»   » ಪೋರ್ನ್ ಸೈಟ್ ಬ್ಯಾನ್ : ಖಾನ್, ಒಸಿ ಸುಮ್ಕಿರೋ ಮಾರಾಯ!

ಪೋರ್ನ್ ಸೈಟ್ ಬ್ಯಾನ್ : ಖಾನ್, ಒಸಿ ಸುಮ್ಕಿರೋ ಮಾರಾಯ!

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಕಮಲ್ ಖಾನ್ ಅನ್ನೋರು ಒಬ್ರಿದ್ದಾರೆ. ಈತನೇನು ದೈತ್ಯ ಪ್ರತಿಭೆಯೇನೂ ಅಲ್ಲ, ಒಂದೋ ಎರಡೋ ಸಿನಿಮಾಗಳಲ್ಲಿ, ಟಿವಿ ಧಾರವಾಹಿಗಳಲ್ಲಿ ನಟಿಸಿರಬಹುದಷ್ಟೇ..

ಆದರೆ ಈತ ಬಾಲಿವುಡ್ ನಲ್ಲಿ ಮಾತ್ರ ಅಲ್ಲಾ, ಇಡೀ ದೇಶದಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡುವುದಕ್ಕೆ ಬಹಳ ಫೇಮಸ್. ಈತನ ಬಾಯಿ ಚಪಲಕ್ಕೆ ಬಾಲಿವುಡ್ದಿನ ಬಹಳಷ್ಟು ನಾಯಕಿಯರು ಗುರಿಯಾಗಿದ್ದಾರೆ.

ಈ ಪುಣ್ಯಾತ್ಮ ಪ್ರಧಾನಿ ನರೇಂದ್ರ ಮೋದಿಯನ್ನೂ ಬಿಟ್ಟಿಲ್ಲ. ಮನಬಂದಂತೆ ಸಾಮಾಜಿಕ ತಾಣದಲ್ಲಿ ಬರೆದು, ಉಗಿಸಿಕೊಂಡು, ಒರೆಸಿಕೊಂಡ ಬಹಳಷ್ಟು ಉದಾಹರಣೆಗಳಿವೆ.

ಸದ್ಯ ಬಹುಚರ್ಚಿತ ಪೋರ್ನ್ ಸೈಟ್ ಬ್ಯಾನ್ ಮಾಡುವ ಕೇಂದ್ರ ಸರಕಾರದ ನಿರ್ಧಾರದ ಬಗ್ಗೆಯೂ ಕಮಲ್ ಖಾನ್ ಟ್ವೀಟ್ ಮಾಡಿದ್ದಾರೆ.

ಕಮಲ್ ಖಾನ್ ಪೋರ್ನ್ ಬ್ಯಾನ್ ಬಗ್ಗೆ ಮಾಡಿರುವ ಟ್ವೀಟುಗಳು ಮತ್ತು ಈ ಹಿಂದೆ ಬಾಲಿವುಡ್ ನಟಿಯರ ಬಗ್ಗೆ ನೀಡಿರುವ ಕೆಲವೊಂದು ಹೇಳಿಕೆಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಜಾಕ್ಲಿನ್ ಫೆರ್ನಾಂಡಿಸ್

ಸಲ್ಮಾನ್ ಖಾನ್ ಜೊತೆ ಕಿಕ್ ಚಿತ್ರದಲ್ಲಿ ವರ್ಕ್ ಮಾಡಿದ ನಂತರ ನನ್ನ ಹಿಂದಿ ಬಹಳಷ್ಟು ಸುಧಾರಿಸಿದೆ ಎಂದು ಆ ಚಿತ್ರದ ನಾಯಕಿ ಜಾಕ್ಲಿನ್ ಹೇಳಿದ್ದಳು. ಅದಕ್ಕೆ ಕಮಲ್ ಖಾನ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ, "ಸುಳ್ಳು ಹೇಳಬೇಡ ಡಿಯರ್, ಬರೀ ಹಿಂದಿ ಮಾತ್ರ ಇಂಪ್ರೂವ್ ಆಗಿಲ್ಲ, ಬೇರೆ ಕೆಲವು ವಿಷಯಗಳು ಇಂಪ್ರೂವ್ ಆಗಿವೆ" ಎನ್ನುವ ಹೇಳಿಕೆ ವಿವಾದಕ್ಕೆ ಈಡಾಗಿತ್ತು.

ಸೋನಂ ಕಪೂರ್

ಪೋರ್ನ್ ಬ್ಯಾನ್ ಮಾಡಬೇಕು ಎನ್ನುವ ಈಡಿಯಟ್ ಗಳನ್ನು ಮೊದಲು ಬ್ಯಾನ್ ಮಾಡಿ ಎಂದು ಸೋನಂ ಕಪೂರ್ ಹೇಳಿದ್ದಳು. ಅದಕ್ಕೆ ಕಮಲ್ ಖಾನ್ ಟ್ವೀಟ್ ಮಾಡಿದ್ದು ಹೇಗಿದೆ ನೋಡಿ..

ಲಿಸಾ ಹೇಡನ್

ಬಾಲಿವುಡ್ ನಟಿ ಲಿಸಾ ಹೇಡನ್ ಸಾಮಾಜಿಕ ತಾಣದಲ್ಲಿ, ನನ್ನ ವಿಡಿಯೋ ಒಂದನ್ನು ಹಾಕಿದ್ದೇನೆ, ಫ್ಯಾನ್ಸ್ ಗಳೆಲ್ಲಾ ನೋಡಿ ಎಂದು ಬರೆದಿದ್ದರು. ಅದಕ್ಕೂ ಮೂಗು ತೂರಿಸಿದ ಕಮಲ್ ಖಾನ್, ವಿಡಿಯೋದಲ್ಲಿ ನಿನ್ನನ್ನು ನೆಲದ ಮೇಲೆ ಕೂತು ನೋಡ್ಲಾ ಎಂದು ಅಶ್ಲೀಲವಾಗಿ ಬರೆದಿದ್ದ.

ಸನ್ನಿ ಲಿಯೋನ್ ಬಗ್ಗೆ

ಪೋರ್ನ್ ಬ್ಯಾನ್ ಮಾಡಿದ್ದಕ್ಕಾಗಿ ಮೋದಿಯವರನ್ನು ಅಭಿನಂದಿಸುತ್ತೇನೆ. ಆದರೆ ಸರಕಾರ ಸನ್ನಿ ಲಿಯೋನ್ ಪೋರ್ನ್ ಸೈಟ್ ಬ್ಯಾನ್ ಮಾಡಲೇ ಇಲ್ಲ ಎಂದು ಟ್ವೀಟ್ ಮಾಡಿ ಮತ್ತೊಂದು ವಿವಾದ ಹುಟ್ಟುಹಾಕಿದ್ದಾನೆ.

ಬಿಪಾಶ ಬಸು

ಜೋಡಿ ಬ್ರೇಕರ್ ಚಿತ್ರಕ್ಕಾಗಿ ಬಿಪಾಶ ತನ್ನ ದೇಹದ ತೂಕವನ್ನು ಕುಗ್ಗಿಸಿಕೊಂಡಿದ್ದಳು. ಚಿತ್ರದ ಒಂದು ಹಾಡಿನಲ್ಲಿ ಬಿಪಾಶ ನೃತ್ಯದ ಬಗ್ಗೆ ಕಮಲ್ ಖಾನ್, ಎರಡು ಪಪ್ಪಾಯಿ ಹಣ್ಣಿನ ಇಮೇಜ್ ಹಾಕಿ ಅದನ್ನು ಬಿಪಾಶ ಉಬ್ಬುತಗ್ಗುಗಳಿಗೆ ಹೋಲಿಸಿದ್ದ.

English summary
Actor Kamaal Rashid Khan, who is famous for making derogatory statements against Bollywood celebs as well as their film, repeated his idiotic activity once again on porn site ban.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada