For Quick Alerts
  ALLOW NOTIFICATIONS  
  For Daily Alerts

  ''ಇಂದು ತುಂಬಾ ಸ್ಪೆಷಲ್ ದಿನ'' ಎಂದ ಕಂಗನಾ ರಣಾವತ್

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್‌ ವಿರುದ್ಧ ಪ್ರತಿಭಟಿಸಿದ ಏಕೈಕ ನಟಿ ಕಂಗನಾ ರಣಾವತ್. ನೆಪೋಟಿಸಂ, ಡ್ರಗ್ಸ್ ಮಾಫಿಯಾ, ಬಾಲಿವುಡ್ ಮಾಫಿಯಾ ಎಂದೆಲ್ಲ ಟೀಕಿಸಿ ಅನೇಕರ ಕೆಂಗಣ್ಣಿಗೆ ಬಿದ್ದಿದ್ದರು.

  ಈ ಟೀಕೆಯ ಪರಿಣಾಮ ಮಹಾರಾಷ್ಟ್ರ ಸರ್ಕಾರ ಹಾಗೂ ಮುಂಬೈ ಮಹಾನಗರ ಪಾಲಿಕೆ ಜೊತೆ ದ್ವೇಷ ಬೆಳಸಿಕೊಳ್ಳುವಂತಾಯಿತು. ಶಿವಸೇನಾ ಸಂಸದ ಸಂಜಯ್ ರಾವತ್ ಕಂಗನಾ ವಿರುದ್ಧ ನಿಂತರು. ಅದಕ್ಕೆ ಮುಂಬೈ ಪಾಲಿಕೆ ಪರೋಕ್ಷವಾಗಿ ಬೆಂಬಲ ನೀಡಿತು. ಕಂಗನಾ ಅವರ ಕಚೇರಿ ಅಕ್ರಮ ಎಂಬ ಆರೋಪದಲ್ಲಿ ಕಟ್ಟಡ ನೆಲಸಮ ಮಾಡಿತು. ಇದನ್ನು ಪ್ರಶ್ನಿಸಿದ ಕಂಗನಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗೆ, ಕಳೆದ ಕೆಲವು ತಿಂಗಳಿಂದ ಭಾರಿ ಚರ್ಚೆಯಲ್ಲಿದ್ದ ಕಂಗನಾಗೆ 'ಇಂದು ಸ್ಪೆಷಲ್ ದಿನ'. ಏನದು? ಮುಂದೆ ಓದಿ.....

  ಹಿಂದಿ ಸಿನಿಮಾರಂಗಕಿಂತ ತೆಲುಗು ಸಿನಿಮಾರಂಗ ಗ್ರೇಟ್ ಎಂದ ನಟಿ ಕಂಗನಾ

  ಶೂಟಿಂಗ್‌ಗೆ ಹೊರಟ ಕಂಗನಾ

  ಶೂಟಿಂಗ್‌ಗೆ ಹೊರಟ ಕಂಗನಾ

  ಲಾಕ್‌ಡೌನ್ ಕಾರಣದಿಂದ ಕಳೆದ ಆರೇಳು ತಿಂಗಳಿನಿಂದ ಚಿತ್ರೀಕರಣ ಬಂದ್ ಆಗಿತ್ತು. ಶೂಟಿಂಗ್ ಇಲ್ಲದೆ ನಟಿ ಮನೆಯಲ್ಲಿ ಕೂತಿದ್ದರು. ಇದೀಗ, ಮತ್ತೆ ತಮ್ಮ ಕೆಲಸಕ್ಕೆ ಹಾಜರ್ ಆಗುತ್ತಿದ್ದಾರೆ. ಈ ಸಂತಸವನ್ನು ಹಂಚಿಕೊಂಡಿರುವ ನಟಿ ''ಇಂದು ಬಹಳ ಸ್ಪೆಷಲ್ ದಿನ'' ಬರೆದುಕೊಂಡಿದ್ದಾರೆ.

  'ತಲೈವಿ' ಚಿತ್ರೀಕರಣದಲ್ಲಿ ಕಂಗನಾ

  'ತಲೈವಿ' ಚಿತ್ರೀಕರಣದಲ್ಲಿ ಕಂಗನಾ

  'ಪಂಗಾ' ಸಿನಿಮಾದ ಯಶಸ್ಸಿನ ನಂತರ ಕಂಗನಾ ರಣಾವತ್ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ. ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ತಯಾರಾಗುತ್ತಿರುವ 'ತಲೈವಿ' ಚಿತ್ರೀಕರಣಕ್ಕೆ ಇಂದಿನಿಂದ ಭಾಗಿಯಾಗುತ್ತಿದ್ದಾರೆ. ಎಲ್‌ ವಿಜಯ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

  ಕಂಗನಾ ರಣೌತ್‌ ಭೇಟಿ: ಸಂಚಾರಿ ವಿಜಯ್ ಹಂಚಿಕೊಂಡ ಅನುಭವ

  ದಕ್ಷಿಣ ಭಾರತಕ್ಕೆ ಕಂಗನಾ!

  ದಕ್ಷಿಣ ಭಾರತಕ್ಕೆ ಕಂಗನಾ!

  ತಲೈವಿ ಚಿತ್ರೀಕರಣ ನಿಮಿತ್ತ ಇಂದು ದಕ್ಷಿಣ ಭಾರತದ ಕಡೆ ಕಂಗನಾ ರಣಾವತ್ ಹೊರಟಿದ್ದಾರೆ. ಜಯಲಲಿತಾ ಅವರ ಬಯೋಪಿಕ್ ಸಿನಿಮಾದ ಹೆಚ್ಚು ಭಾಗದ ಚಿತ್ರೀಕರಣ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನಡೆಯಲಿದೆ. ಹೀಗಾಗಿ, ಕಂಗನಾ ಸೌತ್ ಕಡೆ ಪ್ರಯಾಣ ಆರಂಭಿಸಿದ್ದಾರೆ.

  ಅಕ್ಷಯ್ ಕುಮಾರ್ ಮತ್ತು ಮೋದಿಗೆ ಒಟ್ಟಿಗೆ ಟಾಂಗ್ ಕೊಟ್ಟ ರಮ್ಯಾ | Filmibeat Kannada
  ಎಂಜಿಆರ್, ಕರುಣಾನಿಧಿ ಪಾತ್ರದಲ್ಲಿ ಯಾರು?

  ಎಂಜಿಆರ್, ಕರುಣಾನಿಧಿ ಪಾತ್ರದಲ್ಲಿ ಯಾರು?

  ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸುತ್ತಿದ್ದು, ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ, ಕರುಣಾನಿಧಿ ಪಾತ್ರದಲ್ಲಿ ಬಹುಭಾಷ ನಟ ಪ್ರಕಾಶ್ ರಾಜ್, ಶೋಬನ್‌ ಬಾಬು ಪಾತ್ರದಲ್ಲಿ ಜಿಶು ಸೇನಾಗುಪ್ತಾ ಹಾಗೂ ಶಶಿಕಲಾ ಪಾತ್ರದಲ್ಲಿ ಪೂರ್ಣ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Today is a very special day for actress Kangana Ranaut. because, she starting THALAIVI shoot from october 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X