆ ಎನ್ನುವ ಸುದ್ದಿಯನ್ನು ಹುಟ್ಟು ಹಾಕಿತು.

ಎಷ್ಟೇ ಟ್ರೋಲ್ ಆದರು ತಲೆ ಕೆಡಿಸಿ ಕೊಳ್ಳದ ಜೋಡಿ!
ಅರ್ಜುನ್ ಕಪೂರ್ ಮತ್ತು ಮಲೈಕಾ ಇಬ್ಬರು ಒಟ್ಟಾಗಿ ಹೊಸ ವರ್ಷವನ್ನು ಆಚರಿಸಿದ್ದರು. ತಮ್ಮ ರೊಮ್ಯಾಂಟಿಕ್ ಡೇಟಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದರು. ಬಳಿಕ ಅರ್ಜುನ್ ಕಪೂರ್‌ಗೆ ಮಾಧ್ಯಮದಲ್ಲಿ ಪ್ರಶ್ನೆ ಒಂದು ಎದುರಾಗಿತ್ತು. ಮಲೈಕಾ ಮತ್ತು ಅರ್ಜುನ್ ವಯಸ್ಸಿನ ಅಂತರದ ಬಗ್ಗೆ ಟ್ರೋಲ್ ಮಾಡುವವರಿಗೆ ಏನು ಹೇಳುತ್ತಿರಿ ಎಂದು ಕೇಳಲಾಗಿತ್ತು. ಆಗ ಈ "ಈ ಟ್ರೋಲ್ ಎಲ್ಲಾ ಸುಳ್ಳು, ಅವರೇ ನಮ್ಮ ಜೊತೆಗೆ ಸೆಲ್ಫಿ ಬೇಕು ಎಂದು ಬರುತ್ತಾರೆ". ಎಂದಿದ್ದರು ಅರ್ಜುನ್ ಕಪೂರ್.

ಅರ್ಬಾಜ್ ಖಾನ್‌ರಿಂದ ದೂರಾಗಿ ಅರ್ಜುನ್ ಕಪೂರ್‌ಗೆ ಹತ್ತಿರ ಆಗಿರುವ ನಟಿ!
ಸದ್ಯ ಅರ್ಜುನ್ ಮತ್ತು ಮಲೈಕಾ ದೂರಾಗಿದ್ದಾರೆ ಎನ್ನುವ ಸುದ್ದಿಗೆ ಸದ್ಯ ಬ್ರೇಕ್ ಬಿದ್ದಿದೆ. ಇದು ನಿಜವೋ ಅಥವಾ ಬರೀ ಗಾಳಿ ಸುದ್ದಿಯೋ ಎನ್ನುವ ಬಗ್ಗೆ ಅರ್ಜುನ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ. ಮಲೈಕಾ ಅರ್ಜುನ್ ಕಪೂರ್‌ಗಾಗಿ ಮೊದಲ ಪತಿ ಅರ್ಬಾಜ್ ಖಾನ್‌ರಿಂದ 2017ರಲ್ಲಿ ದೂರಾಗಿದ್ದಾರೆ. ನಂತರ ಅರ್ಜುನ್ ಕಪೂರ್ ಜೊತೆಗಿನ ಸಬಂಧವನ್ನು ಅಧಿಕೃತ ಮಾಡಿದ್ದರು. ಇಬ್ಬರ ನಡುವೆ 2016 ರಿಂದ ಪ್ರೀತಿ ಇತ್ತು ಎನ್ನಲಾಗಿದೆ.