For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ 'ಜಾನ್ ಲೇವಾ 555'ಕ್ಕೆ ಕನ್ನಡತಿ ಕಲ್ಪನಾ

  |

  ಬಾಲಿವುಡ್ ನಟಿ ಶ್ರೀದೇವಿ ಕುರಿತಾದ ಚಿತ್ರವೊಂದು ತೆರೆಗೆ ಬರುತ್ತಿದೆ. ಹಿಂದೊಮ್ಮೆ ದಶಕಗಳ ಕಾಲ ಬಾಲಿವುಡ್ ಚಿತ್ರರಂಗದಲ್ಲಿ 'ನಂ 1' ಸ್ಥಾನದಲ್ಲಿ ಅಕ್ಷರಶಃ ರಾಣಿಯಾಗಿ ಮೆರೆದಿದ್ದ ಶ್ರೀದೇವಿ, ಇಂದೂ ಕೂಡ ಆಗಾಗ ನಟಿಸುತ್ತಾ ಸಂಪೂರ್ಣವಾಗಿ ತೆರೆಮೆರೆಗೆ ಸರಿಯದ ಅಭಿನೇತ್ರಿ. ಇಂಥ ಶ್ರೀದೇವಿ ಕುರಿತಾಗಿ ಸದ್ಯದಲ್ಲೇ ತೆರೆಗೆ ಬರಲಿರುವ ಚಿತ್ರದ ಹೆಸರು 'ಜಾನ್ ಲೇವಾ 555'. ಇನ್ನೊಂದು ವಿಶೇಷವೆಂದರೆ ಚಿತ್ರದಲ್ಲಿ 'ಶ್ರೀದೇವಿ' ಪಾತ್ರದಲ್ಲಿ ನಟಿಸಿರುವುದು ಕನ್ನಡತಿ 'ಕಲ್ಪನಾ ಪಂಡಿತ್'.

  ಸಖತ್ ಮಾಡರ್ನ್ ಹಾಗೂ ಸಿಕ್ಕಾಪಟ್ಟೆ ಹೈಟ್ ಇರುವ ಈ ಕಲ್ಪನಾ ಪಂಡಿತ್ ಕನ್ನಡತಿ, ಮೈಸೂರಿನವರು. ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುವ ಕಲ್ಪನಾ ಪಂಡಿತ್ ಅಮೆರಿಕಾದಲ್ಲಿ ಡಾಕ್ಟರ್. ಅಲ್ಲಿ 'ಎಮರ್ಜನ್ಸಿ ಡಾಕ್ಟರ್' ವಿಭಾಗದಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿರುವ ಕಲ್ಪನಾ, ಆ ವೃತ್ತಿಯಲ್ಲಿರುವಷ್ಟೇ ಹೊತ್ತು ವೈದ್ಯೆ, ನಂತರ ನಟಿ. ಅದ್ಯಾಕೆ ಅಂದರೆ, ಅವರಿಗೆ ಸಿನಿಮಾದಲ್ಲಿ ಆಸಕ್ತಿ ತೀರಾ ಜಾಸ್ತಿ. ಹೀಗಾಗಿಯೇ 'ಎಮರ್ಜನ್ಸಿ ಡಾಕ್ಟರ್' ಅಷ್ಟೇ!

  ಇದೀಗ ಸಂದೀಪ್ ಮುಲಾನಿ ನಿರ್ದೇಶನದ ಶ್ರೀದೇವಿ ಕುರಿತಾದ ಚಿತ್ರದಲ್ಲಿ ನಟಿಸಿರುವ ಕಲ್ಪನಾ ಪಂಡಿತ್ ಇದನ್ನು ತಾವೇ ನಿರ್ಮಿಸಿದ್ದಾರೆ ಕೂಡ. ಈ ಮೊದಲು 'ಜೋ ಜೋ ಲಾಲಿ' ಎಂಬ ಕಿರುಚಿತ್ರವನ್ನು ನಿರ್ಮಿಸಿ ಅದರಲ್ಲಿ ತಾವೇ ನಾಯಕಿಯಾಗಿ ನಟಿಸಿರುವ ಕಲ್ಪನಾ, ಎಂಎಫ್ ಹುಸೇನ್ ನಿರ್ದೇಶನದ ಮಾಧುರಿ ದೀಕ್ಷಿತ್ ನಟನೆಯ 'ಗಜಗಾಮಿನಿ' ಚಿತ್ರದಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲ, 'ಮೋಕ್ಷ್', 'ಓಂ', 'ಪದ್ಮಶ್ರೀ ಲಾಲು ಪ್ರಸಾದ್', 'ಅನುಭವ್', 'ಲವ್ ಕಿಚಡಿ' ಮುಂತಾದವು ಕಲ್ಪನಾ ನಟಿಸಿರುವ ಕೆಲವು ಚಿತ್ರಗಳು.

  ಇದೀಗ ಮೋಹಕ ನಟಿ ಶ್ರೀದೇವಿ ಪಾತ್ರದಲ್ಲಿ ನಟಿಸಿ ಗಮನಸೆಳೆಯಲಿರುವ ಕಲ್ಪನಾಗೆ, ಚಿತ್ರನೋಡಿ ಸ್ವತಃ ಶ್ರೀದೇವಿ ಕರೆ ಮಾಡಿದ್ದಾರಂತೆ. ಈ ಕುರಿತು ಕಲ್ಪನಾ "ಅದೊಂದು ದಿನ ಶ್ರೀದೇವಿಯವರು ಕರೆ ಮಾಡಿ ಚಿತ್ರ ನೋಡಿದ್ದೇನೆ, ತುಂಬಾ ಚೆನ್ನಾಗಿ ಮಾಡಿದ್ದೀಯಾ ಎಂದು ಹೊಗಳಿದ್ದಾರೆ. ನನಗೆ ನಿಜಕ್ಕೂ ರೋಮಾಂಚನವಾಗಿದೆ" ಎಂದಿದ್ದಾರೆ. ಒಟ್ಟಿನಲ್ಲಿ ಶ್ರೀದೇವಿ ಕುರಿತಾಗಿ ಚಿತ್ರವೊಂದು ಸಿದ್ಧವಾಗಿದೆ. ಅದರಲ್ಲಿ ಕನ್ನಡತಿ ಕಲ್ಪನಾ ದರ್ಶನವಾಗಲಿದೆ. (ಏಜೆನ್ಸೀಸ್)

  English summary
  Everyone knows Bollywood Actress Sridevi. Now, a movie is to come soon on her titled 'Janleva 555. Kannada Actress Kalpana Pandit, who is in Doctor profession in USA acted and produced this Janleva 555 Movie.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X