»   » ರಾಜಮೌಳಿ 'ಬಾಹುಬಲಿ'ಯಿಂದ ಅಮೀರ್ 'ದಂಗಲ್' ದಾಖಲೆ ಬ್ರೇಕ್!

ರಾಜಮೌಳಿ 'ಬಾಹುಬಲಿ'ಯಿಂದ ಅಮೀರ್ 'ದಂಗಲ್' ದಾಖಲೆ ಬ್ರೇಕ್!

Posted By:
Subscribe to Filmibeat Kannada

ಟಾಲಿವುಡ್ ನಟ ಪ್ರಭಾಸ್ ಅಭಿನಯದ 'ಬಾಹುಬಲಿ -ದಿ ಕನ್ ಕ್ಲೂಶನ್' ಚಿತ್ರ ನಿನ್ನೆ(ಏಪ್ರಿಲ್ 28) ರಂದು ಬಿಡುಗಡೆ ಆಗಿದ್ದು, ಒಂದೇ ದಿನಕ್ಕೆ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ.['ಬಾಹುಬಲಿ-2' ಕಲೆಕ್ಷನ್: ಬಾಕ್ಸ್ ಆಫೀಸ್ ನಲ್ಲಿ ಹೊಸ 'ಮೌಳಿ'ಗಲ್ಲು.!]

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಸಿನಿಮಾ ವರ್ಲ್ಡ್ ವೈಡ್ 9000 ಕ್ಕೂ ಅಧಿಕ ಸ್ಕ್ರೀನ್‌ ಗಳಲ್ಲಿ ಬಿಡುಗಡೆಯಾಗಿದ್ದು, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಮೂರು ಅವತರಣಿಕೆಯಿಂದ ಒಂದೇ ದಿನದಲ್ಲಿ ಅಂದಾಜಿನ ಪ್ರಕಾರ ನೂರು ಕೋಟಿ ರೂಪಾಯಿ ಗಳಿಸಿದೆ. ಅಲ್ಲದೇ ಟಿಕೆಟ್ ಬುಕ್ಕಿಂಗ್ ನಲ್ಲೂ ಅಮೀರ್ ಖಾನ್ 'ದಂಗಲ್' ದಾಖಲೆ ಮುರಿದಿದೆ. ಮುಂದೆ ಓದಿರಿ...

'ದಂಗಲ್' ದಾಖಲೆ ಬ್ರೇಕ್ ಮಾಡಿದ 'ಬಾಹುಬಲಿ'

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ಬಿಡುಗಡೆ ಆದ ಸಮಯದಲ್ಲಿ ಅತಿ ಹೆಚ್ಚು ಟಿಕೆಟ್ ಬುಕ್ಕಿಂಗ್ ಪಡೆದ ದಾಖಲೆ ಬರೆದಿತ್ತು. ಆದರೆ ಈಗ 'ದಂಗಲ್' ಚಿತ್ರದ ದಾಖಲೆಯನ್ನು 'ಬಾಹುಬಲಿ 2' ಬ್ರೇಕ್ ಮಾಡಿದೆ. ಯಾಕಂದ್ರೆ...

10 ಲಕ್ಷ ಟಿಕೆಟ್ ಬುಕ್ಕಿಂಗ್

ಭಾರತಿಯ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹೊಸ ದಾಖಲೆ ಬರೆದಿರುವ 'ಬಾಹುಬಲಿ 2' 24 ಗಂಟೆಗಳಲ್ಲಿ 10 ಲಕ್ಷ ಟಿಕೆಟ್ ಗಳ ಬುಕ್ಕಿಂಗ್ ಪಡೆದಿದೆ.

ಒಂದು ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಹೊಸ ದಾಖಲೆ

ಈ ಹಿಂದೆ ಭಾರತೀಯ ಚಿತ್ರಗಳಲ್ಲಿ ಒಂದು ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಸಲ್ಮಾನ್ ಖಾನ್ 'ಸುಲ್ತಾನ್' 36.54 ಕೋಟಿ ರೂ, ಅಮೀರ್ ಖಾನ್ 'ದಂಗಲ್' 29.78 ಕೋಟಿ ರೂ ಗಳಿಸಿ ದಾಖಲೆ ಸೃಷ್ಟಿಸಿದ್ದವು. ಈಗ 'ಬಾಹುಬಲಿ 2' ಒಂದೇ ದಿನದ ಕಲೆಕ್ಷನ್ ನಲ್ಲಿ ನೂರು ಕೋಟಿ ರೂ ಗಳಿಸಿ ಹೊಸ ದಾಖಲೆ ಬರೆದಿದೆ.

ಹಿಂದಿ ವರ್ಸನ್ 'ಬಾಹುಬಲಿ' ಕಲೆಕ್ಷನ್

ಕೇವಲ ಹಿಂದಿ ವರ್ಸನ್ ನಿಂದಲೇ 'ಬಾಹುಬಲಿ 2' ಹತ್ತತ್ರ 55 ಕೋಟಿ ರೂ ಗಳಿಸಿದೆ ಎಂದು 'ಬಾಕ್ಸ್ ಆಫೀಸ್ ಇಂಡಿಯಾ.ಕಾಂ' ಅಂದಾಜಿಸಿದೆ.

ಸಿನಿಮಾ ವಾಣಿಜ್ಯ ವಿಶ್ಲೇಷಕ ಹೇಳಿದ್ದೇನು?

ಸಿನಿಮಾ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ರವರು " ನೊ ರಿಪಬ್ಲಿಕ್ ಡೇ, ನೊ ಇಂಡಿಪೆಂಡೆನ್ಸ್ ಡೇ... ನೊ ದಿಪಾವಳಿ.. ನೊ ಕ್ರಿಸ್ ಮಸ್... ಯಾವುದೇ ರಜೆಗಳು ಇಲ್ಲದೇ 'ಬಾಹುಬಲಿ 2' ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಕ್ರಿಯೇಟ್ ಮಾಡಿದೆ. ಅಲ್ಲದೇ ಕೇವಲ ಹಿಂದಿ ವರ್ಸನ್ ನಲ್ಲೇ ಹಿಂದಿಯ 'ದಂಗಲ್', 'ಸುಲ್ತಾನ್' ಗಿಂತ ದೊಡ್ಡ ಮಟ್ಟದ ಓಪೆನಿಂಗ್ ಪಡೆದಿದೆ" ಎಂದು ಟ್ವೀಟ್ ಮಾಡಿದ್ದಾರೆ.

English summary
Baahubali 2 collections beat Salman Khan's Sultan, Aamir Khan's Dangal on day one. And also 'Baahubali 2' breaked ticket booking record of Aamir Khan 'Dangal' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada