»   » ವರ್ಮಾ 'ಗನ್ಸ್ ಅಂಡ್ ಥೈಯ್ಸ್' ಟ್ರೈಲರ್‌ ನೋಡಿ ಕಿಡಿಕಾರಿದ ಸಿಬಿಎಫ್‌ಸಿ ಅಧ್ಯಕ್ಷ

ವರ್ಮಾ 'ಗನ್ಸ್ ಅಂಡ್ ಥೈಯ್ಸ್' ಟ್ರೈಲರ್‌ ನೋಡಿ ಕಿಡಿಕಾರಿದ ಸಿಬಿಎಫ್‌ಸಿ ಅಧ್ಯಕ್ಷ

Posted By:
Subscribe to Filmibeat Kannada

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ತಾನೆ ಮುಂಬೈ ಕತ್ತಲೆ ಜಗತ್ತನ್ನು 'ಗನ್ಸ್ ಅಂಡ್ ಥೈಯ್ಸ್' ಎಂಬ ವೆಬ್ ಸೀರೀಸ್ ಟ್ರೈಲರ್ ಮೂಲಕ ಬೆತ್ತಲಾಗಿ ತೋರಿಸಿದ್ದನ್ನು ನಿಮಗೆ ತಿಳಿಸಿದ್ವಿ. ಈಗ ಈ ಟ್ರೈಲರ್ ಬಗ್ಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷರು ಕಿಡಿಕಾರಿದ್ದಾರೆ.[ಮುಂಬೈ ಕತ್ತಲೆ ಪ್ರಪಂಚವನ್ನ ಬೆತ್ತಲಾಗಿ ತೋರಿಸಿದ ವರ್ಮ]

ರಾಮ್ ಗೋಪಾಲ್ ವರ್ಮಾ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿರುವ 6 ನಿಮಿಷದ 'ಗನ್ಸ್ ಅಂಡ್ ಥೈಯ್ಸ್' ವೆಬ್ ಸೀರೀಸ್ ಟ್ರೈಲರ್ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ(ಸಿಬಿಎಫ್‌ಸಿ) ನಿಯಮಗಳ ಅಡಿಯಲ್ಲಿ ಬಿಡುಗಡೆ ಆಗಿಲ್ಲ ಎಂದು ಅಧ್ಯಕ್ಷ ಪಹ್ಲಜ್ ನಿಹಲಾನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವರ್ಮಾ ಸೆನ್ಸಾರ್ ಗೆ ಒಳಪಡಿಸಿದೆ ಯಾವುದೇ ನಿಯಂತ್ರಣಕ್ಕೆ ಒಳಗಾಗದೇ ಹಟದಿಂದ ಯೂಟ್ಯೂಬ್ ನಲ್ಲಿ ಟ್ರೈಲರ್ ಬಿಡುಗಡೆ ಮಾಡಿರುವುದಕ್ಕೆ ಕಿಡಿಕಾರಿದ್ದಾರೆ.

CBFC Chief Pahlaj Nihalani Slams Ram Gopal Varma for 'Guns and Thighs' trailer!

ಅತ್ಯಧಿಕ ಅಶ್ಲೀಲ ಮತ್ತು ಕೊಲೆ ದೃಶ್ಯಗಳು, ಕೆಟ್ಟ ಮಾತುಗಳು ಇರುವ 'ಗನ್ಸ್ ಅಂಡ್ ಥೈಯ್ಸ್' ಟ್ರೈಲರ್ ವಿರೋಧಿಸಿ, ಪಹ್ಲಜ್ ನಿಹಲಾನಿ ರವರು, 'ಅತಿ ಹೆಚ್ಚು ಕೆಟ್ಟ ಮತ್ತು ಕ್ರೂರ ದೃಶ್ಯಗಳ ಈ ಟ್ರೈಲರ್ ಗೆ ಪ್ರಮಾಣೀಕರಣ ಆಗಿಲ್ಲ. ಇಂಟರ್ನೆಟ್ ನಲ್ಲಿ ಈ ಟ್ರೈಲರ್ ಹಾಕಲು ಅತ್ಯಧಿಕ ಸ್ವತಂತ್ರ್ಯ ಬಳಸಿಕೊಂಡಿರುವ ವರ್ಮಾ ಗೆ ಅಷ್ಟೇ ಅತ್ಯಧಿಕ ಜವಾಬ್ದಾರಿ ಇರುತ್ತದೆ ಎಂದು ತಿಳಿದಿರಬೇಕು' ಎಂದಿದ್ದಾರೆ.[ಕನ್ನಡಿಗರ ರೋಷಾಗ್ನಿ ಹೊತ್ತಿ ಉರಿಯುವಂತೆ ಮಾಡಿದ ವರ್ಮ]

