For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್; 'RRR' ಚಿತ್ರೀಕರಣ ಮುಗಿಸಿ ಬಾಯ್ ಫ್ರೆಂಡ್ ಜೊತೆ ಪ್ರವಾಸಕ್ಕೆ ಹೊರಟ ಅಲಿಯಾ ಭಟ್

  |

  ಬಾಲಿವುಡ್ ನ ಜೋಡಿ ಹಕ್ಕಿ ಅಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮತ್ತೆ ಪ್ರವಾಸಕ್ಕೆ ಹೊರಡುವ ಮೂಲಕ ಸುದ್ದಿಯಾಗಿದ್ದಾರೆ. ಇಬ್ಬರ ಪ್ರವಾಸದ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತೆ. ಫ್ಲೈಟ್ ಹತ್ತಿ ವಿದೇಶಕ್ಕೆ ಹಾರುತ್ತಿದ್ದ ಈ ಜೋಡಿ ಈ ಬಾರಿ ಗೋವಾ ಕಡೆ ಪ್ರವಾಸಕ್ಕೆ ತೆರಳಿದ್ದಾರೆ.

  ಇಬ್ಬರು ಮುಂಬೈ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸರೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿ ಅಲಿಯಾ ಭಟ್ ಇತ್ತೀಚಿಗಷ್ಟೆ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಚಿತ್ರತಂಡ ಅಲಿಯಾ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿತ್ತು. ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಸುಮಾರು ಒಂದು ವಾರಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅಲಿಯಾ ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಗಿಸಿ ಬಾಯ್ ಫ್ರೆಂಡ್ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ.

  ಅಬ್ಬಾ..! ಅಲಿಯಾ ಭಟ್ ಸಿಬ್ಬಂದಿಗೆ 'RRR'ತಂಡ 1 ದಿನಕ್ಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿದೆಯೇ?

  ದುಬೈ ಪ್ರವಾಸ ಮುಗಿಸಿ ಬಂದಿರುವ ರಣ್ಬೀರ್

  ದುಬೈ ಪ್ರವಾಸ ಮುಗಿಸಿ ಬಂದಿರುವ ರಣ್ಬೀರ್

  ರಣ್ಬೀರ್ ಕಪೂರ್ ಇತ್ತೀಚಿಗೆ ದುಬೈ ಪ್ರವಾಸಕ್ಕೆ ತೆರಳಿದ್ದರು. ಅಲಿಯಾಗಾಗಿ ದುಬೈನಿಂದ ದಿಢೀರ್ ಮುಂಬೈಗೆ ವಾಪಸ್ ಆಗಿದ್ದಾರೆ. ಮುಂಬೈಗೆ ಬರುತ್ತಿದ್ದಂತೆ ರಣ್ಬೀರ್ ಪ್ರಿಯತಮೆ ಅಲಿಯಾ ಜೊತೆ ಗೋವಾ ಪ್ರವಾಸಕ್ಕೆ ತೆರಳಿದ್ದಾರೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಅಲಿಯಾ ಮತ್ತು ರಣ್ಬೀರ್ ಇಬ್ಬರು ಪ್ರವಾಸಕ್ಕೆ ತೆರಳಿದ್ದಾರೆ.

  ಮುಂಬೈಗೆ ವಾಪಸ್ ಆಗಿರುವ ಅಲಿಯಾ

  ಮುಂಬೈಗೆ ವಾಪಸ್ ಆಗಿರುವ ಅಲಿಯಾ

  ಅಲಿಯಾ ಭಟ್ ಕಳೆದ ಶನಿವಾರ (ಡಿ. 12) ಹೈದರಾಬಾದ್ ನಿಂದ ಮುಂಬೈಗೆ ತೆರಳಿದ್ದಾರೆ ಅಲಿಯಾ. ಅಲಿಯಾ ಸುಮಾರು 10 ಸಿಬ್ಬಂದಿಯೊಂದಿಗೆ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದ್ದರು. ಶನಿವಾರ ವಿಶೇಷ ವಿಮಾನದಲ್ಲಿ ವಾಪಸ್ ಆಗಿರುವ ಅಲಿಯಾ ವಿಮಾನದಲ್ಲಿ ತನ್ನ ಸಿಬ್ಬಂದಿಯ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದರು. ಇದೀಗ ಇಂದು ಬೆಳಗ್ಗೆ (ಡಿ.14) ರಣ್ಬೀರ್ ಜೊತೆ ಗೋವಾಗೆ ತೆರಳಿದ್ದಾರೆ.

  ಫೋಟೋ ವೈರಲ್; ಮಹೇಶ್ ಬಾಬು ಪುತ್ರಿಯನ್ನು ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಅಲಿಯಾ ಭಟ್

  ಸೀತಾ ಪಾತ್ರದಲ್ಲಿ ಅಲಿಯಾ ಅಭಿನಯ

  ಸೀತಾ ಪಾತ್ರದಲ್ಲಿ ಅಲಿಯಾ ಅಭಿನಯ

  ಆರ್ ಆರ್ ಆರ್ ಸಿನಿಮಾದಲ್ಲಿ ನಟಿ ಅಲಿಯಾ ಭಟ್ ರಾಮ್ ಚರಣ್ ಗೆ ನಾಯಕಿಯಾಗಿ ನಟಿಸಲಿದ್ದಾರೆ. ರಾಮ್ ಚರಣ್ ಚಿತ್ರದಲ್ಲಿ ಅಲ್ಲುರಿ ಸೀತಾರಾಮ ರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀತಾರಾಮ ರಾಜು ಪ್ರೇಯಸಿ ಸೀತಾ ಪಾತ್ರಕ್ಕೆ ಅಲಿಯಾ ಬಣ್ಣ ಹಚ್ಚುತ್ತಿದ್ದಾರೆ. ಪಾತ್ರಕ್ಕಾಗಿ ಅಲಿಯಾ ಈಗಾಗಲೇ ಸಾಕಷ್ಟು ತಯಾರಿಯನ್ನು ನಡೆಸಿದ್ದಾರೆ. ಜೊತೆಗೆ ತೆಲುಗು ಸಹ ಕಲಿತಿದ್ದು ತನ್ನ ಪಾತ್ರಕ್ಕೆ ಅಲಿಯಾನೇ ಡಬ್ ಮಾಡಲಿದ್ದಾರೆ.

  ಅಭಿಮಾನಿಗಳಿಗೆ ಭರ್ಜರಿ ಆಫರ್ ಕೊಟ್ಟ ಪ್ರೇಮಲೋಕ ಬೆಡಗಿ ಜೂಹಿ ಚಾವ್ಲಾ| Juhi Chawla | Filmibeat Kannada
  ಅಲಿಯಾ ಬಳಿ ಇರುವ ಸಿನಿಮಾಗಳು

  ಅಲಿಯಾ ಬಳಿ ಇರುವ ಸಿನಿಮಾಗಳು

  ಭಾರತೀಯ ಸಿನಿಮಾರಂಗದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿರುವ ಅಲಿಯಾ ಭಟ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಅಲಿಯಾ ಬಳಿ ಸದ್ಯ ಬಹುನಿರೀಕ್ಷೆಯ ಗಂಗೂಬಾಯಿ ಕಥಿಯಾವಾಡಿ, ಬ್ರಹ್ಮಾಸ್ತ್ರ ಸಿನಿಮಾಗಳಿವೆ. ಗಂಗೂಬಾಯಿ ಕಥಿಯಾವಾಡಿ ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  English summary
  Bollywood Actors Alia Bhatt and Ranbir Kapoor Have Jetted off to GOA for a Vacation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X