For Quick Alerts
  ALLOW NOTIFICATIONS  
  For Daily Alerts

  ಸಿನಿಮಾಗಳ ಸೋಲಿನಿಂದ ಕಂಗೆಟ್ಟ ಶಾರುಖ್ ಈಗ ತಮಿಳಿನಲ್ಲಿ ವಿಲನ್?

  |
  ಸಾಲು ಸಾಲು ಸಿನೆಮಾಗಳಲ್ಲಿ ಶಾರುಖ್‍ಗೆ ಸೋಲು | Oneindia Kannada

  ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಶಾರುಖ್ ಸಿನಿಮಾಗಳು ಯಾವುದು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಿಲ್ಲ. ಸುಮಾರು 20 ಸಿನಿಮಾಗಳ ಸೋಲಿನಿಂದ ಬೇಸತ್ತಿರುವ ಕಿಂಗ್ ಖಾನ್ ಈಗ ಬಾಲಿವುಡ್ ನಲ್ಲಿ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

  ಬಹು ಕೋಟಿ ವೆಚ್ಚದಲ್ಲಿ ತಯಾರಾದ 'ಜೀರೋ' ಸಿನಿಮಾದ ಸೋಲಿನ ನಂತರ ಶಾರುಖ್ ಖಾನ್ ಯಾವ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿಲ್ಲ. ಸಾಕಷ್ಟು ಸ್ಕ್ರಿಪ್ಟ್ ಓದಿರುವ ಶಾರುಖ್ ಗೆ ಯಾವ ಪಾತ್ರವು ಇಷ್ಟ ಆಗದೆ ಎಲ್ಲವನ್ನು ರಿಜೆಕ್ಟ್ ಮಾಡಿದ್ದಾರಂತೆ. ಸದ್ಯ ಸ್ವಲ್ಪ ದಿನಗಳು ಬ್ರೇಕ್ ಪಡೆದಿರುವ ಶಾರುಖ್ ಬಗ್ಗೆ ಅಚ್ಚರಿಕರ ಸುದ್ದಿ ಒಂದು ಹೊರಬಿದ್ದಿದೆ.

  ಬಾಲಿವುಡ್ ಗೆ ಎಂಟ್ರಿ ಕೊಟ್ಟ ಶಾರುಖ್ ಪುತ್ರ, ಆದ್ರೆ ನಟನಾಗಿ ಅಲ್ಲ?

  ಬಾಲಿವುಡ್ ಕಿಂಗ್ ಈಗ ಕಾಲಿವುಡ್ ನತ್ತ ಮುಖಮಾಡುತ್ತಿದ್ದಾರಂತೆ. ಹೀಗಂತ ಸುದ್ದಿ ಒಂದು ಕಾಲಿವುಡ್ ಮತ್ತು ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಮಿತಾಭ್ ಬಚ್ಚನ್ ಅಭಿನಯದ 'ಬದ್ಲ' ಸಿನಿಮಾ ನಿರ್ಮಾಣ ಮಾಡಿದ್ದ ಶಾರುಖ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಇದೆ ಸಮಯದಲ್ಲಿ ಶಾರುಖ್ ಈಗ ಕಾಲಿವುಡ್ ನತ್ತ ಪಯಣ ಬೆಳೆಸಿದ್ದಾರೆ. ಯಾವ ಸಿನಿಮಾ? ಬಾದ್ ಶಾ ಗೆ ಯಾರು ಆಕ್ಷನ್ ಹೇಳುತ್ತಾರೆ? ಮುಂದೆ ಓದಿ..

  ನಿರ್ದೇಶಕ ಆಟ್ಲಿ ಸಿನಿಮಾದಲ್ಲಿ ಶಾರುಖ್

  ನಿರ್ದೇಶಕ ಆಟ್ಲಿ ಸಿನಿಮಾದಲ್ಲಿ ಶಾರುಖ್

  ಕಾಲಿವುಡ್ ಖ್ಯಾತ ನಿರ್ದೇಶಕ ಆಟ್ಲಿ ನಿರ್ದೇಶನದ ಸಿನಿಮಾದಲ್ಲಿ ಶಾರುಖ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿರುವ ಕಾರಣ ಶಾರುಖ್ ಕಾಲಿವುಡ್ ಕಡೆ ಮುಖಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ಇತ್ತೀಚಿಗಷ್ಟೆ ಶಾರುಖ್ ನಿರ್ದೇಶಕ ಆಟ್ಲಿಯನ್ನು ಭೇಟಿಯಾಗಿದ್ದರು. ಇಬ್ಬರ ಭೇಟಿ ಈಗ ಅನುಮಾನವನ್ನು ಮತ್ತಷ್ಟು ನಿಜಮಾಡುತ್ತಿದೆ.

  ಬಾಲಿವುಡ್ ನ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ?