"ವರ್ಮಾರ ಈ ನಡೆಯನ್ನು ಸೆಲ್ಫ್ ಸೆನ್ಸಾರ್‌ ಎನ್ನಲಾಗುತ್ತದೆ. ಅಮೆರಿಕದಲ್ಲಿ ಈ ರೀತಿಯ ಸೆನ್ಸಾರ್ ಹೆಚ್ಚು ಯಶಸ್ವಿಯಾಗಿದ್ದರು ಸಹ ಅಲ್ಲಿ ಕಾನೂನಿನ ಭಯವಿದೆ. ಆದರೆ ನಮ್ಮ ಭಾರತೀಯ ಫೀಲ್ಮ್ ಮೇಕರ್ ಗಳಿಗೆ ಇದರ ಬಗ್ಗೆ ಗೊತ್ತಿಲ್ಲ. ಅದು ಏಕ್ತಾ ಕಪೂರ್, ಅನುರಾಗ್ ಕಶ್ಯಪ್ ಮತ್ತು ರಾಮ್ ಗೋಪಾಲ್ ವರ್ಮಾ ಸೇರಿದಂತೆ ಈ ಮೂವರಿಗೂ ಸಹ ತಿಳಿದಿಲ್ಲ' ಎಂದು ಸಿಬಿಎಫ್‌ಸಿ ಅಧ್ಯಕ್ಷ ಪಹ್ಲಜ್ ನಿಹಲಾನಿ ಹೇಳಿದ್ದಾರೆ.

CBFC Chief Pahlaj Nihalani Slams Ram Gopal Varma for 'Guns and Thighs' trailer!

"ರಾಮ್ ಗೋಪಾಲ್ ವರ್ಮಾ, ಏಕ್ತಾ ಕಪೂರ್ ಮತ್ತು ಅನುರಾಗ್ ಕಶ್ಯಪ್ ಇಂಟರ್ನೆಟ್ ನಲ್ಲಿ ಯಾವುದೇ ವಿಡಿಯೋಗಳನ್ನು ಹಾಕುವ ಸಂಪೂರ್ಣ ಸ್ವತಂತ್ರ ಇದೆ ಎಂದು ಅಲೋಚಿಸುವುದನ್ನು ನಿಲ್ಲಿಸಬೇಕು. ಈಗಾಗಲೇ ಸೆನ್ಸಾರ್ ಆಗದ 'ಕ್ಯಾ ಕೂಲ್ ಹೇನ್ ಹಮ್ 3', 'ಮಸ್ತಿಝಾದೆ' ಮತ್ತು 'ಮೊಹಲ್ಲಾ ಅಸ್ಸಿ' ಚಿತ್ರದ ಟ್ರೈಲರ್ ಗಳನ್ನು ನ್ಯಾಯಾಲಯ ಮಧ್ಯಪ್ರವೇಶಿಸಿದ ನಂತರ ಇಂಟರ್ನೆಟ್ ನಿಂದ ತೆಗೆಯಲಾಗಿದೆ' ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷ ಪಹ್ಲಜ್ ನಿಹಲಾನಿ ಗುಡುಗಿದ್ದಾರೆ.

English summary
Central Board Of Film Certification (CBFC) chairperson Pahlaj Nihalani Slams Ram Gopal Varma for FILTHY 'Guns and Thighs' trailer!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada