For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ಕಿರುಕುಳ: ಖ್ಯಾತ ಬಾಲಿವುಡ್ ನಟ ವಿಜಯ್ ರಾಜ್ ಬಂಧನ

  |

  ಲೈಂಗಿಕ ಕಿರುಕುಳ ಆರೋಪದಡಿ ಖ್ಯಾತ ಬಾಲಿವುಡ್ ನಟ ವಿಜಯ್ ರಾಜ್ ಅನ್ನು ನಿನ್ನೆ (ನವೆಂಬರ್ 02) ರಂದು ಮಹಾರಾಷ್ಟ್ರದ ಗೋಂಡಿಯಾ ಪೊಲೀಸರು ಬಂಧಿಸಿದ್ದಾರೆ.

  ವಿಜಯ್ ರಾಜ್ ಚಿತ್ರೀಕರಣದ ವೇಳೆ ಚಿತ್ರೀಕರಣ ಗುಂಪಿನಲ್ಲಿದ್ದ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ನಂತರ ಅವರಿಗೆ ಜಾಮೀನು ಸಹ ನೀಡಲಾಗಿದೆ.

  ನಿಜಯ್ ರಾಜ್ 'ಶೇರ್ನಿ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ಚಿತ್ರತಂಡದಲ್ಲಿದ್ದ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾ ಬಾಲನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಶೇರ್ನಿ ಸಿನಿಮಾದ ಚಿತ್ರೀಕರಣವನ್ನು ಪ್ರಕರಣದ ನಂತರ ಸ್ಥಗಿತಗೊಳಿಸಲಾಗಿದೆ.

  ಗೋಂಡಿಯಾ ಜಿಲ್ಲೆಯ ಎಸ್‌ಪಿ ಅತುಲ್ ಕುಲಕರ್ಣಿ ನೀಡಿರುವ ಮಾಹಿತಿಯಂತೆ, ಯುವತಿಯೊಬ್ಬರು, ವಿಜಯ್ ರಾಜ್ ವಿರುದ್ಧ ದೂರು ನೀಡಿದ್ದರಂತೆ. ದೂರು ಆಧರಿಸಿ ವಿಜಯ್ ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ.

  ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth

  ವಿಜಯ್ ರಾಜ್ ಬಾಲಿವುಡ್‌ನ ಖ್ಯಾತ ನಟರಲ್ಲಿ ಒಬ್ಬರು, ಹಾಸ್ಯ ಪಾತ್ರ, ವಿಲನ್, ಪೋಷಕ ಪಾತ್ರಗಳಲ್ಲಿ ಅವರು ಮಿಂಚಿದ್ದಾರೆ. ರನ್, ವೆಲ್‌ಕಮ್, ಡೆಲ್ಲಿ ಬೆಲ್ಲಿ, ಕ್ಯಾ ದಿಲ್ಲಿ ಕ್ಯಾ ಲಾಹೋರ್, ಬಾಂಬೆ ಟು ಗೋವಾ, ಕಂಪೆನಿ ಇನ್ನೂ ಹಲವಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

  English summary
  Famous actor Vijay Raaz arrested for molesting a young girl in shooting set of movie Sherni.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X