Just In
- 9 min ago
ಕನ್ನಡ ಸಿನಿಮಾ ನಿರ್ಲಕ್ಷ್ಯ ಮಾಡಿದ ರಶ್ಮಿಕಾ: 'ಪೊಗರು' ಪ್ರೊಮೋಷನ್ ನಿಂದ ದೂರ ಉಳಿದಿದ್ದೇಕೆ?
- 2 hrs ago
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- 3 hrs ago
'ದಳಪತಿ 65' ಸಿನಿಮಾಗೆ ಇವರೇ ನಾಯಕಿ; ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಟ್ರೆಂಡ್
- 4 hrs ago
ಶಿವಣ್ಣನಿಗೆ ಕೃಷ್ಣ-ಮಿಲನಾ ಜೋಡಿಯ ಮದುವೆ ಆಮಂತ್ರಣ- ಡಿ ಬಾಸ್ ಗೆ ಯಾವಾಗ ಕೊಡ್ತೀರಾ ಎನ್ನುತ್ತಿದ್ದಾರೆ ಅಭಿಮಾನಿಗಳು
Don't Miss!
- Lifestyle
ಶುದ್ಧ ದೇಸಿ ತುಪ್ಪದಲ್ಲಿದೆ ಸೌಂದರ್ಯವರ್ಧಕ ಗುಣಗಳು...
- News
ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Automobiles
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
29 ವರ್ಷದ ಹಿಂದೆ ಆ ಸಿನಿಮಾ ನಿರಾಕರಿಸಿದ್ದಕ್ಕೆ ಈಗಲೂ ಪಶ್ಚಾತಾಪ ಪಡುತ್ತಿದ್ದಾರೆ ನಟಿ
ಸಿನಿಮಾ ನಟ-ನಟಿಯರಿಗೆ 'ಸೂಕ್ತ ಆಯ್ಕೆ' ಎಂಬುದು ಬಹಳ ಅಗತ್ಯ. ಒಂದು ಸರಿಯಾದ ನಿರ್ಧಾರ ಸಾಮಾನ್ಯ ನಟನೊಬ್ಬನ ಜೀವನವನ್ನೇ ಬದಲಾಯಿಸಿಬಿಡುತ್ತದೆ. ಅದೇ ಒಂದು ತಪ್ಪು ನಿರ್ಧಾರ ಸ್ಟಾರ್ ಅನ್ನು ಸಹ ಕೆಳಗೆ ಬೀಳುವಂತೆ ಮಾಡುತ್ತದೆ.
ಕೈತಪ್ಪಿಹೋದ ಅವಕಾಶಕ್ಕಾಗಿ ಅಥವಾ ತಾವೇ ನಿರಾಕರಿಸಿದ ಅವಕಾಶಕ್ಕಾಗಿ ಜೀವನ ಪೂರ್ತಿ ಪಶ್ಚಾತಾಪ ಪಡುವ ಹಲವಾರು ನಟ-ನಟಿಯರಿದ್ದಾರೆ. ಅವರಲ್ಲಿ ಒಬ್ಬರು ನಟಿ ಆಯೆಷಾ ಜುಲ್ಕಾ.
1992 ರಲ್ಲಿ ಬಿಡುಗಡೆ ಆದ ಎವರ್ ಗ್ರೀನ್ ಸಿನಿಮಾ 'ರೋಜಾ' ಬಹುತೇಕರಿಗೆ ಗೊತ್ತಿರುವಂಥಹದ್ದೇ. ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ ಈ ಸಿನಿಮಾದ ನಾಯಕಿ ಪಾತ್ರಕ್ಕಾಗಿ ಮೊದಲ ಆಯ್ಕೆ ಆಗಿದ್ದಿದ್ದು ಆಯೆಷಾ ಜುಲ್ಕಾ. ಆದರೆ ಅವಕಾಶ ನಿರಾಕರಿಸಿದರು ಆಯೆಷಾ ಜುಲ್ಕಾ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಆಯೆಷಾ ಜುಲ್ಕಾ, ನಿರ್ದೇಶಕ ಮಣಿರತ್ನಂ ಅವರ 'ರೋಜಾ' ಸಿನಿಮಾದಲ್ಲಿ ನಟಿಸದೇ ನಿರಾಕರಿಸಿದ್ದನ್ನು ನಾನು ಬಹುವಾಗಿ ವಿಷಾಧಿಸುತ್ತೇನೆ. ಆ ಸಮಯದಲ್ಲಿ ಡೇಟ್ಸ್ ಹೊಂದಾಣಿಕೆ ಆಗದ ಕಾರಣಕ್ಕೆ ನಾನು ಆ ಸಿನಿಮಾದಲ್ಲಿ ನಟಿಸಲಾಗಲಿಲ್ಲ. ಆ ಸಿನಿಮಾದಲ್ಲಿ ಮಧು ನಾಯಕಿಯಾಗಿ ನಟಿಸಿದರು ಎಂದಿದ್ದಾರೆ ಆಯೆಷಾ.

ಪ್ರೇಮ್ ಖೈದಿ ಸಿನಿಮಾವನ್ನು ಸಹ ನಿರಾಕರಿಸಿದೆ: ಆಯೆಷಾ
ಆ ನಂತರ, ತೆಲುಗಿನ ರಾಮಾ ನಾಯ್ಡು ಅವರು ನಿರ್ಮಸಿದ್ದ ಹಿಂದಿಯ 'ಪ್ರೇಮ್ ಖೈದಿ' ಸಿನಿಮಾದಲ್ಲಿ ಸಹ ನಟಿಸುವ ಅವಕಾಶ ಇತ್ತು. ಆದರೆ ಆ ಸಿನಿಮಾದಲ್ಲಿ ನಾನು ಬಿಕಿನಿ ತೊಡಬೇಕಿತ್ತು. ಹಾಗಾಗಿ ಅದರಲ್ಲಿ ನಟಿಸಲಿಲ್ಲ. ಇಂಥಹಾ ಅನೇಕ ಸಿನಿಮಾಗಳು ನನ್ನ ಕೈತಪ್ಪಿ ಹೋಗಿವೆ. ಕೆಲವು ಸಿನಿಮಾಗಳು ಕೈತಪ್ಪಿದ್ದಕ್ಕೆ ವಿಷಾದವಿದೆ, ಕೆಲವಕ್ಕೆ ಇಲ್ಲ ಎಂದಿದ್ದಾರೆ ಆಯೆಷಾ.

ಅಕ್ಷಯ್ ಕುಮಾರ್, ಅಮೀರ್ ಖಾನ್ ಜೊತೆ ನಟನೆ
ಅಕ್ಷಯ್ ಕುಮಾರ್, ಅಮೀರ್ ಖಾನ್, ಗೊವಿಂದಾ ಇನ್ನೂ ಅನೇಕ ಸ್ಟಾರ್‌ಗಳ ಜೊತೆಗೆ 90 ರ ದಶಕದಲ್ಲಿ ನಾಯಿಕಿಯಾಗಿ ನಟಿಸಿದ್ದ ಆಯೆಷಾ ಈಗ ಬಾಲಿವುಡ್‌ನಿಂದ ದೂರ ಉಳಿದಿದ್ದಾರೆ. ಆದರೆ ತಮಗೆ ಮತ್ತೆ ಅಮೀರ್ ಖಾನ್ ಜೊತೆಗೆ ನಟಿಸುವ ಆಸೆಯಿದೆ ಎಂದಿದ್ದಾರೆ ಈ ನಟಿ. ಅಮೀರ್ ಜೊತೆಗೆ 'ಖಯಾಮತ್ ಸೆ ಖಯಾಮತ್ ತಕ್' ಸಿನಿಮಾದಲ್ಲಿ ನಟಿಸಿದ್ದರು ಆಯೆಷಾ.

ಜಾನ್ ಅಬ್ರಹಾಂ ಒಳ್ಳೆಯ ವ್ಯಕ್ತಿ: ಆಯೆಷಾ
ನಾನು ಪ್ರಾಣಿಗಳಿಗಾಗಿ ಸೇವೆ ಮಾಡುತ್ತಿದ್ದೇನೆ. ಜಾಕಿ ಶ್ರಾಫ್, ಹೇಮಾ ಮಾಲಿನಿ, ಭಾಗ್ಯಶ್ರಿ, ರವೀನಾ ಟಂಡನ್ ಇನ್ನೂ ಹಲವರೊಂದಿಗೆ ಈಗಲೂ ಸಂಪರ್ಕದಲ್ಲಿದ್ದೇನೆ. ಅವರೆಲ್ಲಾ ನನ್ನ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ನಾನು ಜಾನ್ ಅಬ್ರಾಹಂ ಹೆಸರು ಹೇಳಲೇ ಬೇಕು. ಆತನ ವೈಯಕ್ತಿಕ ಪರಿಚಯ ನನಗೆ ಇಲ್ಲದೇ ಇದ್ದರೂ, ಆತನೇ ನನಗೆ ಕರೆ ಮಾಡಿ ಸಹಾಯ ಮಾಡುವುದಾಗಿ ಹೇಳಿದ, ಆತ ಅದ್ಭುತವಾದ ವ್ಯಕ್ತಿ' ಎಂದಿದ್ದಾರೆ ಆಯೆಷಾ.

ಹಲವು ವರ್ಷಗಳ ಬಳಿಕ ಅಮೀರ್ ಖಾನ್ ಭೇಟಿ
ನಾನು ಹಲವಾರು ವರ್ಷಗಳ ಬಳಿಕ ಅಮೀರ್ ಖಾನ್, ಗೋವಿಂದಾ ಅವರುಗಳನ್ನು ಭೇಟಿಯಾದೆ. ಇಷ್ಟು ವರ್ಷವಾದರೂ ಅವರ್ಯಾರೂ ಬದಲಾಗಿಲ್ಲ. ಈಗಲೇ ಅದೇ ಪ್ರೀತಿ, ಅದೇ ಸ್ನೇಹ. ಅಮೀರ್ ಖಾನ್ ಒಬ್ಬ ಅದ್ಭುತ ನಟ. ನಟನೆಗಾಗಿ ಆತ ಹಾಕುವ ಶ್ರಮ ಮಾದರಿ. ಆತನೊಂದಿಗೆ ಮತ್ತೆ ನಟಿಸುವ ಆಸೆ ಇದೆ. ಪ್ರಸ್ತುತ ಸ್ಕ್ರಿಪ್ಟ್ ಒಂದನ್ನು ಬರೆಯುತ್ತಿದ್ದು, ನಿರ್ದೇಶಕಿ ಆಗುವ ತಯಾರಿಯಲ್ಲಿದ್ದೇನೆ ಎಂದರು ನಟಿ ಆಯೆಷಾ.