Just In
Don't Miss!
- News
'ಕಾವೇರಿ ಕೂಗು' ನಮ್ಮದಲ್ಲ: ರಾಜ್ಯ ಸರ್ಕಾರದ ಸ್ಪಷ್ಟನೆ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಸ್‌ಎಸ್ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್
'ಬಾಹುಬಲಿ' ಸರಣಿ ಮೂಲಕ ಭಾರತೀಯ ಸಿನಿ ಪ್ರಪಂಚದಲ್ಲಿ ಐತಿಹಾಸಿಕ ದಾಖಲೆಗಳನ್ನು ಬರೆದ ರಾಜಮೌಳಿ ಈಗ ಆರ್‌ಆರ್‌ಆರ್ ಸಿನಿಮಾದ ಮೂಲಕ ಮತ್ತೊಮ್ಮೆ ಚರಿತ್ರೆ ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ. ಪ್ರಭಾಸ್-ರಾಣಾ ಕಾಂಬಿನೇಷನ್ ನಂತರ ಈಗ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಜುಗಲ್‌ಬಂದಿಯೊಂದಿಗೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಇತ್ತೀಚಿಗಷ್ಟೆ ಆರ್‌ಆರ್‌ಆರ್ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೊನೆಯ ಹಂತದ ಚಿತ್ರೀಕರಣದಲ್ಲಿರುವ ಆರ್‌ಆರ್‌ಆರ್ ಚಿತ್ರ ಅಕ್ಟೋಬರ್ 13 ರಂದು ವರ್ಲ್ಡ್ ವೈಡ್ ತೆರೆಕಾಣುತ್ತಿದೆ ಎಂದು ಪ್ರಕಟಿಸಿದ್ದಾರೆ. ರಿಲೀಸ್ ದಿನಾಂಕ ಹೊರಬೀಳುತ್ತಿದ್ದಂತೆ ಚಿತ್ರರಸಿಕರು ಡೇಟ್ ಲಾಕ್ ಮಾಡಿಕೊಂಡು ಕಾಯ್ತಿದ್ದಾರೆ. ಆದರೆ, ನಿರ್ಮಾಪಕ ಬೋನಿ ಕಪೂರ್ ಮಾತ್ರ ರಾಜಮೌಳಿ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಏಕೆ? ಮುಂದೆ ಓದಿ...

'ಮೈದಾನ್' ವರ್ಸಸ್ 'ಆರ್‌ಆರ್‌ಆರ್'?
ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಅಕ್ಟೋಬರ್ 13ಕ್ಕೆ ತೆರೆಕಾಣಲಿದೆ. ಎರಡು ದಿನದ ಬಳಿಕ ಅಂದ್ರೆ ಅಕ್ಟೋಬರ್ 15ಕ್ಕೆ ಬೋನಿ ಕಪೂರ್ ನಿರ್ಮಾಣದ ಮೈದಾನ್ ಚಿತ್ರ ತೆರೆಗೆ ಬರಲಿದೆ. ಮೈದಾನ್ ಚಿತ್ರದಲ್ಲಿ ಅಜಯ್ ದೇವಗನ್ ನಾಯಕನಟನಾಗಿ ಅಭಿನಯಿಸಿದ್ದಾರೆ. ಆ ಕಡೆ ಆರ್‌ಆರ್‌ಆರ್ ಚಿತ್ರದಲ್ಲೂ ಅಜಯ್ ದೇವಗನ್ ಪ್ರಮುಖ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ಸಹಜವಾಗಿ ಈ ಎರಡು ಚಿತ್ರಗಳು ಮುಖಾಮುಖಿಯಾಗುತ್ತಿರುವುದು ಬಾಕ್ಸ್ ಆಫೀಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ, ರಾಜಮೌಳಿ ಮೇಲೆ ಬೋನಿ ಕಪೂರ್ ಬೇಸರಗೊಂಡಿದ್ದಾರೆ.
ರಾಜಮೌಳಿಯ RRR ಚಿತ್ರಕ್ಕೆ ಎದುರಾಗಿ ಅಜಯ್ ದೇವಗನ್ ಸಿನಿಮಾ?

ಆರು ತಿಂಗಳ ಹಿಂದೆಯೇ ಡೇಟ್ ಘೋಷಣೆ ಮಾಡಿದ್ದೆ
ಆರ್‌ಆರ್‌ಆರ್ ಬಿಡುಗಡೆ ಕುರಿತು ಬಾಲಿವುಡ್ ಹಂಗಮಾ ಜೊತೆ ಮಾತನಾಡಿರುವ ಬೋನಿ ಕಪೂರ್, ''ಹೌದು, ನಾನು ರಾಜಮೌಳಿ ಮೇಲೆ ಬೇಸರಗೊಂಡಿದ್ದೇನೆ. ಇದು ಒಪ್ಪುವಂತಹ ನಡೆಯಲ್ಲ. ನಾನು ಆರು ತಿಂಗಳ ಹಿಂದೆಯೇ ಮೈದಾನ್ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿದ್ದೆ. ಚಿತ್ರರಂಗವನ್ನು ಉಳಿಸಬೇಕಾದ ಸಮಯದಲ್ಲಿ ರಾಜಮೌಳಿ ಇಂತಹ ಕೆಲಸ ಮಾಡಿರುವುದು ಖಂಡನೀಯ'' ಎಂದಿದ್ದಾರೆ.
ಹಾಲಿವುಡ್ ಚಿತ್ರದಿಂದ ಆರ್‌ಆರ್‌ಆರ್ ಹೊಸ ಪೋಸ್ಟರ್ ಕಾಪಿನಾ?

ಇದರಲ್ಲಿ ನನ್ನ ಪಾತ್ರವಿಲ್ಲ ಎಂದ ರಾಜಮೌಳಿ
ಈ ವಿಚಾರವಾಗಿ ನಿರ್ದೇಶಕ ರಾಜಮೌಳಿ ಜೊತೆ ಬೋನಿ ಕಪೂರ್ ಚರ್ಚಿಸಿದ್ದಾರಂತೆ. ಈ ರೀತಿ ಮಾಡಿದ್ರೆ ನಿರ್ಮಾಪಕರಿಗೆ ನಷ್ಟ ಆಗುತ್ತದೆ ಎಂದು ಮನವರಿಕೆ ಮಾಡಿದರಂತೆ. ಅದಕ್ಕೆ ಪ್ರತಿಕ್ರಿಯಿಸಿದ ರಾಜಮೌಳಿ ''ಇದರಲ್ಲಿ ನನ್ನ ಪಾತ್ರ ಇಲ್ಲವೇ ಇಲ್ಲ. ನಿರ್ಮಾಪಕರು ಮತ್ತು ವಿತರಕರು ತೆಗೆದುಕೊಂಡಿರುವ ನಿರ್ಧಾರ. ವಿತರಕರಿಂದ ಒತ್ತಡ ಹೆಚ್ಚಿರುವ ಕಾರಣ ನಿರ್ಮಾಪಕರು ಹೀಗೆ ಮಾಡಬೇಕಾಯಿತು'' ಎಂದು ಸಮಜಾಯಿಷಿ ನೀಡಿದರು ಎಂದು ಬೋನಿ ಕಪೂರ್ ಹೇಳಿಕೊಂಡಿದ್ದಾರೆ.

ಅಜಯ್ ದೇವಗನ್ ಏನಂದ್ರು?
ಆರ್‌ಆರ್‌ಆರ್ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸುವುಕ್ಕೆ ಒಂದು ದಿನ ಮುಂಚೆಯೇ ಅಜಯ್ ದೇವಗನ್ ಅವರಿಗೆ ಈ ವಿಚಾರ ಗೊತ್ತಾಗಿದೆ. ಮೈದಾನ್ ಸಿನಿಮಾ ಅಕ್ಟೋಬರ್ 15 ರಂದು ಬಿಡುಗಡೆಯಾಗುವ ಹಿನ್ನೆಲೆ ಬೋನಿ ಕಪೂರ್ ಜೊತೆ ಒಮ್ಮೆ ಚರ್ಚಿಸಿ ಎಂದು ಸಲಹೆ ನೀಡಿದ ಬಗ್ಗೆ ನನಗೆ ತಿಳಿಸಿದರು. ಆದರೆ, ಆರ್‌ಆರ್‌ಆರ್ ನಿರ್ಮಾಪಕರು ಚರ್ಚೆಗೆ ಬಂದಿಲ್ಲ. ಹಾಗಾಗಿ, ಅಜಯ್ ದೇವಗನ್ ಸಹ ಚಿತ್ರದ ಬಿಡುಗಡೆ ದಿನಾಂಕವನ್ನು ಟ್ವೀಟ್ ಮಾಡಿಲ್ಲ'' ಎಂದು ಮಾಹಿತಿ ನೀಡಿದ್ದಾರೆ.

ರಾಜಮೌಳಿ ಚಿತ್ರಕ್ಕೆ ಏಕೆ ರಜೆ ದಿನಾ?
''ಬಾಹುಬಲಿ ಸರಣಿ ನಂತರ ರಾಜಮೌಳಿ ಇಮೇಜ್ ಬಹಳ ದೊಡ್ಡದಾಗಿ ಬೆಳೆದಿದೆ. ರಾಜಮೌಳಿ ಚಿತ್ರಗಳನ್ನು ರಜೆ ದಿನಾ ಬಿಡುಗಡೆ ಮಾಡುವುದೇನು? ರಜೆ ದಿನಕ್ಕಾಗಿ ಕಾದು ರಿಲೀಸ್ ಮಾಡುತ್ತಿರುವುದು ನನಗೆ ಅಚ್ಚರಿ ತಂದಿದೆ. ದಸರಾ ಹಾಗೂ ಈದ್ ಹಬ್ಬಗಳ ರಜೆಯಲ್ಲಿ ಒಳ್ಳೆಯ ಕಲೆಕ್ಷನ್ ಆಗಬಹುದು ಎಂಬ ಲೆಕ್ಕಾಚಾರ'' ಎಂದು ಬೋನಿ ಕಪೂರ್ ಗರಂ ಆದರು.

ಮೈದಾನ್ ಮುಂದಕ್ಕೆ ಹೊಗುತ್ತಾ?
ಆರ್‌ಆರ್‌ಆರ್ ಸಿನಿಮಾದ ಜೊತೆಗೆ ಬರುವುದರಿಂದ ಮೈದಾನ್ ಚಿತ್ರಕ್ಕೆ ಹಿನ್ನಡೆಯಾಗಬಹುದು ಎಂಬ ಲೆಕ್ಕಾಚಾರ ಬಾಲಿವುಡ್‌ನಲ್ಲಿದೆ. ಈ ಹಿನ್ನೆಲೆ ಮೈದಾನ್ ಸಿನಿಮಾವನ್ನು ಮುಂದೂಡಬಹುದಾ ಎನ್ನುವುದಕ್ಕೆ ಬೋನಿ ಕಪೂರ್ ಸ್ಪಷ್ಟನೆ ನೀಡಿಲ್ಲ. ''ನಮ್ಮ ಚಿತ್ರತಂಡ, ನಿರ್ದೇಶಕರ ಜೊತೆ ಸೇರಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ'' ಎಂದಷ್ಟೇ ಹೇಳಿದರು.