  ವಿಜಯ್ ಸಿನಿಮಾದಲ್ಲಿ ಶಾರುಖ್

  ವಿಜಯ್ ಸಿನಿಮಾದಲ್ಲಿ ಶಾರುಖ್

  ಕಾಲಿವುಡ್ ಖ್ಯಾತ ನಟ ಇಳೆಯದಳಪತಿ ವಿಜಯ್ ಅಭಿನಯದ 'ದಳಪತಿ 63' ಸಿನಿಮಾದಲ್ಲಿ ಶಾರುಖ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಆಟ್ಲಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ದಳಪತಿ 63' ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್ ನಟರ ಹುಡುಕಾಟದಲ್ಲಿ ಇದ್ದ ಚಿತ್ರತಂಡ ಶಾರುಖ್ ಅವರನ್ನು ಅಪ್ರೋಚ್ ಮಾಡಿದೆಯಂತೆ. ಕತೆ ಕೇಳಿ ಇಂಪ್ರೆಸ್ ಆದ ಶಾರುಖ್ ವಿಜಯ್ ಜೊತೆ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

  ಎರಡು ದಶಕಗಳ ಹಿಂದೆಯೇ ಸಂಬಂಧ ಮುರಿದು ಬಿದ್ದಿತ್ತು: ನಟ ಅರ್ಬಾಜ್ ಖಾನ್

  ವಿಜಯ್ ಗೆ ವಿಲನ್ ಆಗುತ್ತಿರುವ ಶಾರುಖ್

  ವಿಜಯ್ ಗೆ ವಿಲನ್ ಆಗುತ್ತಿರುವ ಶಾರುಖ್

  'ದಳಪತಿ 63' ಚಿತ್ರದಲ್ಲಿ ಶಾರುಖ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಮೊದಲ ಬಾರಿಗೆ ವಿಲನ್ ಆಗಿ ಬಣ್ಣ ಹಚ್ಚುತ್ತಿರುವ ಶಾರುಖ್ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸುಮಾರು 15 ನಿಮಿಷಗಳ ಕಾಲ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದ ಕೊನೆಯ ಫೈಟ್ ದೃಶ್ಯದಲ್ಲಿ ವಿಜಯ್ ಮತ್ತು ಶಾರುಖ್ ಮುಖಾಮುಖಿಯಾಗಲಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಬದ್ ಶಾ ಭಾಗದ ಚಿತ್ರೀಕರಣ ಐದು ದಿನಗಳ ಕಾಲ ಇದ್ದು ಮುಂಬೈ ಅಥವಾ ಚೆನ್ನೈನಲ್ಲಿ ನಡೆಸಲು ಪ್ಲಾನ್ ಮಾಡಿದೆಯಂತೆ ಚಿತ್ರತಂಡ.

  ವಿಲನ್ ಶಾರುಖ್ ಬಗ್ಗೆ ಭಾರಿ ಚರ್ಚೆ

  ವಿಲನ್ ಶಾರುಖ್ ಬಗ್ಗೆ ಭಾರಿ ಚರ್ಚೆ

  ಬಾಲಿವುಡ್ ಎನ್ನುವ ದೊಡ್ಡ ಸಾಗರದಲ್ಲಿ ಸ್ಟಾರ್ ನಟನಾಗಿ ಮೆರೆದು ವರ್ಲ್ಡ್ ಫೇಮಸ್ ಆಗಿರುವ ಶಾರುಖ್ ನಿಜಕ್ಕು ಕಾಲಿವುಡ್ ಸಿನಿಮಾದಲ್ಲಿ ಮಾಡ್ತಾರಾ? ಅದೂ ವಿಲನ್ ಆಗಿ ಬಣ್ಣ ಹಚ್ಚುತ್ತಾರಾ? ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಸೋಲಿನಿಂದ ತಪ್ಪಿಸಿಕೊಳ್ಳಲು ಶಾರುಖ್ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಈ ಸುದ್ದಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದ್ದರು ಶಾರುಖ್ ಆಗಲಿ ಅಥವಾ ಚಿತ್ರತಂಡ ಆಗಲೆ ಯಾವುದೆ ಪ್ರತಿಕ್ರಿಯೆ ನೀಡದೆ ಸೈಲೆಂಟ್ ಆಗಿರುವುದು ಸಹ ಶಾರುಖ್ ವಿಲನ್ ಆಗಿ ಕಾಣಿಸಿಕೊಳ್ಳುವುದು ದಿಟ ಎನ್ನುವ ಅನುಮಾನ ಮೂಡಿಸುತ್ತಿದೆ.

  ಬಾಲಿವುಡ್ ನಟರ ದಕ್ಷಿಣ ಚಿತ್ರರಂಗದ ಕಡೆ ಪಯಣ

  ಬಾಲಿವುಡ್ ನಟರ ದಕ್ಷಿಣ ಚಿತ್ರರಂಗದ ಕಡೆ ಪಯಣ

  ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. '2.0' ಚಿತ್ರದ ಮೂಲಕ ನಟ ಅಕ್ಷಯ್ ಕುಮಾರ್ ಸೂಪರ್ ಸ್ಟಾರ್ ರಜಿನಿಕಾಂತ್ ವಿರುದ್ಧ ವಿಲನ್ ಆಗಿ ಅಬ್ಬರಿಸಿದ್ದರು. ಅಮಿತಾಭ್ ಬಚ್ಚನ್ ತೆಲುಗಿನ 'ಸೈರಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಜಿ ವಿಶ್ವ ಸುಂದರಿ ಐಶ್ವರ್ಯ್ ರೈ ತಮಿಳು ಚಿತ್ರರಂಗದಲ್ಲಿ ಮಿಂಚಿದ್ದಾರೆ. ಅಜಯ್ ದೇವಗನ್, ಜಾಕಿ ಶ್ರಾಫ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚಿದ್ದಾರೆ.

  English summary
  Back to back big Bollywood flops king khan Shah Rukh Khan will enter to Tamil films. SRK has a playing villain character in Thalapathy 63 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X