For Quick Alerts
  ALLOW NOTIFICATIONS  
  For Daily Alerts

  ಕತ್ರಿನಾ ಕೈಫ್-ವಿಕ್ಕಿ ಕೌಶಲ್ ವಿವಾಹ: ದಾಂಪತ್ಯ ಹೇಗಿರಲಿದೆ ಭವಿಷ್ಯ ನುಡಿದ ಜ್ಯೋತಿಷಿ

  |

  ಬಾಲಿವುಡ್‌ನಲ್ಲಿ ಸದ್ಯಕ್ಕೆ ಎರಡು ಮದುವೆಗಳು ಬಹಳ ಗಮನ ಸೆಳೆದಿವೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್‌ರ ಮದುವೆ ಹಾಗೂ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರುಗಳ ಮದುವೆ.

  ಆಲಿಯಾ ಭಟ್-ರಣಬೀರ್ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕಳೆದೆರಡು ವರ್ಷಗಳಿಂದಲೂ ಇತ್ತು. ಕೊರೊನಾ ಹಾಗೂ ಹಠಾತ್ತನೆ ನಿಧನರಾದ ರಣಬೀರ್ ತಂದೆ ರಿಶಿ ಕಪೂರ್ ಕಾರಣದಿಂದ ಮದುವೆ ತಡವಾಗುತ್ತಾ ಬಂತು.

  ಆದರೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಮದುವೆಯನ್ನು ಹೆಚ್ಚಿನ ಜನ ನಿರೀಕ್ಷಿಸಿರಲಿಲ್ಲ. ಈ ಜೋಡಿ ಇತರೆ ಕೆಲವು ಬಾಲಿವುಡ್‌ ನಟ-ನಟಿಯರಂತೆ ಡೇಟಿಂಗ್, ಲಿವಿಂಗ್‌ಟು ಗೆದರ್‌ನಲ್ಲಿದ್ದಾರಷ್ಟೆ ಇಬ್ಬರೂ ಮದುವೆಯೆಂಬ ಗಂಭೀರ ಒಡಂಬಡಿಕೆಗೆ ಒಳಗಾಗುತ್ತಾರೆಂದು ನಿರೀಕ್ಷಿಸಿರಲಿಲ್ಲ. ಆದರೆ ನಿರೀಕ್ಷೆ ಸುಳ್ಳು ಮಾಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹವಾಗುತ್ತಿದ್ದಾರೆ.

  ಡಿಸೆಂಬರ್ 07 ರಿಂದ 9 ರವರಗೆ ರಾಜಸ್ಥಾನದ ಜೈಪುರದಲ್ಲಿ ನಡೆವ ಅದ್ಧೂರಿ ಸಮಾರಂಭದಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ವಿವಾಹವಾಗಲಿದ್ದಾರೆ. ಈ ಜೋಡಿಯ ದಾಂಪತ್ಯ ಮುಂದೆ ಹೇಗಿರಲಿದೆ ಎಂದು ರಾಜಸ್ಥಾನದ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

  ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ದಾಂಪತ್ಯದ ಬಗ್ಗೆ ಧನಾತ್ಮಕ ಭವಿಷ್ಯವನ್ನೇ ನುಡಿದಿದ್ದಾರೆ ಪಂಡಿತ್ ಜಗನ್ನಾಥ್ ಗುರುಜಿ. ಅವರು ಹೇಳಿರುವಂತೆ ಈ ಜೋಡಿ ಪರಸ್ಪರ ಖುಷಿಯಾಗಿ ಜೀವನ ನಡೆಸಲಿದ್ದಾರೆ. ಅದು ಮಾತ್ರವೇ ಮದುವೆಯ ಬಳಿಕ ಇಬ್ಬರೂ ವೃತ್ತಿ ಜೀವನದಲ್ಲಿ ಸಾಕಷ್ಟು ಏಳಿಗೆಯನ್ನು ಕಾಣಲಿದ್ದಾರೆ.

  ಇಬ್ಬರೂ ಪರಸ್ಪರರನ್ನು ಗೌರವಿಸುವ ವ್ಯಕ್ತಿತ್ವವುಳ್ಳವರು. ಜೊತೆಗೆ ತಮ್ಮಿಬ್ಬರ ಖಾಸಗಿತನಗಳ ಬಗ್ಗೆಯೂ ಪ್ರೀತಿಯುಳ್ಳವರು. ಹಾಗಾಗಿ ಈಗ ಇಬ್ಬರ ಸಂಬಂಧ ಮತ್ತು ಮದುವೆಯ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಖುಷಿ ತಂದಿಲ್ಲ ಬದಲಿಗೆ ಮುಜುಗರ ತಂದಿವೆ ಎಂದಿದ್ದಾರೆ.

  ಮದುವೆಯ ಬಳಿಕವೂ ನಟಿ ಕತ್ರಿನಾ ಕೈಫ್ ನಟನೆ ಮುಂದುವರೆಸುತ್ತಾರೆ ಆದರೆ ಆಗ ಹೆಚ್ಚು ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗೂ ಅದೇ ಕಾರಣಕ್ಕೆ ಕೆಲವು ಅತ್ಯುತ್ತಮ ಸಿನಿಮಾಗಳಲ್ಲಿ ಕತ್ರಿನಾ ನಟಿಸುತ್ತಾರೆ ಎಂದಿದ್ದಾರೆ ಜ್ಯೋತಿಷಿ.

  ಇನ್ನು ವಿಕ್ಕಿ ಕೌಶಲ್‌ಗೆ ಮದುವೆಯ ಬಳಿಕ ಬಂಪರ್ ಲಾಟರಿ ಹೊಡೆಯಲಿದೆ. ಅವರು ಈಗಿರುವ ಸ್ಟಾರ್‌ಡಮ್‌ಗಿಂತಲೂ ದೊಡ್ಡ ಸ್ಟಾರ್‌ಡಮ್‌ಗೆ ಪಡೆದುಕೊಳ್ಳುತ್ತಾರೆ. ಇನ್ನೂ ಹೆಚ್ಚು-ಹೆಚ್ಚು ಸಿನಿಮಾಗಳನ್ನು ಮಾಡುತ್ತಾರೆ ಹಾಗೂ ಯಶಸ್ಸು ಗಳಿಸುತ್ತಾರೆ ಎಂದಿದ್ದಾರೆ.

  English summary
  Astrologer prediction about Katrina Kaif and Vicky Kaushal's marriage. He said both will have good times after marriage. both will gain success in career also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X