»   » ಟ್ವಿಟರ್ ವಿಮರ್ಶೆ: ಶಾರುಖ್ ಖಾನ್ 'ರಯೀಸ್' ಗೆ ಶಹಬ್ಬಾಸ್

ಟ್ವಿಟರ್ ವಿಮರ್ಶೆ: ಶಾರುಖ್ ಖಾನ್ 'ರಯೀಸ್' ಗೆ ಶಹಬ್ಬಾಸ್

Posted By:
Subscribe to Filmibeat Kannada

ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಮಹೀರಾ ಖಾನ್ ಕೆಮಿಸ್ಟ್ರಿ ಇರುವ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ 'ರಯೀಸ್' ಸಿನಿಮಾ ಇಂದು(ಜನವರಿ 25) ವಿಶ್ವದಾದ್ಯಂತ ತೆರೆಕಂಡಿದೆ. ಈ ಹಿಂದೆಯೇ ಚಿತ್ರದ ಟ್ರೈಲರ್ ನೋಡಿ ಫಿದಾ ಆಗಿದ್ದ, ಶಾರುಖ್ ಖಾನ್ ಅಭಿಮಾನಿಗಳು ಇಂದು 'ರಯೀಸ್' ಚಿತ್ರವನ್ನು ಕಣ್ತುಂಬಿ ಕೊಂಡಿದ್ದಾರೆ.[ಶಾರುಖ್ 'ರಯೀಸ್' ಪ್ರಮೋಶನ್ ವೇಳೆ ವ್ಯಕ್ತಿ ಸಾವು]

ನಾವಾಜುದ್ದೀನ್ ಸಿದ್ದಿಕಿ ಸಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ರಯೀಸ್' ಚಿತ್ರಕ್ಕೆ ರಾಹುಲ್ ಢೋಲಾಕಿಯ ಆಕ್ಷನ್ ಕಟ್ ಹೇಳಿದ್ದರು. ಚಿತ್ರ ವೀಕ್ಷಿಸಿದ ಶಾರುಖ್ ಖಾನ್ ಅಭಿಮಾನಿಗಳು ಚಿತ್ರದ ಬಗ್ಗೆ ಏನಂದ್ರು ಇಲ್ಲಿದೆ ಮಾಹಿತಿ.

ಎಮೋಶನಲ್ ಡೆಪ್ತ್

#ರಯೀಸ್ ಭಾವನಾತ್ಮಕವಾಗಿ ಆಳಕ್ಕೆ ಕರೆದೊಯ್ಯುವ ಹಲವು ಅಂಶಗಳನ್ನು ಹೊಂದಿದೆ, ಉದ್ದೇಶ ಪೂರ್ವಕವಾಗಿ ಆಯ್ಕೆ ಮಾಡಲಾಗಿದೆ.

ಅದ್ಭುತ

#ರಯೀಸ್ ಸಿನಿಮಾ ಬಗ್ಗೆ ಒಂದೇ ಒಂದು ಪದದಲ್ಲಿ ಹೇಳುವುದಾದರೇ ಅದ್ಭುತ @iamsrk.

ಬ್ರಿಲಿಯಂಟ್ ಡೈಲಾಗ್

"ಹೆದರಿಕೆ ಇಲ್ಲದ ಅಭಿನಯ ಮತ್ತು ಬ್ರಿಲಿಯಂಟ್ ಡೈಲಾಗ್ ಗಳು. @iamsrk ನೀವು ನಿಜವಾಗಲು ಡೈಲಾಗ್ ನಲ್ಲಿ ರಾಕ್ ಮತ್ತು ಡೇರಿಂಗ್. ನವಾಜುದ್ದೀನ್ ಸಿದ್ದಿಕಿ ಅವರಿಂದ ಮೊತ್ತೊಮ್ಮೆ ಅತ್ಯದ್ಭುತ ಅಭಿನಯ".

ಇಂಟೆರೆಸ್ಟಿಂಗ್

#ರಯೀಸ್, ಫಸ್ಟ್ ಆಫ್ ಬೆಕ್ಕು ಮತ್ತು ಇಲಿಯಂತೆ, ಶಾರುಖ್ ಖಾನ್ ಮತ್ತು ನವಾಜುದ್ದೀನ್ ಸಿದ್ದಿಕಿ ನಡುವಿನ ಗೇಮ್ ಇಟೆರೆಸ್ಟಿಂಗ್ ಆಗಿದೆ. ಸನ್ನಿ ಲಿಯೋನ್ ಹಾಡಿಗೆ ಫ್ಯಾನ್ ಗಳ ಕೂಗು ಅತಿಯಾಗಿ ಹೆಚ್ಚಾಗುತ್ತದೆ. ಅಲ್ಲದೇ ಶಾರುಖ್ ಅವರ ಮಾಸ್ ಡೈಲಾಗ್ ಭಾರತೀಯರಿಗೆ ಶಾರ್ಪ್ ಪಂಚ್ ನೀಡುತ್ತದೆ. ಫ್ಯಾನ್‌ ಗಳು ಇದನ್ನು ತುಂಬಾ ಲವ್ ಮಾಡುತ್ತಾರೆ. ರಿಯಾಲಿಸ್ಟಿಕ್ ಆಕ್ಷನ್ ಇದೆ.

ಕ್ಲೈಮ್ಯಾಕ್ಸ್ ಭಯಂಕರ

"ರಯೀಸ್ ಕ್ಲೈಮ್ಯಾಕ್ಸ್ ತುಂಬಾ ಭಯಂಕರ ಮತ್ತು ಅದ್ಭುತವಾಗಿದೆ. ಈ ಸೀನ್ ನಲ್ಲಿ ಸೀಟಿಗೆ ಅಂಟಿಕೊಳ್ಳೋದು ಪಕ್ಕಾ..".

English summary
Bollywood actor Shahrukh Khan Starrer Raees Movie Released today(january 25). Here is 'Raees' Movie Twitter Review

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada