»   » ನಟಿ ರಾಖಿ ಸಾವಂತ್ ವಿರುದ್ಧ ಅರೆಸ್ಟ್ ವಾರೆಂಟ್

ನಟಿ ರಾಖಿ ಸಾವಂತ್ ವಿರುದ್ಧ ಅರೆಸ್ಟ್ ವಾರೆಂಟ್

Posted By:
Subscribe to Filmibeat Kannada

ವಿವಾದಾತ್ಮಕ ಹೇಳಿಕೆಗಳ ಮೂಲಕ ಒಂದಲ್ಲ ಒಂದು ಸುದ್ದಿಯಲ್ಲಿರುವ ನಟಿ ರಾಖಿ ಸಾವಂತ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಮಹರ್ಷಿ ವಾಲ್ಮೀಕಿಯವರ ಕುರಿತಾಗಿ ರಾಖಿ ಸಾವಂತ್ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದ ಹಿನ್ನಲೆಯಲ್ಲಿ ಲೂಧಿಯಾನ ಕೋರ್ಟ್ ರಾಖಿ ಸಾವಂತ್ ಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಕಳೆದ ವರ್ಷ ಖಾಸಗಿ ಟಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಖಿ ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದು ವಾಲ್ಮೀಕಿ ಸಮುದಾಯ ಮತ್ತು ಅನುಯಾಯಿಗಳ ಭಾವನೆಗೆ ಧಕ್ಕೆ ತಂದಿದೆ ಎಂದು ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.[ಬಟ್ಟೆ ಬದಲಿಸುತ್ತಿದ್ದ ಬಾಲಿವುಡ್ ನಟಿಯ MMS ವಿಡಿಯೋ ಲೀಕ್!]

Arrest warrant issued against rakhi sawant

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಖಿ ಸಾವಂತ್ ಖುದ್ದು ಕೋರ್ಟ್ ಗೆ ಹಾಜರಾಗಬೇಕು ಎಂದು ಹಲವು ಬಾರಿ ನೋಟಿಸ್ ಜಾರಿಯಾದರೂ ಕೂಡ ರಾಖಿ ಸಾವಂತ್ ಕೋರ್ಟ್ ಗೆ ಹಾಜರಾಗಿರಲಿಲ್ಲ. ಹೀಗಾಗಿ, ಈಗ ಲೂಧಿಯಾನ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.[ನಟಿ ರಾಖಿ ಸಾವಂತ್ ಕೈಗೆ ಹಸಿಮೆಣಸಿನಕಾಯೇ ಗತಿ]

ಇನ್ನು ಆರೆಸ್ಟ್ ವಾರೆಂಟ್ ಜೊತೆಗೆ ರಾಖಿ ಸಾವಂತ್ ಬಂಧನಕ್ಕೆ ಪೊಲೀಸರು ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.

English summary
Arrest warrant issued against Rakhi Sawant for hurting sentiments of Valmiki community

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada