»   » ದೇಶ ಬಿಟ್ಟು ಹೋಗಿರುವ ನೀರವ್ ಮೋದಿ ಜೊತೆ ಯಾವೆಲ್ಲಾ ನಟಿಯರ ಲಿಂಕ್ ಇತ್ತು.?

ದೇಶ ಬಿಟ್ಟು ಹೋಗಿರುವ ನೀರವ್ ಮೋದಿ ಜೊತೆ ಯಾವೆಲ್ಲಾ ನಟಿಯರ ಲಿಂಕ್ ಇತ್ತು.?

Posted By:
Subscribe to Filmibeat Kannada
ನೀರವ್ ಮೋದಿ ಜೊತೆ ಯಾವೆಲ್ಲಾ ನಟಿಯರ ಲಿಂಕ್ ಇತ್ತು.? | Filmibeat Kannada

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 12 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿ, ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಎಲ್ಲಿದ್ದಾನೆ ಎಂದು ಭಾರತೀಯ ಪೊಲೀಸರು ಹುಡುಕಾಡುತ್ತಿದ್ದಾರೆ.

ಮತ್ತೊಂದೆಡೆ, ಒಂದು ಕಾಲದಲ್ಲಿ ನೀರವ್ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದ, ನೀರವ್ ಜೊತೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ, ಅವರ ಆಭರಣ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಕೋಟಿ ಕೋಟಿ ಸಂಭಾವನೆಗಳನ್ನು, ದುಬಾರಿ ಉಡುಗೊರೆಗಳನ್ನು ಪಡೆಯುತ್ತಿದ್ದ ಬಾಲಿವುಡ್ ನ ತಾರೆಯರು ನಿಧಾನವಾಗಿ ತಮಗೂ ನೀರವ್ ಮೋದಿಗೂ ಸಂಬಂಧವಿಲ್ಲವೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.

ನೀರವ್ ಮೋದಿಗೆ ಸೇರಿದ 523 ಕೋಟಿ ಆಸ್ತಿ ಜಪ್ತಿ, ಕೌಂಟಿಂಗ್

ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ನೀರವ್ ಮೋದಿಗೆ ಸಂಬಂಧಿತ ಕಂಪನಿಯ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದು ಗುತ್ತಿಗೆ ರದ್ದುಪಡಿಸಿಕೊಂಡಿದ್ದಾರೆ. ಕೇವಲ ಪ್ರಿಯಾಂಕಾ ಮಾತ್ರವಲ್ಲ ಬೇರೆ ಯಾವೆಲ್ಲ ನಟಿಯರು ನೀರವ್ ಮೋದಿಯ ಆಭರಣ ತೊಟ್ಟಿದ್ದಾರೆ ಎಂದು ನೋಡೋಣ ಬನ್ನಿ.

ಸೋನಮ್ ಕಪೂರ್

ನೀರವ್ ಮೋದಿಯ ಆಭರಣದ ಕಲೆಕ್ಷನ್ ಗಳ ಜಾಹೀರಾತಿನಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್ ಕಾಣಿಸಿಕೊಂಡಿದ್ದರು.

ಗುತ್ತಿಗೆ ರದ್ದುಗೊಳಿಸಿದ ಪ್ರಿಯಾಂಕಾ

2009ರಿಂದಲೂ ಉದ್ಯಮಿ ನೀರವ್ ಮೋದಿಯವರ ಜ್ಯುವೆಲ್ಲರಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಕೋಟಿ-ಕೋಟಿ ಸಂಭಾವನೆ ಜೊತೆಗೆ ದುಬಾರಿ ಉಡುಗೊರೆಗಳನ್ನು ಪಡೆದಿದ್ದ, ನೀರವ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದ ಪಿಗ್ಗಿ ಈಗ ಗುತ್ತಿಗೆ ರದ್ದುಪಡಿಸಿಕೊಂಡಿದ್ದಾರೆ.

ಏರ್ ಲಿಫ್ಟ್ ನಟಿ

ಅಕ್ಷಯ್ ಕುಮಾರ್ ಅಭಿನಯಿಸಿದ್ದ 'ಏರ್ ಲಿಫ್ಟ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಿರ್ಮತಾ ಕೌರ್ ಕೂಡ ನೀರವ್ ಮೋದಿಯ ಆಭರಣಗಳನ್ನ ತೊಟ್ಟು ಜಾಹೀರಾತು ನೀಡಿದ್ದಾರೆ.

ನೀರವ್ ಮೋದಿ ವಿರುದ್ಧ ಕೇಸು ದಾಖಲಿಸಿದ ಪ್ರಿಯಾಂಕಾ

ಶ್ರದ್ಧಾ ಕಪೂರ್

ಬಾಲಿವುಡ್ ನ ಬ್ಯೂಟಿಫುಲ್ ನಟಿ ಶ್ರದ್ಧಾ ಕಪೂರ್ ಕೂಡ ನೀರವ್ ಮೋದಿ ಅವರ ಆಭರಣಗಳಿಗೆ ಪ್ರಚಾರ ನೀಡಿದ್ದಾರೆ.

ಅನುಷ್ಕಾ ಶರ್ಮಾ ರಂಗು

ನೀರವ್ ಮೋದಿ ಅವರ ಆಭರಣಗಳ ಪ್ರಚಾರಕ್ಕೆ ಬಹುತೇಕ ಬಾಲಿವುಡ್ ನಟಿಯರು ಆಗಮಿಸಿದ್ದಾರೆ. ಅನುಷ್ಕಾ ಶರ್ಮಾ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ತಾನೂ ಕೂಡ ಮೋದಿ ಆಭರಣ ತೊಟ್ಟು ಶೋ ಕೊಟ್ಟಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್

ಇತ್ತೀಚಿಗಷ್ಟೆ ಶ್ರೀದೇವಿ ಅಂತಿಮ ದರ್ಶನ ವೇಳೆ ನಕ್ಕು ಟ್ರೋಲ್ ಗೆ ಗುರಿಯಾಗಿದ್ದ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಮೋದಿ ಆಭರಣಗಳಿಗೆ ಜಾಹೀರಾತು ನೀಡಿದ್ದಾರೆ.

ಕಾಜೋಲ್

ಬಾಲಿವುಡ್ ಸ್ಟಾರ್ ನಟಿ ಕಾಜೋಲ್ ಕೂಡ ನೀರವ್ ಮೋದಿಯ ಕಂಪನಿಗೆ ಜಾಹೀರಾತು ನೀಡಿದ್ದಾರೆ.

11 ಸಾವಿರ ಕೋಟಿಯಲ್ಲ ಬ್ಯಾಂಕುಗಳು ಕಳೆದುಕೊಂಡಿದ್ದು 22,743 ಕೋಟಿ!

ಹಾಲಿವುಡ್ ನಟಿ

ಬಾಲಿವುಡ್ ನಟಿಯರು ಮಾತ್ರವಲ್ಲ, ಹಾಲಿವುಡ್ ನಿಂದಲೂ ನೀರವ್ ಮೋದಿ ನಟಿಯರನ್ನ ಕರೆಸಿದ್ದಾರೆ. ಹಾಲಿವುಡ್ ನಟಿ ರೋಸಿ ಮೋದಿ ಆಭರಣ ತೊಟ್ಟು ಪ್ರದರ್ಶನ ನೀಡಿದ್ದಾರೆ.

ಲೀಸಾ ಹೇಡನ್

ಭಾರತದ ಖ್ಯಾತ ಮಾಡೆಲ್ ಹಾಗೂ ನಟಿ ಲೀಸಾ ಹೇಡನ್ ನೀರವ್ ಮೋದಿ ಅವರ ಆಭರಣಗಳನ್ನ ತೊಟ್ಟು ಅನೇಕ ಕಾರ್ಯಕ್ರಮಗಳಲ್ಲಿ ಶೋ ಕೊಟ್ಟಿದ್ದಾರೆ.

'ಲೀಸಾ' ಪ್ರಚಾರ

ಮಾಡೆಲ್ ಹಾಗೂ ನಟಿ ಲೀಸಾ ಹೇಡನ್ ಅವರು ನೀರವ್ ಮೋದಿ ಅವರ ಕಿವಿಯೋಲೆ, ಕೈಬಳೆ ಸೇರಿದಂತೆ ಹಲವು ವಸ್ತುಗಳಿಗೆ ಪ್ರಚಾರ ನೀಡಿದ್ದಾರೆ.

ನೀರವ್ ಮೋದಿಗೂ ನಮ್ಮ ಮೈಸೂರಿಗೂ ಏನಿದು ಲಿಂಕು..!?

ಬ್ಯಾಂಕ್ ಗೆ 389 ಕೋಟಿ ಪಂಗನಾಮ, ವಜ್ರದ ರಫ್ತುದಾರನ ಮೇಲೆ ಸಿಬಿಐ ಕೇಸ್

ನೀರವ್ ಮೋದಿಗೆ ಸೇರಿರುವ 9 ಐಷಾರಾಮಿ ಕಾರುಗಳು ಜಪ್ತಿ

English summary
Nirav Modi defaulted a loan of Rs 12,000 Crores from Punjab National Bank and fled the country. Several Bollywood celebrities such as Priyanka Chopra, Lisa Haydon, Sonam Kapoor, Nimrat Kaur and many others were roped in to advertise Nirav Modi's jewellery collection and he tapped Hollywood celebs Rosie Huntington as well.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada