twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ 'ಡಿಸ್ಕೋ ಕಿಂಗ್' ಬಪ್ಪಿ ಲಹಿರಿ ನಿಧನಕ್ಕೆ ಮೋದಿ, ಎ ಆರ್ ರೆಹಮಾನ್, ಸುಭಾಷ್ ಘಾಯ್ ಸೆಲೆಬ್ರೆಟಿಗಳಿಂದ ಸಂತಾಪ

    |

    ಬಾಲಿವುಡ್ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ಬುಧವಾರ(ಫೆ 16) ಬೆಳಗ್ಗೆ ನಿಧನರಾಗಿದ್ದಾರೆ. ಡಿಸ್ಕೋ ಕಿಂಗ್ ಅಂತಲೇ ಜನಪ್ರಿಯರಾಗಿದ್ದ ಬಪ್ಪಿ ಲಹಿರಿ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಪ್ಪಿ ಲಹಿರಿ 70 ಹಾಗೂ 80ರ ದಶಕದಲ್ಲಿ ಬಾಲಿವುಡ್‌ನಲ್ಲಿ ಸೂಪರ್‌ ಹಿಟ್ ಹಾಡುಗಳನ್ನು ನೀಡಿ ಜನಪ್ರಿಯರಾಗಿದ್ದರು. 'ಚಲ್ತೆ ಚಲ್ತೆ', ದಿಸ್ಕೋ ಡ್ಯಾನ್ಸರ್, ಶರಾಬಿ ಅಂತ ಹಾಡುಗಳು ಬಾಲಿವುಡ್ ಸಿನಿಮಾಗಳಿಗೆ ಹೊಸ ಇಮೇಜ್ ಕೊಟ್ಟಿದ್ದವು.

    69ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಬಾಲಿವುಡ್‌ನ ಪ್ರಸಿದ್ಧ ಸಂಗೀತ ನಿರ್ದೇಶಕ ಬಪ್ಪಿ ಲಹಿರಿಗೆ ಬಾಲಿವುಡ್ ಕಂಬನಿ ಮಿಡಿದಿದೆ. ಪ್ರಧಾನಿ ನರೇಂದ್ರ ಮೋದಿ, ಅಕ್ಷಯ್ ಕುಮಾರ್, ಎಆರ್‌ ರೆಹಮಾನ್ , ಅಜಯ್ ದೇವಗನ್ , ಸುಭಾಷ್ ಘಾಯ್ ಸೇರಿದಂತೆ ಹಲವು ಗಣ್ಯರು ಗಾಯಕ ಹಾಗೂ ಸಂಗೀತ ನಿರ್ದೇಶಕನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    ಲತಾ ಮಂಗೇಶ್ಕರ್‌ ಜೀವನದ ಬಗ್ಗೆ ಅರಿಯದ ಸತ್ಯಗಳುಲತಾ ಮಂಗೇಶ್ಕರ್‌ ಜೀವನದ ಬಗ್ಗೆ ಅರಿಯದ ಸತ್ಯಗಳು

    ಅಜಯ್ ದೇವಗನ್

    ಅಜಯ್ ದೇವಗನ್

    ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಸಂಗೀತ ನಿರ್ದೇಶಕ ಹಾಗೂ ಗಾಯಕ ಬಪ್ಪಿ ಲಹಿರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. " ಬಪ್ಪಿ ದ ವೈಯಕ್ತಿಕವಾಗಿ ಆತ್ಮೀಯರಾಗಿದ್ದರು. ಅವರ ಸಂಗೀತದಲ್ಲೊಂದು ಎಡ್ಜ್ ಇರುತ್ತಿತ್ತು. ಚಲ್ತೆ ಚಲ್ತೆ, ಸುರಕ್ಷಾ ಮತ್ತು ಡಿಸ್ಕೋ ಡ್ಯಾನ್ಸರ್ ಅಂತ ಹಾಡುಗಳ ಮೂಲಕ ಹೊಸ ಸಂಗೀತವನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದರು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ದಾದಾ." ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.

    ಸುಭಾಷ್ ಘಾಯ್

    ಸುಭಾಷ್ ಘಾಯ್

    "ಐ ಯಾಮ್ ಎ ಡಿಸ್ಕೋ ಡ್ಯಾನ್ಸರ್, ಮುಂಬೈ ಸೆ ಆಯಾ ಮೇರಾ ದೋಸ್ತ್. ಪ್ರತಿ ಯುವ ಪೀಳಿಗೆಯಲ್ಲೂ ನನ್ನ ಫೇವರಿಟ್ ಸಾಂಗ್‌ಗಳಿವು. ಹಿಂದಿ ಸಿನಿಮಾದ ಸಂಗೀತದಲ್ಲಿ ದೇಸಿ ಡಿಸ್ಕೋ ಮತ್ತು ಮೆಲೋಡಿಯಲ್ಲಿ ವ್ಯತ್ಯಾಸವನ್ನು ಸೃಷ್ಟಿ ಮಾಡಿದ್ದರು. ಪ್ರತಿಭಾವಂತ ಸಂಗೀತ ಮೇಷ್ಟ್ರು ಇನ್ನಿಲ್ಲ, ಆದರೆ ಅವರ ಸಂಗೀತ ಸದಾ ನಮ್ಮೊಂದಿಗಿರುತ್ತೆ." ಎಂದು ಸುಭಾಷ್ ಘಾಯ್ ಟ್ವೀಟ್ ಮಾಡಿದ್ದಾರೆ.

    ರೆಹಮಾನ್, ಅಕ್ಷಯ್, ರವೀನಾ

    ರೆಹಮಾನ್, ಅಕ್ಷಯ್, ರವೀನಾ

    ಸಂಗೀತ ನಿರ್ದೇಶಕ ಎಆರ್ ರೆಹಮಾನ್ "ಬಪ್ಪಿ ಲಹಿರಿ ದಿ ಡಿಸ್ಕೋ ಕಿಂಗ್ ಆಫ್ ಹಿಂದಿ ಸಿನಿಮಾ" ಎಂದು ಬಣ್ಣಿಸಿದ್ದಾರೆ. ರವೀನಾ ಟಂಡನ್ ಕೂಡ "ನಿಮ್ಮ ಸಂಗೀತವನ್ನು ಕೇಳುತ್ತಾ ಬೆಳೆದಿದ್ದೇನೆ. ಬಪ್ಪಿ ದ ನಿಮ್ಮ ಬಳಿ ನಿಮ್ಮದೇ ಆದ ಶೈಲಿ ಇತ್ತು. ಅದರೊಂದಿಗೆ ಸದಾ ಸಗುವಿನ ಮುಖವಿರುತ್ತಿತ್ತು. ನಿಮ್ಮ ಸಂಗೀತ ಸದಾ ಕೇಳಿಸುತ್ತಲೇ ಇರುತ್ತದೆ" ಎಂದಿದ್ದಾರೆ. ಅಕ್ಷಯ್ ಕುಮಾರ್ ಟ್ವೀಟ್ ಮಾಡಿ " ಇವತ್ತು ನಾವು ಸಂಗೀತ ಲೋಕದ ಮತ್ತೊಂದು ಪ್ರತಿಭೆಯನ್ನು ಕಳೆದುಕೊಂಡಿದ್ದೇವೆ. ಬಪ್ಪಿ ದ ನಿಮ್ಮ ಧ್ವನಿ ನನ್ನನ್ನೂಸೇರಿ ಹಲವರು ಹೆಜ್ಜೆ ಹಾಕುವುದಕ್ಕೆ ಕಾರಣವಾಗಿದೆ. ಸಂಗೀತದ ಮೂಲಕ ಸಂತೋಷವನ್ನು ತಂದಿದ್ದಕ್ಕೆ ಧನ್ಯವಾದಗಳು." ಎಂದು ಅಕ್ಷಯ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

    ನರೇಂದ್ರ ಮೋದಿ

    " ಶ್ರೀ ಬಪ್ಪಿ ಲಹಿರಿಯವರ ಸಂಗೀತ ವೈವಿಧ್ಯಮಯ ಭಾವನೆಗಳನ್ನು ಒಳಗೊಂಡಿದ್ದು, ಅವುಗಳನ್ನು ಸುಂದರವಾಗಿ ವ್ಯಕ್ತಪಡಿಸುತ್ತಿತ್ತು. ಪ್ರತಿ ಪೀಳಿಗೆಯೂ ಇವರ ಸಾಧನೆಯನ್ನು ಹಾದಿಯಲ್ಲಿ ನಡೆಯುತ್ತೆ. ಅವರ ಲವಲವಿಕೆಯ ಸ್ವಭಾವವನ್ನು ಮಿಸ್ ಮಾಡಿಕೊಳ್ಳುತ್ತೇವೆ. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪಗಳನ್ನು ಸೂಚಿಸುತ್ತೇನೆ." ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    English summary
    Bappi Lahiri death PM Modi to Yuvraj Singh celebrities mourn India's disco king death.
    Wednesday, February 16, 2022, 11:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X