For Quick Alerts
  ALLOW NOTIFICATIONS  
  For Daily Alerts

  ಬಾಹುಬಲಿ ಮತ್ತು ಬಾಹುಬಲಿ 2 ಚಿತ್ರಗಳು ಮತ್ತೆ ರಿಲೀಸ್

  |

  ಭಾರತೀಯ ಚಿತ್ರರಂಗದಲ್ಲಿ ಅತಿ ದೊಡ್ಡ ಯಶಸ್ಸು ಕಂಡ ಬಾಹುಬಲಿ ಸರಣಿ ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ. ಈ ಕುರಿತುಬಾಲಿವುಡ್ ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

  ಬಾಹುಬಲಿ ಮೊದಲ ಭಾಗ ಮತ್ತು ಬಾಹುಬಲಿ ಎರಡನೇ ಭಾಗ ಚಿತ್ರಗಳು ಒಂದೊಂದು ವಾರದ ಅಂತರದಲ್ಲಿ ರಿ-ರಿಲೀಸ್ ಆಗುತ್ತಿದೆ.

  ಅಭಿಮಾನಿಗಳ ಒತ್ತಾಯ, ಅಮೆರಿಕದಲ್ಲಿ ಬಾಹುಬಲಿ 2 ಮತ್ತೆ ಬಿಡುಗಡೆಅಭಿಮಾನಿಗಳ ಒತ್ತಾಯ, ಅಮೆರಿಕದಲ್ಲಿ ಬಾಹುಬಲಿ 2 ಮತ್ತೆ ಬಿಡುಗಡೆ

  ಕೊರೊನಾ ಲಾಕ್‌ಡೌನ್ ಬಳಿಕ ಚಿತ್ರಮಂದಿರಗಳು ತೆರೆಯಲು ಅನುಮತಿ ನೀಡಿದ್ದರೂ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಆದರೆ, ಹೆಚ್ಚು ಜನರು ಬಂದಿಲ್ಲ ಅಂದ್ರೆ ನಿರ್ಮಾಪಕರಿಗೆ ನಷ್ಟ ಆಗಲಿದೆ ಎಂಬ ಆತಂಕದಿಂದ ಯಾವುದೇ ಭಾಷೆಯಲ್ಲಿ ಹೊಸ ಸಿನಿಮಾ ರಿಲೀಸ್ ಆಗುತ್ತಿಲ್ಲ.

  ಈ ಹಿನ್ನೆಲೆ ಸೂಪರ್ ಹಿಟ್ ಆದ ಹಳೆಯ ಚಿತ್ರಗಳನ್ನು ಮತ್ತೆ ರಿಲೀಸ್ ಮಾಡಲಾಗುತ್ತಿದೆ. ಈಗ ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಬಂದಿದ್ದ ಬಾಹುಬಲಿ ಚಿತ್ರಗಳ ಸರದಿ.

  ನವೆಂಬರ್ 6 ರಂದು ಬಾಹುಬಲಿ ಮೊದಲ ಭಾಗ ಚಿತ್ರಮಂದಿರಕ್ಕೆ ಬರ್ತಿದೆ. ನವೆಂಬರ್ 13 ರಂದು ಬಾಹುಬಲಿ ಎರಡನೇ ಭಾಗ ರಿಲೀಸ್ ಆಗಲಿದೆ. ಈ ಎರಡು ಚಿತ್ರಗಳು ಹಿಂದಿ ಭಾಷೆಯಲ್ಲಿ ಮಾತ್ರ ತೆರೆಕಾಣಲಿದೆ.

  ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ಸತ್ಯರಾಜ್, ರಮ್ಯಾ ಕೃಷ್ಣ ಸೇರಿದಂತೆ ದೊಡ್ಡ ತಾರಬಳಗ ಈ ಚಿತ್ರಗಳಲ್ಲಿ ಕಾಣಿಸಿಕೊಂಡಿದೆ.

  English summary
  SS Rajamouli’s much-loved and hugely successful Baahubali and Baahubali 2 to re-release in cinemas again.
  Wednesday, November 4, 2020, 16:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X