»   » ನಟ ವಿನೋದ್ ಖನ್ನಾ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ

ನಟ ವಿನೋದ್ ಖನ್ನಾ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ

Posted By:
Subscribe to Filmibeat Kannada

ಬಾಲಿವುಡ್ ನಟ ದಿವಂಗತ ವಿನೋದ್ ಖನ್ನಾ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಕಟ ಆಗಿದೆ. ಸಿನಿಮಾರಂಗಕ್ಕೆ ನೀಡುವ ಅತ್ಯಂತ ಪ್ರತಿಷ್ಟಿತ ಈ ಪ್ರಶಸ್ತಿಯನ್ನು ಮರಣ ನಂತರ ಅವರಿಗೆ ನೀಡಲಾಗಿದೆ. ಇಂದು 65ನೇ ರಾಷ್ಟ್ರ ಪ್ರಶಸ್ತಿ ದೆಹಲಿಯಲ್ಲಿ ಪ್ರಕಟ ಆಗಿದ್ದು, ಈ ವೇಳೆ ವಿನೋದ್ ಖನ್ನಾ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪೋಷಿಸಲಾಗಿದೆ.

1946ರ ಅಕ್ಟೋಬರ್ 6ರಂದು ಜನಿಸಿದ್ದ ನಟ ವಿನೋದ್ ಖನ್ನಾ 1968ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಅಮರ್ ಅಕ್ಬರ್ ಅಂಥೋನಿ', 'ಮೇರೇ ಅಪ್ನೆ', 'ಮೇರಾ ಗಾಂವ್ ಮೇರಾ ದೇಶ್,' 'ದಿ ಬರ್ನಿಂಗ್ ಟ್ರೈನ್', ಜೈಲ್ ಯಾತ್ರಾ ಸೇರಿದಂತೆ 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖನ್ನಾ ಅಭಿನಯಿಸಿದ್ದರು.

bollywood actor vinod khanna honoured with dada saheb phalke award

ನಟಿ ತಾರಾ ಅಭಿನಯದ 'ಹೆಬ್ಬೆಟ್ಟು ರಾಮಕ್ಕ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗೌರವ

1982ರಲ್ಲಿ ಸಿನಿಮಾ ಕ್ಷೇತ್ರದಿಂದ ನಿವೃತ್ತಿಯಾಗಲು ನಿರ್ಧರಿಸಿದ ಅವರು ಮತ್ತೆ ಐದು ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದರು. ತಮ್ಮ ಕಮ್ ಬ್ಯಾಕ್ ನಂತರ 'ಸತ್ಯಮೇವ ಜಯತೆ' ಸಿನಿಮಾ ಮಾಡಿದರು. ಸಿನಿಮಾದ ನಂತರ ರಾಜಕೀಯ ಶುರು ಮಾಡಿದ ಖನ್ನಾ ಪಂಜಾಬ್‌ನ ಗುರುದಾಸ್ ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರತಿನಿಧಿಯಾಗಿದ್ದರು.

ಇನ್ನು ಪಿತ್ತಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ವಿನೋದ್‌ ಖನ್ನಾ ತಮ್ಮ 70ನೇ ವಯಸ್ಸಿನಲ್ಲಿ ನಿಧನರಾದರು. ಕಳೆದ ವರ್ಷ ಎಪ್ರಿಲ್ ನಲ್ಲಿ ಸರ್ ಎಚ್‌.ಎನ್‌. ರಿಲಯನ್ಸ್ ಪ್ರತಿಷ್ಠಾನದ ಆಸ್ಪತ್ರೆಯಲ್ಲಿ ವಿನೋದ್ ಖನ್ನಾ ವಿಧಿವಶರಾಗಿದ್ದರು.

English summary
65th National Film Awards announced: Bollywood actor Vinod Khanna honoured with Dada Saheb Phalke Award.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X