»   » ಬ್ರೇಕಿಂಗ್ ನ್ಯೂಸ್: 'ಮಸ್ತಾನಿ' ಬಿಡುಗಡೆಗೆ ಕಂಟಕವಾಗಿರುವ ಶಿವಸೇನೆ

ಬ್ರೇಕಿಂಗ್ ನ್ಯೂಸ್: 'ಮಸ್ತಾನಿ' ಬಿಡುಗಡೆಗೆ ಕಂಟಕವಾಗಿರುವ ಶಿವಸೇನೆ

Posted By:
Subscribe to Filmibeat Kannada

ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಈ ವರ್ಷದ ಬಹುನಿರೀಕ್ಷಿತ 'ಬಾಜೀರಾವ್ ಮಸ್ತಾನಿ' ಚಿತ್ರಕ್ಕೆ ಭಾರಿ ಕಂಟಕ ಬಂದೊದಗಿದ್ದು, ಇದೀಗ ಚಿತ್ರ ಬಿಡುಗಡೆಗೆ ತಡೆ ಹಾಕಲಾಗಿದೆ.

ಚಿತ್ರದ ಶೂಟಿಂಗ್ ಹಂತದಿಂದಲೂ, ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಿರುವ 'ಬಾಜೀರಾವ್ ಮಸ್ತಾನಿ' ಚಿತ್ರತಂಡಕ್ಕೆ ಇದೀಗ ಮತ್ತೆ ಸಮಸ್ಯೆ ಎದುರಾಗಿದೆ. ಈ ಮೊದಲು ಚಿತ್ರದ 'ಪಿಂಗಾ' ಹಾಡು ಕೂಡ ಸಖತ್ ಗಾಸಿಪ್ ಕ್ರಿಯೇಟ್ ಮಾಡಿತ್ತು.[ಬನ್ಸಾಲಿ ಅವರ 'ಬಾಜಿರಾವ್ ಮಸ್ತಾನಿ' ಟ್ರೈಲರ್ ಸೂಪರ್]

Bajirao Mastani Might Not Release; Shiv Sena Protests, Says It's VULGAR

ಇದೀಗ ಮಹಾರಾಷ್ಟ್ರ ಶಿವಸೇನೆಯ ಎಮ್ ಎಲ್ ಎ 'ಪೇಶ್ವೆಯ ಬಾಜೀರಾವ್ ಮಸ್ತಾನಿ' ರಾಜನ ಜೀವನಾಧರಿತ ಕಥೆಯನ್ನಾಧರಿಸಿದ ಬನ್ಸಾಲಿ ಅವರ ಚಿತ್ರ ಬಿಡುಗಡೆ ಮಾಡಬಾರದು, ತಡೆಯಾಜ್ಞೆ ತರಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.

ಚಿತ್ರದಲ್ಲಿ ವಿವಾದಾಸ್ಪದ ಮತ್ತು ವಿವಾದಾತ್ಮಕ ಸೀನ್ ಗಳು ಹೆಚ್ಚಾಗಿದ್ದು, ಅದನ್ನು ಕಟ್ ಮಾಡದೇ ಹಾಗೆ ಬಿಡುಗಡೆ ಮಾಡಲು ಬನ್ಸಾಲಿ ನಿರ್ಧರಿಸಿದ್ದಾರೆ. ಅದಕ್ಕಾಗಿ ಚಿತ್ರ ಬಿಡುಗಡೆ ತಡಯಾಜ್ಞೆ ತರಬೇಕು ಎಂದು ಥಾಣೆ ಜಿಲ್ಲೆಯ ಎಮ್ ಎಲ್ ಎ ಪ್ರತಾಪ್ ಸಾರಣಿಕ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

'ಮೊದಲು ಚಿತ್ರವನ್ನು ಶಾಸಕರಿಗೆ ತೋರಿಸಲಿ, ಆ ನಂತರ ಈ ಸಿನಿಮಾವನ್ನು ಬಿಡುಗಡೆ ಮಾಡಲಿ' ಎಂದು ಎಮ್ ಎಲ್ ಎ ಪ್ರತಾಪ್ ಸಾರಣಿಕ್ ಖಾರವಾಗಿ ನುಡಿದಿದ್ದಾರೆ. ಜೊತೆಗೆ ಈ ಚಿತ್ರಕ್ಕಾಗಿ ಭಾರಿ ಸಂಭಾವನೆ ಪಡೆದಿರುವ ನಟಿ ದೀಪಿಕಾ, ಪ್ರಿಯಾಂಕ ಚೋಪ್ರಾ ಮತ್ತು ರಣವೀರ್ ಸಿಂಗ್ ಅವರನ್ನು ಕೂಡ ಶಿವಸೇನಾ ಶಾಸಕ ಸಾರಣಿಕ್ ಅವರು ಅಪಾದಿತರನ್ನಾಗಿ ಮಾಡಿದ್ದಾರೆ.['ಬಾಜಿರಾವ್ ಮಸ್ತಾನಿ' ಟ್ರೈಲರ್: 10 ಕಣ್ಸೆಳೆಯುವ ಅಂಶಗಳು]

Bajirao Mastani Might Not Release; Shiv Sena Protests, Says It's VULGAR

ಜೊತೆಗೆ ಈ ಚಿತ್ರ ಕೇವಲ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೇ, ಇಡೀ ಭಾರತ ಹಾಗು ವಿದೇಶಗಳಲ್ಲೂ ಬಿಡುಗಡೆ ಆಗಬಾರದು ಎಂದು ಪ್ರತಾಪ್ ಸಾರಣಿಕ್ ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

'ನಿರ್ದೇಶಕರು ಪೇಶ್ವ ಬಾಜೀರಾವ್ ಬಗ್ಗೆ ಮರಾಠರ ಇತಿಹಾಸ ಮತ್ತು ಮರಾಠಿ ಸಂಪ್ರದಾಯದ ಬಗ್ಗೆ ತಿಳಿಯದೆ ಕೇವಲ ಕಲ್ಪನೆ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಇದರಿಂದ ಮರಾಠರ ಸಂಪ್ರದಾಯ ದುರುಪಯೋಗ ಆಗುತ್ತಿದೆ. ಇದು ಇಡೀ ಮಹಾರಾಷ್ಟ್ರದ ಸಮುದಾಯಕ್ಕೆ ನೋವು ತರುವಂತಹ ವಿಷಯವಾಗಿದೆ' ಎಂದು ಸಾರಣಿಕ್ ತಿಳಿಸಿದ್ದಾರೆ.

ಅಲ್ಲದೇ ಚಿತ್ರದ ಹಾಡುಗಳನ್ನು ಕೂಡ 'ಅಶ್ಲೀಲ'ವಾಗಿ ತೋರಿಸಿದ್ದಾರೆ ಆದ್ದರಿಂದ ಚಿತ್ರ ಬಿಡುಗಡೆ ಆಗಬಾರದು ಎಂದು ಎಮ್ ಎಲ್ ಎ ಪ್ರತಾಪ್ ಸಾರಣಿಕ್ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.

English summary
A Shiv Sena MLA has asked the Maharashtra government to stop the release of Sanjay Leela Bhansali's upcoming film Bajirao Mastani.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada