»   » ಸುದೀಪ್ 'ಈಗ'ಕ್ಕೆ ಗಡಗಡ ನಡುಗಿದ ಬೋಲ್ ಬಚ್ಚನ್

ಸುದೀಪ್ 'ಈಗ'ಕ್ಕೆ ಗಡಗಡ ನಡುಗಿದ ಬೋಲ್ ಬಚ್ಚನ್

Posted By:
Subscribe to Filmibeat Kannada

ಅಜಯ್ ದೇವಗನ್ ಹಾಗೂ ಅಭಿಷೇಕ್ ಬಚ್ಚನ್ ನಾಯಕತ್ವದ 'ಬೋಲ್ ಬಚ್ಚನ್' ಸಿನಿಮಾ ಆರಂಭಕ್ಕೆ ಭಾರೀ ಆಘಾತ ಉಂಟಾಗಿದೆ. ಬೋಲ್ ಬಚ್ಚನ್ ಚಿತ್ರದ ಬಾಕ್ಸ್ ಆಫಿಸ್ ಕಲೆಕ್ಷನ್ ಚೆನ್ನಾಗಿಯೇ ಇದೆ. ಆದರೆ, ಅಂದುಕೊಂಡಷ್ಟು ಗಳಿಕೆ ಆಗುತ್ತಿಲ್ಲ. ಕಾರಣ, ಎಸ್ ಎಸ್ ರಾಜಮೌಳಿಯವರ 'ಈಗ' ಚಿತ್ರವು ನೇರವಾಗಿ ಬೋಲ್ ಬಚ್ಚನ್ ಚಿತ್ರಕ್ಕೆ ಹೊಡೆತ ಕೊಟ್ಟಿದೆ.

ಬಾಲಿವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಕೆರಳಿಸಿರುವ ಚಿತ್ರ ಈ ಬೋಲ್ ಬಚ್ಚನ್. ಅಜಯ್ ದೇವಗನ್ ಹಾಗು ಅಭಿಷೇಕ್ ಬಚ್ಚನ್ ಬಹಳಷ್ಟು ಬೆವರು ಸುರಿಸಿ ಮಾಡಿದ ಚಿತ್ರವಿದು. ಅಷ್ಟೇ ಅಲ್ಲ, ನಿರ್ದೇಶಕ ರೋಹಿತ್ ಶೆಟ್ಟಿಯೂ ಅಷ್ಟೇ, ಈ ಚಿತ್ರಕ್ಕಾಗಿ ಸಖತ್ ಹೋಮ್ ವರ್ಕ್ ಮಾಡಿಯೇ ತೆರೆಗೆ ತಂದಿದ್ದಾರೆ. ಚಿತ್ರವೂ ಚೆನ್ನಾಗಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ...!

ಇದೇ ವೇಳೆ, ತೆಲುಗು ದಿಗ್ಗಜ, ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ತೆಲುಗು ಚಿತ್ರ 'ಈಗ', ಹಿಂದಿ, ತಮಿಳು, ಹಾಗೂ ಮಲಯಾಳಂ ಈ ಮೂರೂ ಭಾಷೆಯಲ್ಲಿ ಡಬ್ ಆಗಿ ಬಿಡುಗಡೆಯಾಗಿ ಇಡೀ ಇಂಡಿಯಾವನ್ನು ವ್ಯಾಪಿಸಿಕೊಂಡು ಬಿಟ್ಟಿದೆ. ಕನ್ನಡ ನಟ ಕಿಚ್ಚ ಸುದೀಪ್ ಅವರಂತೂ ಈ ಚಿತ್ರದ ಮೂಲಕ 'ಆಲ್ ಇಂಡಿಯಾ' ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಇಷ್ಟು ಮಾತ್ರವಲ್ಲ, ಇದೇ ವೇಳೆ ಬಿಡುಗಡೆಯಾಗಿರುವ ಪಂಜಾಬಿ ಬಹುನಿರೀಕ್ಷೆ ಚಿತ್ರ 'ಜತ್ ಅಂಡ್ ಜೂಲಿ', ಉತ್ತರ ಭಾರತವನ್ನು ವ್ಯಾಪಿಸಿಕೊಂಡಿದೆ. ಈ ಕಡೆ ದಕ್ಷಿಣ ಭಾರತದಲ್ಲಿ ಈಗ, ಆ ಕಡೆ ಉತ್ತರ ಭಾರತದಲ್ಲಿ ಜತ್ ಅಂಡ್ ಜೂಲಿ ಈ ಎರಡೂ ಚಿತ್ರಗಳ ಮಧ್ಯದಲ್ಲಿ ಸಿಕ್ಕು ಬೋಲ್ ಬಚ್ಚನ್ ಚಿತ್ರ, ಚಿತ್ರಾನ್ನವಾಗುವ ಸಂದರ್ಭ ಬಂದೊದಗಿದೆ. ಏನು ಮಾಡೋದು? ಎಂಬ ಚಿಂತೆಗೆ ಬೋಲ್ ಬಚ್ಚನ್ ಸಿಲುಕಿದೆ.

ಮುಂಜಾನೆ, ಮೊದಲ ಶೋಗೆ, ಬೋಲ್ ಬಚ್ಚನ್ ಚಿತ್ರಕ್ಕೆ ಕೇವಲ ಶೇ. 60% ರಿಂದ 70% ಕಲೆಕ್ಷನ್ ಮಾತ್ರ ಸಾಧ್ಯವಾಗಿದೆ. ಮುಂಬೈನಲ್ಲಿ ಕೂಡ, ಕೇವಲ ಶೇ. 70% ರಿಂದ 85% ಗಳಿಕೆ ಮಾತ್ರ ಸಾಧ್ಯವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕಾಗಿದ್ದ ಬೋಲ್ ಬಚ್ಚನ್, ಈ ಎರಡು ಸ್ಥಳೀಯ ಭಾಷೆಗಳ ಚಿತ್ರಗಳಿಂದ ಹಿನ್ನಡೆ ಪಡೆದಿದೆ ಎಂದರೆ, ಈಗ ಮತ್ತು ಜತ್ ಅಂಡ್ ಜೂಲಿ ಚಿತ್ರದ ಹವಾ ಹೇಗಿದೆ ಎಂಬುದನ್ನು ಊಹಿಸಿ.

ಎಸ್ ಎಸ್ ರಾಜಮೌಳಿ ಹಾಗೂ ಸುದೀಪ್ ಜೋಡಿಯ ಚಿತ್ರ ಈಗ, ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ 'ಹೌಸ್ ಫುಲ್' ಪ್ರದರ್ಶನ ಕಾಣುತ್ತಿದೆ. ರಾಜಮೌಳಿ ಚಿತ್ರವೆಂದರೆ ಸೌತ್ ಇಂಡಿಯಾದಲ್ಲಿ ಭಾರೀ ಕ್ರೇಜ್ ಸಹಜ. ಈ ಮೊದಲು ನಿರ್ದೇಶಿಸಿರುವ ಎಂಟೂ ಚಿತ್ರಗಳು ಸೂಪರ್ ಹಿಟ್ ಆಗಿದ್ದರಿಂದ ಈಗ ಚಿತ್ರಕ್ಕೆ ಭರ್ಜರಿ ನಿರೀಕ್ಷೆ ಸಹಜವಾಗಿತ್ತು. ಬಿಡುಗಡೆ ಬಳಿಕ, ನಿರೀಕ್ಷೆ ಮೀರಿ ಕ್ಲಿಕ್ ಆಗಿದೆ ಈ ಸಿನಿಮಾ. (ಏಜೆನ್ಸೀಸ್)

English summary
Ajay-Abhishek movie Bol Bachchan has good opening at Box Office, but its collection affected by Eega and Punjabi film Jatt and Julie (JAJ) on first day.
 
Please Wait while comments are loading...