»   » ಅಮ್ಮ ರಾಣಿ ಮುಖರ್ಜಿಗೆ ಶುಭಾಶಯಗಳ ಮಹಾಪೂರ

ಅಮ್ಮ ರಾಣಿ ಮುಖರ್ಜಿಗೆ ಶುಭಾಶಯಗಳ ಮಹಾಪೂರ

Posted By:
Subscribe to Filmibeat Kannada

ಕೃಷ್ಣ ಸುಂದರಿ, ಬಾಲಿವುಡ್ ನ ಬಹುಬೇಡಿಕೆಯ ನಟಿ ರಾಣಿ ಮುಖರ್ಜಿ - ಫಿಲ್ಮ್ ಮೇಕರ್ ಆದಿತ್ಯ ಛೋಪ್ರಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮುಂಬೈನ ಬ್ರೀಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿನ್ನೆ (ಬುಧವಾರ, ಡಿಸೆಂಬರ್ 9) ಮುದ್ದಾದ ಹೆಣ್ಣು ಮಗುವಿಗೆ ರಾಣಿ ಮುಖರ್ಜಿ ಜನ್ಮ ನೀಡಿದ್ದಾರೆ.

ಈ ವಿಚಾರವನ್ನ ಆದಿತ್ಯ ಛೋಪ್ರಾ ಸಹೋದರ ಉದಯ್ ಛೋಪ್ರಾ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದರು. ಕಾಡ್ಗಿಚ್ಚಿನಂತೆ ಈ ಸಿಹಿ ಸುದ್ದಿ ಹಬ್ಬುತ್ತಿದ್ದಂತೆ, ಟ್ವಿಟ್ಟರ್ ನಲ್ಲಿ ದಂಪತಿಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. [ಬಾಲಿವುಡ್ ನಟಿ ರಾಣಿ ಮುಖರ್ಜಿ ಮಡಿಲಲ್ಲಿ ಮುದ್ದು ರಾಜಕುಮಾರಿ]

ಕರಣ್ ಜೋಹರ್, ರಿಶಿ ಕಪೂರ್, ಪರಿಣಿತಿ ಛೋಪ್ರಾ ಸೇರಿದಂತೆ ಬಾಲಿವುಡ್ ನ ಗಣ್ಯಾತಿಗಣ್ಯರು ರಾಣಿ ಮುಖರ್ಜಿ-ಆದಿತ್ಯ ಛೋಪ್ರಾ ದಂಪತಿಗೆ ಶುಭಾಶಯ ಕೋರಿದ್ದಾರೆ. ಕೆಲವು ಟ್ವೀಟ್ಸ್ ಇಲ್ಲಿದೆ ನೋಡಿ.....

ಅಮಿತಾಬ್ ಬಚ್ಚನ್

''ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಆದಿ ಛೋಪ್ರಾ ಮತ್ತು ರಾಣಿ ಮುಖರ್ಜಿಗೆ ಹೆಣ್ಣು ಮಗು ಜನಿಸಿದೆ. 'ಆದಿರಾ' ಆರೋಗ್ಯವಾಗಿದ್ದಾಳೆ'' - ಅಮಿತಾಬ್ ಬಚ್ಚನ್

ಕರಣ್ ಜೋಹರ್

''ಸುಂದರ ಹೆಣ್ಣು ಮಗುವಿಗೆ ಇಂದು ನಾನು ಅಂಕಲ್ ಆಗಿದ್ದೇನೆ. ರಾಣಿ ಮುಖರ್ಜಿ ಮತ್ತು ಆದಿಗೆ ಹೆಣ್ಣು ಮಗುವಾಗಿದೆ!!'' - ಕರಣ್ ಜೋಹರ್

ರಿಶಿ ಕಪೂರ್

''ರಾಣಿ ಮತ್ತು ಆದಿತ್ಯ ಛೋಪ್ರಾ ತಂದೆ-ತಾಯಿ ಆಗಿದ್ದಾರೆ. ಮಗು ಹೆಸರು ಆದಿರಾ. ಶುಭಾಶಯಗಳು!'' - ರಿಶಿ ಕಪೂರ್

ಪರಿಣಿತಿ ಛೋಪ್ರಾ

''ಹೆಣ್ಣು ಮಗು. ಆದಿರಾ ಹುಟ್ಟಿರುವುದು ಖುಷಿಯಾಗಿದೆ!!'' - ಪರಿಣಿತಿ ಛೋಪ್ರಾ

ಉದಯ್ ಛೋಪ್ರಾ

''ಹೆಣ್ಣು ಮಗು!!!!'' - ಉದಯ್ ಛೋಪ್ರಾ

English summary
Bollywood celebrities have taken their twitter account to send congratulatory messages to the new mother Rani Mukerji, and father, Aditya Chopra. The couple, is blessed with a baby girl and has named, Adira.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada