For Quick Alerts
  ALLOW NOTIFICATIONS  
  For Daily Alerts

  ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್

  |

  ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಭಾರತೀಯ ನಾಗರಿಕನಲ್ಲ. ಭಾರತದಲ್ಲೆ ಹುಟ್ಟಿ ಬೆಳೆದ ಅಕ್ಷಯ್ ಬಳಿ ಭಾರತೀಯ ಪಾಸ್ಪೋರ್ಟ್ ಇಲ್ಲ. ಹಾಗಾಗಿಯೆ ಅಕ್ಷಯ್ ಚುನಾವಣೆ ಸಮಯದಲ್ಲಿ ಹೆಚ್ಚು ಟ್ರೋಲ್ ಗೆ ಗುರಿಯಾಗುತ್ತಾರೆ. ಈಗ ಅಕ್ಷಯ್ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿಗೆ ಸದರ್ಶನವೊಂದರಲ್ಲಿ ಮಾತನಾಡಿದ ಅಕ್ಷಯ್ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ ವಿಚಾರವನ್ನು ಬಹಿರಂಗ ಪಡಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

  "ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರೂ ಸಹ ತುಂಬ ನೋವಾಗುತ್ತೆ. ನಾನು ಭಾರತೀಯ ಎಂದು ನನ್ನ ರಾಷ್ಟ್ರೀಯತೆಯನ್ನು ಸಾಬೀತು ಪಡಿಸಬೇಕೆಂದು ತುಂಬ ನೋವಾಗುತ್ತಿದೆ" ಎಂದು ಹೇಳಿದ್ದಾರೆ. "ನಾನೂ ಈಗಾಗಲೆ ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದೀನಿ. ನಾನು ಭಾರತೀಯ ಆದರೆ ಪ್ರತೀ ಬಾರಿಯೂ ಅದನ್ನು ಸಾಬೀತುಪಡಿಸಲು ನನ್ನನ್ನು ಕೇಳಲಾಗುತ್ತೆ. ನನ್ನ ಹೆಂಡತಿ, ನನ್ನ ಮಕ್ಕಳು, ಕೂಡ ಭಾರತೀಯರು. ನಾನು ನನ್ನ ತೆರಿಗೆಗಳನ್ನು ಕಟ್ಟುತ್ತಿದ್ದೀನಿ, ನಾನು ಇಲ್ಲಿಯವನೆ" ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

  'ಬೆಲ್ ಬಾಟಂ' ಚಿತ್ರತಂಡದ ವಿರುದ್ದ ಮುನಿಸು: ಕೇಸ್ ದಾಖಲಿಸಿದ ರವಿ ವರ್ಮ.!'ಬೆಲ್ ಬಾಟಂ' ಚಿತ್ರತಂಡದ ವಿರುದ್ದ ಮುನಿಸು: ಕೇಸ್ ದಾಖಲಿಸಿದ ರವಿ ವರ್ಮ.!

  ಅಕ್ಷಯ್ ಕುಮಾರ್ ಬಳಿ ಸದ್ಯ ಕೆನಡಾದ ಪಾಸ್ಪೋರ್ಟ್ ಇದೆ. ಅಕ್ಷಯ್ ಕೆನಡಾದ ಪ್ರಜೆ. ಭಾರತದಲ್ಲಿ ಮತ ಚಲಾವಣೆ ಮಾಡುವ ಹಾಗಿಲ್ಲ. ಚುನಾವಣೆ ಸಮಯದಲ್ಲಿ ಮತಚಲಾಯಿಸಿ ಎಂದು ಹೇಳುವ ಅಕ್ಷಯ್ ಬಳಿಯೆ ಮತ ಚಲಾಯುಿಸುವ ಹಕ್ಕು ಇಲ್ಲ. ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿರುತ್ತಾರೆ.

  ಅಕ್ಷಯ್ ಅಭಿನಯದ 14 ಸಿನಿಮಾಗಳು ಫ್ಲಾಪ್ ಆದ ಕಾರಣ ಕೆನಡಾಗೆ ಹೋಗಿ ನೆಲೆಸುತ್ತಾರೆ. ಅಕ್ಷಯ್ ಕುಮಾರ್ ಸ್ನೇಹಿತರೊಬ್ಬರು ಕೆನಡಾಗೆ ಬಂದು ನೆಲೆಸುವಂತೆ ಹೇಳುತ್ತಾರಂತೆ. ಹಾಗಾಗಿ ಕೆನಡಾಗೆ ಹೋಗಿ ನೆಲೆಸುತ್ತಾರಂತೆ. ನಂತರ 15ನೇ ಸಿನಿಮಾ ಹಿಟ್ ಆದ ಕಾರಣ ಮತ್ತೆ ಭಾರತಕ್ಕೆ ವಾಪಾಸ್ ಆಗುತ್ತಾರೆ. ಆ ನಂತರ ಅಕ್ಷಯ್ ಪಾಸ್ಪೋರ್ಟ್ ಮಾಡಿಸುವ ಬಗ್ಗೆ ಯೋಚಿಸುವುದೇ ಇಲ್ಲ.

  ಅಕ್ಷಯ್ ಕುಮಾರ್ ಸದ್ಯ ಬಾಲಿವುಡ್ ಟಾಪ್ ನಟರಲ್ಲಿ ಒಬ್ಬರು. ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಕ್ಷಯ್ ಮೂರನೆ ಸ್ಥಾನದಲ್ಲಿ ಇದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅಕ್ಷಯ್ ಸದ್ಯ ಗುಡ್ ನ್ಯೂಸ್ ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇನ್ನು ಸಾಕಷ್ಟು ಚಿತ್ರಗಳು ಅಕ್ಷಯ್ ಬಳಿ ಇವೆ.

  English summary
  Bollywood actor Akshay Kumar applied for an Indian passport. He hurts that Akshay have to prove his nationality.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X