For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಗೆ ಮಾತ್ರ ದೋಷಿ ಪಟ್ಟ ಯಾಕೆ, ಉಳಿದವರು ಖುಲಾಸೆಯಾಗಿದ್ದು ಹೇಗೆ?

  By Harshitha
  |

  ಇಪ್ಪತ್ತು ವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಅಪರಾಧಿ ಎಂದು ಜೋಧ್ ಪುರ ನ್ಯಾಯಾಲಯ ತೀರ್ಪು ನೀಡಿದೆ. ಬಾಲಿವುಡ್ 'ಟೈಗರ್' ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ, 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

  ತೀರ್ಪು ಹೊರಬಿದ್ದ ಕೂಡಲೆ ಸಲ್ಮಾನ್ ಖಾನ್ ರನ್ನ ಜೋಧ್ ಪುರದ ಸೆಂಟ್ರಲ್ ಜೈಲಿಗೆ ಪೊಲೀಸರು ಕರೆದೊಯ್ದಿದ್ದಾರೆ. ಸಲ್ಮಾನ್ ಸಲ್ಲಿಸಿರುವ ಜಾಮೀನಿನ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ.

  ಹಾಗ್ನೋಡಿದ್ರೆ, 1998 ರಲ್ಲಿ 'ಹಮ್ ಸಾಥ್ ಸಾಥ್ ಹೇ' ಶೂಟಿಂಗ್ ನಡೆಯುತ್ತಿದ್ದಾಗ, ಸಲ್ಮಾನ್ ಖಾನ್ ಚಿಂಕಾರ ಹಾಗೂ ಕೃಷ್ಣಮೃಗಗಳನ್ನು ಬೇಟೆಯಾಡಿದ್ದಾರೆ. ಬೇಟೆಯಾಡುವ ಸಂದರ್ಭದಲ್ಲಿ ಸಲ್ಮಾನ್ ಖಾನ್ ಜೊತೆಗೆ ಸೋನಾಲಿ ಬೇಂದ್ರೆ, ಸೈಫ್ ಅಲಿ ಖಾನ್, ಟಬು ಹಾಗೂ ನೀಲಂ ಕೂಡ ಇದ್ದರು.

  'ಹಮ್ ಸಾಥ್ ಸಾಥ್ ಹೇ' ಅಂತ ಜಿಪ್ಸಿ ಏರಿದ ಎಲ್ಲರೂ ಬ್ಲಾಕ್ ಬಕ್ ನ ಬೇಟೆಯಾಡಿದ್ರು. ಆದ್ರೆ, ಇಂದು ಪ್ರಕರಣದಲ್ಲಿ ದೋಷಿ ಅಂತ ಸಾಬೀತಾಗಿರುವುದು ಸಲ್ಮಾನ್ ಖಾನ್ ಮಾತ್ರ. ಉಳಿದ ನಾಲ್ವರನ್ನ ಆರೋಪದಿಂದ ಖುಲಾಸೆಗೊಳಿಸಲಾಗಿದೆ. ಅಷ್ಟಕ್ಕೂ, ಯಾವ ಮಾನದಂಡದ ಮೇಲೆ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ ಹಾಗೂ ನೀಲಂ ರನ್ನ ಕೋರ್ಟ್ ನಿರ್ದೋಷಿ ಅಂತ ಹೇಳ್ತು.? ಮುಂದೆ ಓದಿರಿ...

  ಉಳಿದ ನಾಲ್ವರು ದೋಷಿಗಳಲ್ಲ ಯಾಕೆ?

  ಉಳಿದ ನಾಲ್ವರು ದೋಷಿಗಳಲ್ಲ ಯಾಕೆ?

  ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಹಾಗೂ ನೀಲಂ ಕೃಷ್ಣಮೃಗಗಳನ್ನು ಬೇಟೆಯಾಡಿರುವುದಕ್ಕೆ ಸಾಕ್ಷ್ಯಾಧಾರ ಇಲ್ಲ. ಆದ್ರೆ, ಬೇಟೆಯಾಡುವಾಗ ಈ ನಾಲ್ವರು ಜಿಪ್ಸಿಯಲ್ಲಿ ಸಲ್ಮಾನ್ ಖಾನ್ ಜೊತೆ ಇದ್ದದ್ದಕ್ಕೆ ಪ್ರಕರಣ ದಾಖಲಾಗಿತ್ತು. ಕಾನೂನುಬಾಹಿರ ಚಟುವಟಿಕೆ ನಡೆಸಲು ಗುಂಪು ಕಟ್ಟಿಕೊಂಡ ಕಾರಣಕ್ಕೆ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಹಾಗೂ ನೀಲಂ ವಿರುದ್ಧ ಕೇಸ್ ಫೈಲ್ ಮಾಡಲಾಗಿತ್ತು. ಆದ್ರೆ, ಈ ನಾಲ್ವರನ್ನ ಈಗ ಆರೋಪದಿಂದ ಖುಲಾಸೆಗೊಳಿಸಲಾಗಿದೆ.

  ಕೃಷ್ಣ ಮೃಗ ಪ್ರಕರಣದಲ್ಲಿ ಸಲ್ಲು ಜೊತೆಗಿದ್ದ 4 ಕಲಾವಿದರ ಹಿಸ್ಟರಿಕೃಷ್ಣ ಮೃಗ ಪ್ರಕರಣದಲ್ಲಿ ಸಲ್ಲು ಜೊತೆಗಿದ್ದ 4 ಕಲಾವಿದರ ಹಿಸ್ಟರಿ

  ಸಲ್ಮಾನ್ ಮಾತ್ರ ದೋಷಿ ಯಾಕೆ?

  ಸಲ್ಮಾನ್ ಮಾತ್ರ ದೋಷಿ ಯಾಕೆ?

  ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳನ್ನು ಗುಂಡಿಕ್ಕಿ ಸಾಯಿಸಿದ ಆರೋಪ ಹೊತ್ತಿದ್ದ ಸಲ್ಮಾನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51 ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸಲ್ಮಾನ್ ಖಾನ್ ಬಂದೂಕು ಹಿಡಿದುಕೊಂಡಿದ್ದಾಗಿ ಪ್ರತ್ಯಕ್ಷದರ್ಶಿಗಳು ಸಾಕ್ಷಿ ನುಡಿದಿದ್ದರು. ಹೀಗಾಗಿ, ಸಲ್ಮಾನ್ ದೋಷಿ ಎಂದು ಸಾಬೀತಾಗಿದೆ.

  ಸಲ್ಮಾನ್ ನ ಜೈಲು ಪಾಲು ಮಾಡಿದ ಬಿಷ್ಣೋಯಿ ಸಮುದಾಯ: ಯಾರಿವರು?ಸಲ್ಮಾನ್ ನ ಜೈಲು ಪಾಲು ಮಾಡಿದ ಬಿಷ್ಣೋಯಿ ಸಮುದಾಯ: ಯಾರಿವರು?

  ಐದು ವರ್ಷ ಶಿಕ್ಷೆ

  ಐದು ವರ್ಷ ಶಿಕ್ಷೆ

  ಪೂಜನೀಯ ಭಾವದಲ್ಲಿ ಬಿಷ್ಣೋಯಿಗಳು ಕಾಣುವ ಕೃಷ್ಣಮೃಗಗಳನ್ನು ಬೇಟೆಯಾಡಿದ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ದಂಡ ವಿಧಿಸಲಾಗಿದೆ.

  ಏನಿದು ಕೃಷ್ಣಮೃಗ ಬೇಟೆ ಪ್ರಕರಣ? ನೀವು ತಿಳಿದುಕೊಳ್ಳಬೇಕಾದ ಸಂಗತಿಗಳುಏನಿದು ಕೃಷ್ಣಮೃಗ ಬೇಟೆ ಪ್ರಕರಣ? ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

  ಜೈಲು ಪಾಲಾದ ಸಲ್ಮಾನ್

  ಜೈಲು ಪಾಲಾದ ಸಲ್ಮಾನ್

  ಜೋಧ್ ಪುರದ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಸಲ್ಮಾನ್ ಖಾನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಾಳೆ ಬೆಳಗ್ಗೆ ನಡೆಯುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಸಲ್ಮಾನ್ ಖಾನ್ ಕಂಬಿ ಎಣಿಸಬೇಕು.

  English summary
  Jodhpur court has convicted Bollywood Actor Salman Khan in 1998 Blackbuck poaching case, while Saif Ali Khan, Tabu, Sonali Bendre and Neelam walk free. Why only Salman was convicted and others were let off.?
  Thursday, April 5, 2018, 18:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X