Don't Miss!
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ: ಮತ್ತೆ ಖ್ಯಾತೆ ತೆಗೆದ ಕಮಾಲ್!
ಎರಡು ದಕ್ಷಿಣದ ಸಿನಿಮಾಗಳು ಭಾರತದ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ದಾಂಧಲೆ ಎಬ್ಬಿಸಿದ್ದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನೊಂದು ಕಡೆ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ ಕಮಲ್ ಹಾಸನ್ ಅಭಿನಯದ 'ವಿಕ್ರಂ' ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ.
ದಕ್ಷಿಣ ಭಾರತದಲ್ಲಿ ಎರಡು ಸಿನಿಮಾಗಳ ವಿಜಯೋತ್ಸವ ನಡೆಯುತ್ತಿದೆ. 'ಕೆಜಿಎಫ್ 2' ಉತ್ತರದಲ್ಲೂ ದಾಖಲೆ ಬರೆದು ಬಂದಿದೆ. ಇನ್ನೊಂದು ಕಡೆ 'ವಿಕ್ರಂ' ವಿದೇಶದಲ್ಲಿಯೂ ಅಬ್ಬರಿಸುತ್ತಿದೆ. ದಕ್ಷಿಣದಲ್ಲಿ ಈ ಎರಡೂ ಸಿನಿಮಾ ಗೆಲುವಿನ ಖುಷಿಯಲ್ಲಿದ್ದರೆ, ಅದೇ ಉತ್ತರದ ವಿವಾದಾತ್ಮಕ ವಿಮರ್ಶಕ 'ಕೆಜಿಎಫ್ 2' ಸಿನಿಮಾ ವಿರುದ್ಧ ಮತ್ತೆ ತಿರುಗಿಬಿದ್ದಿದ್ದಾರೆ.
ಸಾಗರದ
ಕೆಳದಿ
ಅರಸರ
ಕಲ್ಯಾಣಿಯನ್ನು
ಜೀರ್ಣೋದ್ಧಾರ
ಮಾಡಿದ
ಯಶ್
'ಯಶೋಮಾರ್ಗ'
Recommended Video

ಕನ್ನಡದ ಮಟ್ಟಿಗೆ 'ಕೆಜಿಎಫ್ 2' ಸಾಧನೆ ಬಹಳ ದೊಡ್ಡದೇ. ಕನ್ನಡಿಗರಷ್ಟೇ ಅಲ್ಲ. ಇಡೀ ವಿಶ್ವದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳೂ ಕೂಡ 'ಕೆಜಿಎಫ್ 2' ಸಿನಿಮಾವನ್ನು ನೋಡಿ ಮೆಚ್ಚಿದ್ದಾರೆ. ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ಗೆ ಭೇಷ್ ಎಂದಿದ್ದಾರೆ. ಹೀಗಿದ್ದರೂ ಬಾಲಿವುಡ್‌ನ ವಿವಾದಾತ್ಮಕ ವಿಮರ್ಶಕ ಕಮಾಲ್ ಆರ್ ಖಾನ್ 'ಕೆಜಿಎಫ್ 2' ವಿರುದ್ಧ ಇಲ್ಲ ಸಲ್ಲದ ಟೀಕೆಗಳನ್ನು ಮಾಡುತ್ತಲೇ ಇದ್ದಾರೆ.

'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ
'ಕೆಜಿಎಫ್ 2' ಸಿನಿಮಾ ಬಿಡುಗಡೆಯಾದಲ್ಲಿಂದ ಒಂದಲ್ಲಾ ಒಂದು ವಿಷಯಕ್ಕೆ ಖ್ಯಾತೆ ತೆಗೆಯುತ್ತಲೇ ಇದ್ದಾರೆ. 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದರೂ, ಕಮಾಲ್ ಆರ್ ಖಾನ್ ಮಾತ್ರ ನೆಗೆಟಿವ್ ಆಗಿ ಟ್ವೀಟ್ ಮಾಡುತ್ತಲೇ ಇದ್ದರು. ಈಗ 'ವಿಕ್ರಂ' ಸಿನಿಮಾ ಬಿಡುಗಡೆ ಬಳಿಕ ಮತ್ತೆ ಟೀಕಾ ಪ್ರಹಾರವನ್ನು ಮುಂದುವರೆಸುತ್ತಲೇ ಇದ್ದಾರೆ. ಮತ್ತೆ ಟ್ವೀಟ್ ಮಾಡಿ 'ವಿಕ್ರಂ ಮುಂದೆ 'ಕೆಜಿಎಫ್ 2 ಬಚ್ಚಾ' ಎಂದು ಕಮೆಂಟ್ ಮಾಡಿದ್ದಾರೆ. ಇದು ಯಶ್ ಅಭಿಮಾನಿಗಳನ್ನು ಮತ್ತೆ ಕೆರಳುವಂತೆ ಮಾಡಿದೆ.
'ಕೆಜಿಎಫ್
2'
ಭರ್ಜರಿ
50
ದಿನ:
ಯಶ್-ಪ್ರಶಾಂತ್
ನೀಲ್
ಬರೆದ
ದಾಖಲೆಯೇನು?

ಏನಂತಿದ್ದಾರೆ ಯಶ್ ಫ್ಯಾನ್ಸ್?
ಕಿರಿಕ್ ವಿಮರ್ಶಕ ಕಮಾಲ್ ಆರ್ ಖಾನ್ ಮತ್ತೆ ಟೀಕೆ ಮಾಡುತ್ತಿದ್ದಂತೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. "ಕೆಜಿಎಫ್ ಜೊತೆ ಹೋಲಿಕೆ ಮಾಡಿದ ಎಲ್ಲಾ ಸಿನಿಮಾಗಳು ಇತ್ತೀಚೆಗೆ ಟ್ರೆಂಡ್ ಆಗುತ್ತಿವೆ. ಆದರೆ, ಬೀಟ್ ಮಾಡುವುದಕ್ಕೆ ಸಾಧ್ಯವಾಗಿಲ್ಲ. ವಿರೋಧಿಸುವವರು ಈ ಬಾರಿ ಕೂಡ ಅಳುತ್ತಾರೆ." ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ಕೆಜಿಎಫ್ ಅಂದ್ರೆ ಕೆಜಿಎಫ್ ಅದರ ಸರಿಸಮನಾಗಿ ಯಾವುದೂ ಬರಲು ಸಾಧ್ಯವಿಲ್ಲ." ಎಂದಿದ್ದಾರೆ. ಮತ್ತೊಬ್ಬರು " ಕೆಜಿಎಫ್ 2 ಹಾಲಿವುಡ್ ಲೆವೆಲ್ ಸಿನಿಮಾ" ಎಂದು ತಿರುಗೇಟು ನೀಡಿದ್ದಾರೆ.

'ಕೆಜಿಎಫ್ 2' ವಿರೋಧಿಸಿದ್ದ ಕಮಲ್
'ಕೆಜಿಎಫ್ 2' ವಿರುದ್ಧ ಕಮಾಲ್ ಆರ್ ಖಾನ್ ತಿರುಗಿಬಿದ್ದಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಟೀಕೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಯಶ್ ಫೋಟೊವನ್ನು ಶೇರ್ ಮಾಡಿ ಬೋಜ್‌ಪುರಿ ನಟನಿದ್ದಂತೆ ಇದ್ದೀಯಾ ಎಂದಿದ್ದರು. ಆಗಲೂ ಯಶ್ ಫ್ಯಾನ್ಸ್ ತಿರುಗಿಬಿದ್ದಿದ್ದರು. 'ಕೆಜಿಎಫ್ 2' ಸಿನಿಮಾ ರಿಲೀಸ್ ಆದಾಗಲೂ "ಸಿನಿಮಾ ನೋಡಿ ಹಣ, ಸಮಯ ವ್ಯರ್ಥ" ಎಂದು ಕಮೆಂಟ್ ಮಾಡಿದ್ದರು.
'ಕೆಜಿಎಫ್
2'
ಬಳಿಕ
ಪ್ರಭಾಸ್
ಮೇಲೆ
ಹೆಚ್ಚಿದ
ಒತ್ತಡ:
ಪ್ರಶಾಂತ್
ನೀಲ್ಗೆ
ಸ್ಪೆಷಲ್
ಕಾಲ್ಶೀಟ್!

ಎರಡೂ ದಕ್ಷಿಣದ ಸಿನಿಮಾಗಳೇ
'ಕೆಜಿಎಫ್ 2' ಹಾಗೂ 'ವಿಕ್ರಂ' ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿವೆ. 'ಕೆಜಿಎಫ್ 2' ಈಗಾಗಲೇ ₹1250 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಇನ್ನೊಂದು ಕಡೆ 'ವಿಕ್ರಂ' ಸಿನಿಮಾ ₹150 ಕೋಟಿ ದಾಟಿದೆ. ಈ ಎರಡೂ ಸಿನಿಮಾ ದಕ್ಷಿಣದ ಸಿನಿಮಾಗಳೇ. ಇವೆರಡರ ಮಧ್ಯೆ ತಂದಿಡುವ ಕೆಲಸವನ್ನು ಕಮಾಲ್ ಆರ್ ಖಾನ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.