Don't Miss!
- News
ಕಿಚ್ಚ ಸುದೀಪ್ ಭೇಟಿಯ ಹಿಂದಿನ ಕಾರಣ ಬಹಿರಂಗಪಡಿಸಿದ ಡಿಕೆಶಿ: ಏನದು ಕುತೂಹಲಕರ ಸಂಗತಿ?
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪವನ್ ಕಲ್ಯಾಣ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ: ದಕ್ಷಿಣಕ್ಕೆ ಬಂದಿದ್ದು ಇದೇ ಮೊದಲು
ನಟ ಪವನ್ ಕಲ್ಯಾಣ್ ರಾಜಕೀಯದ ಜೊತೆಗೆ ಸಿನಿಮಾಗಳಲ್ಲಿಯೂ ಬಹಳ ಬ್ಯುಸಿಯಾಗಿದ್ದಾರೆ. ಆಂಧ್ರದ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಮುನ್ನ ಒಪ್ಪಿಕೊಂಡಿರುವ ಸಿನಿಮಾಗಳು ಪಠ-ಪಠನೇ ಮುಗಿಸುವ ಧಾವಂತದಲ್ಲಿಯೂ ಇದ್ದಾರೆ ಪವನ್ ಕಲ್ಯಾಣ್.
ಪವನ್ ಕಲ್ಯಾಣ್ ಪ್ರಸ್ತುತ ಎರಡು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪವನ್ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾಕ್ಕೆ 'ಹರಿಹರ ವೀರ ಮಲ್ಲು' ಎಂದು ಹೆಸರಿಡಲಾಗಿದೆ.
ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು ಈ ಸಿನಿಮಾದ ಒಂದು ಮುಖ್ಯ ಪಾತ್ರಕ್ಕಾಗಿ ಬಾಲಿವುಡ್‌ನ ಸ್ಟಾರ್ ನಟರೊಬ್ಬರನ್ನು ಕರೆತರಲಾಗಿದೆ. ಬಾಲಿವುಡ್‌ನ ಈ ಸ್ಟಾರ್ ನಟ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಖ್ಯಾತ ಬಾಲಿವುಡ್ ನಟನ ಎಂಟ್ರಿ
'ಹರಿಹರ ವೀರ ಮಲ್ಲು' ಸಿನಿಮಾದಲ್ಲಿ ಖ್ಯಾತ ಬಾಲಿವುಡ್ ನಟ ಬಾಬಿ ಡಿಯೋಲ್ ನಟಿಸುತ್ತಿದ್ದಾರೆ. ಬಾಲಿವುಡ್‌ನ ದಂತಕತೆ ಧರ್ಮೇಂದ್ರ ಪುತ್ರ ಆಗಿರುವ ಬಾಬಿ ಡಿಯೋಲ್, ನಟ, ಸಂಸದ ಸನ್ನಿ ಡಿಯೋಲ್‌ರ ಸಹೋದರ ಸಹ ಹೌದು. ಒಂದು ಕಾಲದ ಸ್ಟಾರ್ ನಟ ಬಾಬಿ ಡಿಯೋಲ್ ಆ ಬಳಿಕ ಚಿತ್ರರಂಗದಿಂದ ದೂರಾಗಿದ್ದರು. ಆದರೆ ಕಳೆದ ಕೆಲ ವರ್ಷಗಳ ಹಿಂದೆ ಮತ್ತೆ ಕಮ್‌ಬ್ಯಾಕ್ ಮಾಡಿದ್ದು, ನಾಯಕನ ಪಾತ್ರಗಳ ಜೊತೆಗೆ ಪವರ್‌ಫುಲ್ ವಿಲನ್ ಪಾತ್ರದಲ್ಲಿಯೂ ನಟಿಸುತ್ತಿದ್ದಾರೆ.

ಟ್ವೀಟ್ ಮಾಡಿರುವ ನಿರ್ದೇಶಕ ಕ್ರಿಶ್
ಇದೀಗ 'ಹರಿ ಹರ ವೀರ ಮಲ್ಲು' ಸಿನಿಮಾದಲ್ಲಿ ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಬಾಬಿ ಡಿಯೋಲ್, ತಮ್ಮ ಸಿನಿ ತಂಡವನ್ನು ಸೇರಿಕೊಂಡಿರುವ ಬಗ್ಗೆ ಟ್ವೀಟ್ ಮಾಡಿರುವ 'ಹರಿ ಹರ ವೀರ ಮಲ್ಲು' ಸಿನಿಮಾದ ನಿರ್ದೇಶಕ ಕ್ರಿಶ್ ಜಗರಲಮುಡಿ, ''ಭಾರತೀಯ ಚಿತ್ರರಂಗದ ಶ್ರೇಷ್ಠ ನಟ ಮತ್ತು ಭಾರತ ಚಿತ್ರರಂಗದ ಅತ್ಯುತ್ತಮ ಆಕ್ಷನ್ ಹೀರೋ ಅನ್ನು ತಮ್ಮ ಸಿನಿಮಾಕ್ಕೆ ಸ್ವಾಗತಿಸಲು ಸಂತೋಷ ಮತ್ತು ಉತ್ಸುಕನಾಗಿದ್ದೇನೆ. ನಮ್ಮ ವೈಭವೋಪೇತ 'ಹರಿ ಹರ ವೀರ ಮಲ್ಲು' ಸಿನಿಮಾಕ್ಕೆ ಬಾಬಿ ಡಿಯೋಲ್ ಅನ್ನು ಸ್ವಾಗತಿಸುತ್ತಿದ್ದೇವೆ'' ಎಂದಿದ್ದಾರೆ.

ನಾಯಕ ನಟನಾಗಿ ಎಂಟ್ರಿ ಕೊಟ್ಟ ಬಾಬಿ
ಬಾಬಿ ಡಿಯೋಲ್ 1977 ರಲ್ಲಿಯೇ ಬಾಲನಟನಾಗಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 1995 ರಲ್ಲಿ ನಾಯಕ ನಟನಾಗಿ ಎಂಟ್ರಿ ನೀಡಿದರು. ಆ ಬಳಿಕ 'ಗುಪ್ತ್', 'ಸೋಲ್ಜರ್', 'ಬಿಚ್ಚು', 'ಅಜ್ನಬಿ', 'ಜೋ ಬೋಲೆ ಸೊ ನಿಹಾಲ್' ಸಿನಿಮಾಗಳಲ್ಲಿ ನಟಿಸಿದರು. 2007 ರ ಬಳಿಕ ಅವರಿಗೆ ಅವಕಾಶಗಳು ಕಡಿಮೆಯಾದವು. 2018 ರಲ್ಲಿ ಬಂದ 'ರೇಸ್ 3' ಸಿನಿಮಾ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದರು. ಆ ಬಳಿಕ ಹಲವು ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.

ಸಿನಿಮಾದ ಕತೆ ಏನು?
ಇನ್ನು ಪವನ್ ಕಲ್ಯಾಣ್‌ರ 'ಹರಿ ಹರ ವೀರ ಮಲ್ಲು' ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ದಯಾಕರ್ ರಾವ್. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ನಿಧಿ ಅಗರ್ವಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನಟಿ ನೋರಾ ಫತೇಹಿ ಐಟಂ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಘಲ್ ಅರಸರಿಂದ ಕೊಹಿನೂರ್ ವಜ್ರವನ್ನು ಹರಿ ಮಲ್ಲು ಹೇಗೆ ಕದಿಯುತ್ತಾನೆ ಎಂಬುವ ಕತೆಯನ್ನು ಸಿನಿಮಾ ಒಳಗೊಂಡಿದೆ.