Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಶ್ಲೀಲತೆಯ ಬಗ್ಗೆ ವಿಡಿಯೋ ಶೇರ್ ಮಾಡಿದ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ: 'ಹೇಟ್ ಸ್ಟೋರಿ' ನಿಮ್ಮದೆ ಎಂದ ನೆಟ್ಟಿಗರು!
ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. 'ಪಠಾಣ್' ಸಿನಿಮಾದ "ಬೇಷರಂ ರಂಗ್.." ಹಾಡಿನಲ್ಲಿ ದೀಪಿಕಾ ಬಿಕಿನಿ ತೊಟ್ಟು ಹೆಜ್ಜೆ ಹಾಕಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆ ಆರಂಭ ಆಗಿದೆ.
ಬಿಕಿನಿ ತೊಟ್ಟು ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆಯ ಸಾಂಗ್ ಬಗ್ಗೆ 'ದಿ ಕಾಶ್ಮೀರ್ ಫೈಲ್ಸ್' ವಿವೇಕ್ ಅಗ್ನಿಹೋತ್ರಿ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಮತ್ತೇ ಈಗ ಅಶ್ಲೀಲತೆ ಬಗೆಗಿನ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಬಗ್ಗೆನೇ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
'ಬೇಷರಂ
ರಂಗ್'
ವಿವಾದದ
ಬೆನ್ನಲ್ಲೇ
'ಪಠಾಣ್'
ಹೊಸ
ಸಾಂಗ್
ರಿಲೀಸ್:
ಶಾರುಕ್-
ಡಿಪ್ಪಿ
ಡ್ಯಾನ್ಸ್ಗೆ
ಫ್ಯಾನ್ಸ್
ಫಿದಾ
ನಾಲ್ಕು ವರ್ಷಗಳ ಬಳಿಕ ಶಾರುಖ್ ಖಾನ್ ಸಿನಿಮಾ 'ಪಠಾಣ್' ರಿಲೀಸ್‌ಗೆ ರೆಡಿಯಾಗಿದೆ. ಹಾಗೇ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಾಹಂ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಜನವರಿಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಚಿತ್ರತಂಡ ಒಂದೊಂದೇ ಹಾಡನ್ನು ರಿಲೀಸ್ ಮಾಡಿತ್ತು. ಇದರಲ್ಲಿ "ಬೇಷರಂ ರಂಗ್.." ಸಾಂಗ್ ವಿವಾದಕ್ಕೆ ಸಿಕ್ಕಿಕೊಂಡಿತ್ತು. ಈಗ ಯುವತಿಯೊಬ್ಬಳು ಅಶ್ಲೀಲತೆ ಬಗ್ಗೆ ವಿಡಿಯೋ ಮಾಡಿದ್ದು, ಅದನ್ನೇ ವಿವೇಕ್ ಅಗ್ನಿಹೋತ್ರಿ ಶೇರ್ ಮಾಡಿದ್ದಾರೆ.

ಅಶ್ಲೀಲತೆ ಬಗೆಗಿನ ವಿಡಿಯೋ ಶೇರ್ ಮಾಡಿದ ವಿವೇಕ್
'ಪಠಾಣ್' ಸಿನಿಮಾದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿವೆ. ಇದರಲ್ಲಿ "ಬೇಷರಂ ರಂಗ್.." ವಿವಾದದಲ್ಲಿ ಸಿಕ್ಕಿಕೊಂಡಿದೆ. ವಿವೇಕ್ ಅಗ್ನಿಹೋತ್ರಿ ಯುವತಿಯೊಬ್ಬಳು ಬಾಲಿವುಡ್ ಸಿನಿಮಾಗಳಲ್ಲಿರುವ ಅಶ್ಲೀಲತೆಯ ಬಗ್ಗೆ ವಿಡಿಯೋ ಮಾಡಿದ್ದರು. ಅದೇ ವಿಡಿಯೋವನ್ನು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆದರೆ, ವಿವೇಕ್ ಶೇರ್ ಮಾಡಿದ್ದ ವಿಡಿಯೋ ನೋಡಿ ಕೆಲ ನೆಟ್ಟಿಗರ ನಿದ್ದೆ ಕೆಡಿಸಿದೆ.
"ದೀಪಿಕಾ
ಬಿಕಿನಿ
ಅಶ್ಲೀಲ
ಅಷ್ಟೇ
ಅಲ್ಲ..
ಪ್ರಚೋದನಕಾರಿ"
ಎಂದ
'ಶಕ್ತಿಮಾನ್'

'ನೀವು ಸೆಕ್ಯೂಲರ್ ಆದರೆ ನೋಡ್ಬೇಡಿ'
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಗಾಗ ವಿವಾದಕ್ಕೆ ಸಿಕ್ಕಿಕೊಳ್ಳುತ್ತಲೇ ಇರುತ್ತಾರೆ. ಈಗ ಶಾರುಖ್ ಖಾನ್, ದೀಪಿಕಾ ಪಡುಕೋಣೆಯನ್ನು ಎದುರು ಹಾಕಿಕೊಂಡಿದ್ದಾರೆ. ಬಾಲಿವುಡ್ ಅಶ್ಲೀಲತೆಯ ಬಗ್ಗೆ ಮಾತಾಡಿದ ಯುವತಿಯ ವಿಡಿಯೋ ಶೇರ್ ಮಾಡಿದ್ದಷ್ಟೇ ಅಲ್ಲದೆ, " ಈ ವಿಡಿಯೋ ಬಾಲಿವುಡ್‌ಗೆ ವಿರುದ್ಧವಾಗಿದೆ. ನೀವು ಸೆಕ್ಯೂಲರ್ ಆಗಿದ್ದರೆ, ಈ ವಿಡಿಯೋವನ್ನು ನೋಡಬೇಡಿ" ಎಂದು ಬರೆದುಕೊಂಡಿದ್ದಾರೆ. ಇದು ಕೆಲ ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ.

'ಹೇಟ್ ಸ್ಟೋರಿ ನಿಮ್ಮದೆ ಎಂದ ನೆಟ್ಟಿಗರು'
ವಿವೇಕ್ ಅಗ್ನಿಹೋತ್ರಿ ಶೇರ್ ಮಾಡಿದ ವಿಡಿಯೋ ನೋಡಿ ನೆಟ್ಟಿಗರು 'ಹೇಟ್ ಸ್ಟೋರಿ' ಸಿನಿಮಾ ಕಡೆ ಬೊಟ್ಟು ಮಾಡುತ್ತಿದ್ದಾರೆ. 2012ರಲ್ಲಿ ವಿವೇಕ್ ಅಗ್ನಿ ಹೋತ್ರಿ 'ಹೇಟ್ ಸ್ಟೋರಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಕೆಲವು ಅಶ್ಲೀಲ ದೃಶ್ಯಗಳು ಇದ್ದವು. ಹೀಗಾಗಿ ಆ ಸಿನಿಮಾ ಪೋಸ್ಟ್ ಅನ್ನು ಶೇರ್ ಮಾಡಿ, ಈ ಸಿನಿಮಾ ಕೂಡ ನಿಮ್ಮದೆ ಅಲ್ಲವೇ? ಎಂದು ಕಮೆಂಟ್ ಮಾಡುತ್ತಿದ್ದಾರೆ.
ವಿವಾದಕ್ಕೆ
ಕಾರಣವಾಗಿರುವ
'ಪಠಾಣ್'
ಸಿನಿಮಾದ
'ಬೇಷರಮ್'
ಹಾಡಿನ
ಅರ್ಥವೇನು?
ಇಲ್ಲಿದೆ
ಭಾವಾನುವಾದ

'3 ಗಂಟೆ ಸಿನಿಮಾದಲ್ಲಿ ಯಾವ ಸಂಸ್ಕಾರವಿದೆ?'
ನೆಟ್ಟಿಗರು ಇಲ್ಲಿಗೆ ಸುಮ್ಮನಾಗಿಲ್ಲ. ಮತ್ತೆ ಕೆಲವರು ಸಂಸ್ಕಾರದ ಬಗ್ಗೆನೂ ಮಾತಾಡಿದ್ದಾರೆ. ಒಬ್ಬರು " ಮೂರು ನಿಮಿಷದ ಹಾಡಿನಲ್ಲಿ ಏನು ಅಶ್ಲೀಲತೆ ಇದೆ. ಮೂರು ಗಂಟೆಯ ಸಿನಿಮಾದಲ್ಲಿ ಯಾವ ಸಂಸ್ಕಾರವನ್ನು ನೀಡಲು ಹೊರಟಿದ್ರಿ? ಎಂದು ವಿವೇಕ್ ಅಗ್ನಿಹೋತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಶೇರ್ ವಿಡಿಯೋ ಅವರಿಗೆ ಉಲ್ಟಾ ಹೊಡೆದಿದೆ.