Don't Miss!
- News
'ರಾಜ್ಯದ ಜನ ಮತ್ತೆ ಬಿಎಸ್ ಯಡಿಯೂರಪ್ಪರನ್ನು ನಂಬುವುದಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವರ್ಷದ ಬಳಿಕ ಭಾರತಕ್ಕೆ ಬಂದ ಸೋನಂ: ಅಪ್ಪನ್ನು ತಬ್ಬಿಕೊಂಡು ಕಣ್ಣೀರಿಟ್ಟ ನಟಿ
ಬಾಲಿವುಡ್ ಖ್ಯಾತ ನಟಿ ಸೋನಮ್ ಕಪೂರ್ ಸುಮಾರು ಒಂದು ವರ್ಷದ ಬಳಿಕ ಭಾರತಕ್ಕೆ ವಾಪಸ್ ಆಗಿದ್ದಾರೆ. ಪತಿ ಆನಂದ್ ಅಹುಜಾ ಜೊತೆ ಲಂಡನ್ ನಲ್ಲಿ ನೆಲೆಸಿದ್ದ ನಟಿ ಸೋನಮ್ ನಿನ್ನೆ ತಡರಾತ್ರಿ ಮುಂಬೈಗೆ ವಾಪಸ್ ಆಗಿದ್ದಾರೆ. ಮಗಳನ್ನು ಸ್ವಾಗತಿಸಲು ಸೋನಮ್ ತಂದೆ, ನಟ ಅನಿಲ್ ಕಪೂರ್ ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.
ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಸೋನಮ್, ಅಪ್ಪ ಅನಿಲ್ ಕಪೂರ್ ಅವರನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ. ತಂದೆ ಮಗಳ ಭಾವುಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರ್ಷದ ಬಳಿಕ ತಂದೆಯನ್ನು ನೋಡುತ್ತಿರುವ ಸೋನಮ್ ವಿಮಾನ ನಿಲ್ದಾಣದಲ್ಲೇ ಭಾವುಕರಾದರು, ಅಪ್ಪನನ್ನು ನೋಡಿ ಸಂತೋಷ ಪಟ್ಟ ಸೋನಮ್ ತಂದೆಯ ಕೈ ಹಿಡಿದು ಮನೆಗೆ ಸಾಗಿದರು.
ನಟಿ ಸೋನಮ್ ತನ್ನ ತವರಿಗೆ ವಾಪಸ್ ಆಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದರು. ವಿಮಾನದಲ್ಲಿ ಕುಳಿತಿರುವ ಫೋಟೋವನ್ನು ಶೇರ್ ಮಾಡುವ ಮೂಲಕ ಮನೆಗೆ ಬರುತ್ತಿರುವುದಾಗಿ ಹೇಳಿದ್ದರು. ಪತಿ ಅನಂದ್ ಅಹುಜಾ ಏರ್ ಪೋರ್ಟ್ ವರೆಗೂ ಬಂದು ಪತ್ನಿಯನ್ನು ಕಳುಹಿಸಿಕೊಟ್ಟಿದ್ದರು.
ಸೋನಮ್ ಅಲ್ಲಿಂದ ಹೊರಡುತ್ತಿದ್ದಂತೆ ಪತಿ ಆನಂದ್, ಸೋನಮ್ ಫೋಟೋ ಶೇರ್ ಮಾಡಿ 'ಮಿಸ್ ಯೂ' ಎಂದು ಬರೆದುಕೊಂಡಿದ್ದರು, ಪತಿಯ ಪೋಸ್ಟ್ ಹಂಚಿಕೊಂಡು 'ಮಿ ಯು ಟೂ' ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನು ಸೋನಮ್ ವಾಪಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸೋನಮ್ ಗರ್ಭಿಣಿನಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಸೋನಮ್ ಧರಿಸಿದ್ದ ಉಡುಪಿನಲ್ಲಿ ಬೇಬಿ ಬಂಪ್ ಕಾಣುತ್ತಿದೆ, ಗರ್ಭಿಣಿ ಇರಬಹುದು' ಎಂದು ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಸೋನಮ್ 2020ರಿಂದ ಲಂಡನ್ ನಲ್ಲೇ ಇದ್ದರು. ಕೋವಿಡ್-19 ಮತ್ತು ಕೆಲಸದ ನಡುವೆ ಕುಟುಂಬವನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ದೆಹಲಿ ಮೂಲದ ಆನಂದ್ ಅಹುಜಾ ಜೊತೆ ಸೋನಮ್ 2018ರಲ್ಲಿ ಹಸೆಮಣೆ ಏರಿದ್ದರು. ಆನಂದ್ ದೆಹಲಿ ಮತ್ತು ಲಂಡನ್ ಅಂತ ಓಡಾಡುತ್ತಿರುತ್ತಾರೆ. ಕಳೆದ ವರ್ಷದ ಲಾಕ್ ಡೌನ್ ಬಳಿಕ ಸೋನಮ್ ಭಾರತಕ್ಕೆ ಬಂದಿರಲಿಲ್ಲ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸೋನಮ್ ಕೊನೆಯದಾಗಿ ಜೊಯಾ ಫ್ಯಾಕ್ಟರ್ ನಲ್ಲಿ ಕಾಣಿಸಿಕೊಂಡಿದ್ದರು. ಸೈತ್ ಸ್ಟಾರ್ ದುಲ್ಕರ್ ಸಲ್ಮಾನ್ ಜೊತೆ ತೆರೆಹಂಚಿಕೊಂಡಿದ್ದರು. ಮತ್ತು ಎಕ ವರ್ಸಸ್ ಎಕೆ ಸಿನಿಮಾದಲ್ಲೂ ನಟಿಸಿದ್ದರು. ಬಳಿಕ ಮತ್ತೆ ತೆರೆಮೇಲೆ ಕಾಣಿಸಿಕೊಂಡಿಲ್ಲ.