For Quick Alerts
  ALLOW NOTIFICATIONS  
  For Daily Alerts

  ಬ್ಯಾಂಕಾಕ್ ಬ್ಲಾಸ್ಟ್ : ಜೆನಿ-ರಿತೇಶ್ ಕೂದಲೆಳೆಯ ಅಂತರದಲ್ಲಿ ಪಾರು

  By Suneetha
  |

  ಥೈಲ್ಯಾಂಡ್ ನ ರಾಜಧಾನಿಯಾದ ಬ್ಯಾಂಕಾಕ್ ನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಹುಭಾಷಾ ನಟಿ ಜೆನಿಲಿಯಾ ದೇಶ್ ಮುಖ್ ಹಾಗೂ ಅವರ ಪತಿ ರಿತೇಶ್ ದೇಶ್ ಮುಖ್ ಅವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

  ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಜೆನಿಲಿಯಾ ದೇಶ್ ಮುಖ್ ಅವರು, ಬಾಂಬ್ ಸ್ಪೋಟ ಆಗಿದ್ದು ನಾವಿದ್ದ ಮಾಲ್ ನ ಎದುರಿನ ಭಾಗದ ಕಟ್ಟಡದಲ್ಲಿ, ಆದರೆ ಸ್ಪೋಟಗೊಂಡ ಸದ್ದು ಎಲ್ಲೆಡೆ ಮೊಳಗಿದೆ, ಆದರೆ ನಮಗೆ ಏನೂ ಅಪಾಯ ಆಗಿಲ್ಲ, ಪ್ರಾಣ ಕಳೆದುಕೊಂಡವರ ಬಗ್ಗೆ ತುಂಬಾ ನೋವಾಗುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  ಜಾಹೀರಾತು ಶೂಟಿಂಗ್ ಗಾಗಿ ಬ್ಯಾಂಕಾಕ್ ಗೆ ತೆರಳಿದ್ದ ಜೆನಿಲಿಯಾ ದೇಶ್ ಮುಖ್ ಹಾಗೂ ರಿತೇಶ್ ದೇಶ್ ಮುಖ್ ಅವರು ಶೂಟಿಂಗ್ ಮುಗಿಸಿದ ನಂತರ ಶಾಪಿಂಗ್ ಗಾಗಿ ಮಾಲ್ ಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

  ಈ ಬಗ್ಗೆ ಕ್ಷೇಮ ವಿಚಾರಿಸಿದ ಅಭಿಮಾನಿ ಬಳಗದವರಿಗೆ ಜೆನಿಲಿಯಾ ಅವರು ರಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ಸಲ್ಲಿಸುವ ಜೊತೆಗೆ ನಾವು ಸೇಫ್ ಆಗಿದ್ದೇವೆ ಎಂದು ಅಭಿಮಾನಿಗಳಿಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ.

  ಬಾಂಬ್ ಧಾಳಿ ಪ್ರಕರಣದಲ್ಲಿ 27 ಜನರು ಮಡಿದಿದ್ದು, ಸುಮಾರು 78 ಜನರು ತೀವ್ರ ಅಪಘಾತಕ್ಕೀಡಾಗಿದ್ದಾರೆ.

  ಇನ್ನೂ ರಿತೇಶ್ ದೇಶ್ ಮುಖ್ ಅವರನ್ನು ವಿವಾಹವಾದ ನಂತರ ಮಗು, ಕುಟುಂಬ ಅಂತ ಚಿತ್ರರಂಗದಿಂದ ದೂರ ಉಳಿದಿದ್ದ ಜೆನಿಲಿಯಾ ದೇಶ್ ಮುಖ್ ಸದ್ಯಕ್ಕೆ ಜಾಹೀರಾತುಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಇನ್ನೇನು ಸದ್ಯದಲ್ಲೇ ಕೆಲವು ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಂಡು ಚಿತ್ರಗಳಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ.

  English summary
  Bangkok: Riteish and Genelia D'Souza were in the Thai capital when an explosion close to Hindu Erawan Shrine here left at least 27 people dead and 78 others wounded. They confirmed they were safe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X