ಬಾಹುಬಲಿ ನಿರ್ದೇಶಕನಿಗೆ ಅಮಿತಾಬ್ ಬಚ್ಚನ್ ಜೊತೆ ಏನು ಕೆಲಸ?
ಮೊಬೈಲ್- ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ರನ್ನ ಮೀಟ್ ಮಾಡಿದ ಬಾಹುಬಲಿ ನಿರ್ದೇಶಕ ರಾಜಮೌಳಿ. 'ಬಾಹುಬಲಿ-2 'ಚಿತ್ರದ ಬ್ಯುಸಿ ಶೆಡ್ಯೂಲ್ ನಲ್ಲೂ ಈ ಭೇಟಿ ಮಾಡಿದ್ದು ಯಾಕೆ ? ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಮಾಹಿತಿ.....
ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ನಿರ್ದೇಶಕ ಎಸ್.ಎಸ್ ರಾಜಮೌಳಿ ಸದ್ಯ, 'ಬಾಹುಬಲಿ-2 'ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಹುಬಲಿ ಅಂತಹ ಸೂಪರ್ ಹಿಟ್ ಸಿನಿಮಾ ಮಾಡಿದ್ದ ರಾಜಮೌಳಿ, ಈಗ 'ಬಾಹುಬಲಿ-2' ಚಿತ್ರಕ್ಕಾಗಿ ರಾತ್ರಿ-ಹಗಲು ಶ್ರಮ ಪಡುತ್ತಿದ್ದಾರೆ.
ಇಷ್ಟೊಂದು ಬ್ಯುಸಿ ಶೆಡ್ಯೂಲ್ ಮಧ್ಯೆಯೂ, ಬಾಹುಬಲಿ ನಿರ್ದೇಶಕ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ರನ್ನ ಭೇಟಿ ಮಾಡಿದ್ದಾರೆ.[ಬಾಹುಬಲಿ 2 ಬಿಡುಗಡೆ ದಿನಾಂಕ ಬಹಿರಂಗ!]

ಈ ಸ್ಟಾರ್ ನಿರ್ದೇಶಕ, ಸೂಪರ್ ಸ್ಟಾರ್ ನಟನನ್ನ ಭೇಟಿ ಮಾಡಿರುವುದು, ಈಗ ಬಾಲಿವುಡ್ ಹಾಗೂ ಟಾಲಿವುಡ್ ಮಂದಿಯ ನಿದ್ದೆಕೆಡಿಸಿದೆ. ಈ ಭೇಟಿಯ ಹಿಂದೆ ಏನಾದರೂ ವಿಷಯ ಇರಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿದೆ. ಅಷ್ಟಕ್ಕೂ, ರಾಜಮೌಳಿ, ಅಮಿತಾಬ್ ಬಚ್ಚನ್ ರನ್ನ ಮೀಟ್ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ.

ರಾಮ್ ಗೋಪಾಲ್ ವರ್ಮ ನಿರ್ದೇಶನ ಮಾಡುತ್ತಿರುವ ಸರ್ಕಾರ್-3, ಚಿತ್ರದ ಶೂಟಿಂಗ್ ಸ್ಪಾಟ್ ಗೆ ರಾಜಮೌಳಿ ಭೇಟಿ ನೀಡಿ, ಬಿಗ್-ಬಿ ಅಮಿತಾಬ್ ಬಚ್ಚನ್ ರನ್ನ ಮಾತನಾಡಿಸಿದ್ದಾರೆ. ರಾಜಮೌಳಿ ಹಾಗೂ ಅಮಿತಾಬ್ ಬೇಟಿಯಾಗಿರುವ ಫೋಟೋಗಳು ಈಗ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿವೆ. ಈ ಫೋಟೋ ನೋಡಿದ ಅಭಿಮಾನಿಗಳು ತಲೆಗೊಂದು ಕಾಮೆಂಟ್ ಹಾಕುತ್ತಿದ್ದಾರೆ.

'ಬಾಹುಬಲಿ ದಿ ಬಿಗಿನ್ನಿಂಗ್' ಸಿನಿಮಾ ತೆರೆಕಂಡಾಗ ಅಮಿತಾಬ್ ಬಚ್ಚನ್ ಒಂದು ಮಾತನ್ನ ಹೇಳಿದ್ದರು, ''ನಾನು ಬಾಹುಬಲಿ ಚಿತ್ರದ ಒಂದು ಭಾಗವಾಗಬೇಕಿತ್ತು'' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ನಡುವೆ ಬಾಹುಬಲಿ-2 ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಗಳು ಇರಲಿದ್ದಾರೆ ಎಂಬ ಮಾತು ರಾಜಮೌಳಿ ವಲಯದಿಂದ ಕೇಳಿ ಬಂದಿತ್ತು. ಹೀಗಾಗಿ, ರಾಜಮೌಳಿ, ಅಮಿತಾಬ್ ಬಚ್ಚನ್ ರನ್ನ ಏನಾದರು ಬಾಹುಬಲಿ-2 ಚಿತ್ರಕ್ಕಾಗಿ ಆಹ್ವಾನ ನೀಡಿದ್ದಾರಾ ಎಂಬ ಪ್ರಶ್ನೆಯೂ ಉದ್ಭವವಾಗುತ್ತೆ. ಆದ್ರೆ, ಅದನ್ನ ರಾಜಮೌಳಿಯೇ ಕನ್ ಫರ್ಮ್ ಮಾಡಬೇಕಿದೆ.

ಆದ್ರೆ, ಇದು ಕೇವಲ ಸ್ನೇಹಪೂರ್ವಕವಾದ ಭೇಟಿ ಎನ್ನಲಾಗುತ್ತಿದೆ. ಇದಕ್ಕೂ ಮುಂಚೆ ತೆಲುಗಿನ ಖ್ಯಾತ ನಟ ಬಾಲಕೃಷ್ಣ ಕೂಡ ಅಮಿತಾಬ್ ಬಚ್ಚನ್ ರ 'ಸರ್ಕಾರ್-3' ಚಿತ್ರದ ಶೂಟಿಂಗ್ ಸ್ಥಳದಲ್ಲಿ ಭೇಟಿ ಮಾಡಿದ್ದರು.

2005, 2008 ರಲ್ಲಿ ತೆರೆಕಂಡಿದ್ದ 'ಸರ್ಕಾರ್' ಹಾಗೂ 'ಸರ್ಕಾರ ರಾಜ್' ಚಿತ್ರಗಳ ಮುಂದುವರೆದ ಭಾಗ 'ಸರ್ಕಾರ್-3'. ಈಗಾಗಲೇ 'ಸರ್ಕಾರ್' ಹಾಗೂ 'ಸರ್ಕಾರ್-2' ಚಿತ್ರಗಳು ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿವೆ. ಮೊದಲೆರೆಡು ಚಿತ್ರಗಳನ್ನ ಮಾಡಿದ್ದ ರಾಮ್ ಗೋಪಾಲ್ ವರ್ಮ, 'ಸರ್ಕಾರ್-3' ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಮಿತಾಬ್ ಬಚ್ಚನ್ ಈ ಚಿತ್ರದಲ್ಲೂ ನಾಯಕನಾಗಿದ್ದು, ಮನೋಜ್ ಬಾಜಪಾಯಿ, ರೋನಿತ್ ರಾಯ್, ಜಾಕಿ ಶ್ರಾಫ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನೂ ಇತ್ತೀಚೆಗೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಸೆನ್ಸೇಷನಲ್ ಕ್ರಿಯೇಟ್ ಮಾಡಿರುವ 'ಬಾಹುಬಲಿ-2', ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಮುಂದಿನ ವರ್ಷ ಏಪ್ರಿಲ್ 28 ರಂದು ರಿಲೀಸ್ ಮಾಡುವ ಯೋಚನೆಯಲ್ಲಿದ್ದು, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಾಕೃಷ್ಣ, ಸತ್ಯ ರಾಜ್ ಸೇರಿದಂತೆ ಹಲವು ಕಲಾವಿದರು 'ಬಾಹುಬಲಿ-2' ಚಿತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











