Just In
Don't Miss!
- News
ಕೊವಿಡ್-19 ಲಸಿಕೆ ಬೇಕೇ; ಈ ದಾಖಲೆಗಳೊಂದಿಗೆ ನಿಯಮ ಅನುಸರಿಸಿ!
- Sports
ಐಪಿಎಲ್ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಅರ್ಹ, ಎಂಐ ಆರಿಸುತ್ತಾ?
- Automobiles
ರಾಜಸ್ಥಾನದಲ್ಲಿ ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಸಾವು
- Finance
ದೇಶದ ಪ್ರಮುಖ ನಗರಗಳಲ್ಲಿ ಜನವರಿ 16ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Lifestyle
ಜ. 16ರಿಂದ ಭಾರತದಲ್ಲಿ ಕೋವಿಡ್ 19 ಲಸಿಕೆ: ಇದರ ಕುರಿತ ಪ್ರಮುಖ 10 ಮಾಹಿತಿ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬ್ರಹ್ಮಾಸ್ತ್ರ ಸಿನಿಮಾದ ಬಜೆಟ್ 150 ಕೋಟಿಯಲ್ಲ, ಅದಕ್ಕಿಂತ ಹೆಚ್ಚು
ಬಾಲಿವುಡ್ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರಗಳ ಪೈಕಿ ಬ್ರಹ್ಮಾಸ್ತ್ರ ಸಹ ಒಂದು. ರಣ್ಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಸಜ್ಜಾಗಿದ್ದು, ಸದ್ಯ ಬಿಟೌನ್‌ನಲ್ಲಿ ಹೆಚ್ಚು ಸುದ್ದಿಯಲ್ಲಿದೆ.
ಧರ್ಮ ಪ್ರೊಡಕ್ಷನ್ ಮತ್ತು ಫಾಕ್ಸ್ ಸ್ಟಾರ್ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಚಿತ್ರದ ಬಜೆಟ್ 150 ಕೋಟಿ ಎಂದು ಹೇಳಲಾಗಿದೆ. ಆದ್ರೀಗ, ಈ ಚಿತ್ರದ ಬಜೆಟ್ ಕುರಿತು ಹೊಸ ಸುದ್ದಿ ಹೊರಬಿದ್ದಿದೆ.
ಇದೇ ವರ್ಷ ರಣ್ಬೀರ್ ಕಪೂರ್-ಆಲಿಯಾ ಮದುವೆ ಆಗೋದು ಪಕ್ಕಾ.!
ಸ್ಟಾರ್ ಮತ್ತು ಡಿಸ್ನಿ ಚಾನಲ್‌ನ ಮುಖ್ಯಸ್ಥ (ಸಿನಿಮಾದ ಸಹ ನಿರ್ಮಾಪಕ) ಉದಯ್ ಶಂಕರ್ ಹೇಳಿರುವ ಪ್ರಕಾರ ಬ್ರಹ್ಮಾಸ್ತ್ರ ಸಿನಿಮಾದ ಬಜೆಟ್ 300 ಕೋಟಿಗಿಂತ ಹೆಚ್ಚು. ಇಷ್ಟು ದೊಡ್ಡ ಬಜೆಟ್ ಎಂದು ಕೇಳಿ ಬಾಲಿವುಡ್ ಮಂದಿ ಅಚ್ಚರಿಯಾಗಿದ್ದು, ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಲೆಕ್ಕಾಚಾರ ಮಾಡ್ತಿದ್ದಾರೆ.
2018ರಿಂದಲೂ ತಯಾರಾಗುತ್ತಿರುವ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದ್ದು, ನಿಜ ಜೀವನದ ಜೋಡಿಯಾದ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಚಿತ್ರ ಎನ್ನುವುದು ವಿಶೇಷ.
ಯುವ ಜೋಡಿಯ ಜೊತೆ ಬಿಗ್‌ಬಿ ಅಮಿತಾಭ್ ಬಚ್ಚನ್, ತೆಲುಗು ನಟ ನಾಗಾರ್ಜುನ. ಮೌನಿ ರಾಯ್, ಡಿಂಪಲ್ ಕಪಾಡಿಯಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
'ಬ್ರಹ್ಮಾಸ್ತ್ರ' ಚಿತ್ರದ 30 ನಿಮಿಷದ ದೃಶ್ಯಕ್ಕೆ ಕತ್ತರಿ ಹಾಕುವಂತೆ ನಿರ್ಮಾಪಕರು ಹೇಳಿದ್ದೇಕೆ?
ಅಂದ್ಹಾಗೆ, ಬ್ರಹ್ಮಾಸ್ತ್ರ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. ಹಿಂದಿಯ ಜೊತೆಗೆ ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಈ ಚಿತ್ರ ತೆರೆಕಾಣಲಿದೆ.
ಅಯನ್ ಮುಖರ್ಜಿ ನಿರ್ದೇಶನ ಮಾಡಿರುವ ಈ ಚಿತ್ರ ಸದ್ಯಕ್ಕೆ ಡಿಸೆಂಬರ್ 4 ರಂದು ಚಿತ್ರಮಂದಿರದಲ್ಲಿ ತೆರೆಕಾಣಲಿದೆ ಎಂದು ಹೇಳಲಾಗಿದೆ.