For Quick Alerts
  ALLOW NOTIFICATIONS  
  For Daily Alerts

  ದುಬೈನಲ್ಲಿ ಕ್ರಿಕೆಟಿಗ ಚಾಹಲ್ ಭಾವಿ ಪತ್ನಿಯ ಸಖತ್ ಡ್ಯಾನ್ಸ್

  |

  ಕ್ರಿಕೆಟಿಗ ಯಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ ಸಖತ್ ಮಿಂಚುತ್ತಿದ್ದಾರೆ. ಆರ್‌ಸಿಬಿ ಗಾಗಿ ಕೆಲವು ಮ್ಯಾಚುಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಚಾಹಲ್.

  ಆದರೆ ದುಬೈ ನಲ್ಲಿ ಚಾಹಲ್ ಒಬ್ಬರೇ ತಮ್ಮ ಪ್ರದರ್ಶನದಿಂದ ಪ್ರೇಕ್ಷಕರನ್ನು ರಂಜಿಸುತ್ತಿಲ್ಲ, ಬದಲಿಗೆ ಚಾಹಲ್ ಅವರ ಭಾವಿ ಪತ್ನಿ ಸಹ ತಮ್ಮ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ.

  ಚಾಹಲ್ ಭಾವಿ ಪತ್ನಿ ಧಾನಶ್ರೀ ವರ್ಮಾ ಪ್ರಸ್ತುತ ದುಬೈ ನಲ್ಲೇ ಇದ್ದು, ಅತ್ಯುತ್ತಮ ನೃತ್ಯಗಾರ್ತಿ ಆಗಿರುವ ಧಾನಶ್ರೀ ವರ್ಮಾ ದುಬೈನ ಬೀಚ್‌ನಲ್ಲಿ ಮಾಡಿರುವ ನೃತ್ಯ ಸಖತ್ ವೈರಲ್ ಆಗಿದೆ.

  ಚಾಹಲ್ ಭಾವಿ ಪತ್ನಿ ಧಾನಶ್ರೀ ದುಬೈನ ಬೀಚ್‌ನಲ್ಲಿ ನಾಚ್‌ ಮೇರಿ ಲೈಲಾ ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಡಾನ್ಸ್ ವಿಡಿಯೋ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.

  ಭುರ್ಜ್‌ ಕಲೀಫಾ ಹಾಡಿಗೆ ನರ್ತಿಸಿರುವ ಧನುಶ್ರೀ

  ಭುರ್ಜ್‌ ಕಲೀಫಾ ಹಾಡಿಗೆ ನರ್ತಿಸಿರುವ ಧನುಶ್ರೀ

  'ಭುರ್ಜ್‌ ಕಲೀಪಾ' ಎಂಬ ಹಾಡೊಂದಕ್ಕೆ ಸಹ ಡಾನ್ಸ್ ಮಾಡಿರುವ ಧನುಶ್ರೀ, ಇತತರಿಗೂ ಅದೇ ಹಾಡಿಗೆ ನೃತ್ಯ ಮಾಡಿ, ಅದನ್ನು ಇನ್‌ಸ್ಟಾಗ್ರಾಂ ನಲ್ಲಿ ಅಪ್‌ಲೋಡ್ ಮಾಡುವಂತೆ ಚಾಲೆಂಜ್ ಎಸೆದಿದ್ದಾರೆ ಧನುಶ್ರೀ ವರ್ಮಾ.

  ಧನುಶ್ರೀ ಅತ್ಯುತ್ತಮ ನೃತ್ಯಗಾತಿ

  ಧನುಶ್ರೀ ಅತ್ಯುತ್ತಮ ನೃತ್ಯಗಾತಿ

  ಧನುಶ್ರೀ ವರ್ಮಾ ಅತ್ಯುತ್ತಮ ನೃತ್ಯಗಾತಿ. ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಸಾಕಷ್ಟು ಡಾನ್ಸ್‌ ವಿಡಿಯೋಗಳನ್ನು ಹಾಕುತ್ತಲೇ ಇರುತ್ತಾರೆ ಧನುಶ್ರೀ. ಕೆಲವು ಸಿನಿಮಾಗಳಿಗೆ ಸಹ ನೃತ್ಯ ನಿರ್ದೇಶಕಿಯಾಗಿ, ಹಾಗೂ ನೃತ್ಯಗಾತಿಯಾಗಿ ಕೆಲಸ ಮಾಡಿದ್ದಾರೆ ಧನುಶ್ರೀ.

  ದುಬೈನಲ್ಲಿರುವ ಧನಶ್ರೀ

  ದುಬೈನಲ್ಲಿರುವ ಧನಶ್ರೀ

  ಭಾವಿ ಪತಿಯೊಂದಿಗೆ ದುಬೈ ನಲ್ಲಿಯೇ ಇರುವ ಧನುಶ್ರೀ, ಆರ್‌ಸಿಬಿ ಮ್ಯಾಚುಗಳನ್ನು ನೋಡಲು ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ವಿರಾಟ್ ಪತ್ನಿ ಅನುಷ್ಕಾ ಸಹ ದುಬೈ ನಲ್ಲಿಯೇ ಇದ್ದು, ಇಬ್ಬರೂ ತಮ್ಮ-ತಮ್ಮ ಪ್ರೀತಿ ಪಾತ್ರರಿಗೆ ಬೆಂಬಲ ನೀಡುತ್ತಿದ್ದಾರೆ.

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada
  ವೈದ್ಯೆಯೂ ಆಗಿರುವ ಧನುಶ್ರೀ

  ವೈದ್ಯೆಯೂ ಆಗಿರುವ ಧನುಶ್ರೀ

  ಚಾಹಲ್ ಭಾವಿ ಪತ್ನಿ ಧನುಶ್ರೀ ಕೇವಲ ನೃತ್ಯಗಾರ್ತಿ ಮಾತ್ರವಲ್ಲ ವೈದ್ಯೆ ಸಹ ಹೌದು. ಎಂಬಿಬಿಎಸ್ ಮುಗಿಸಿರುವ ಧನುಶ್ರೀ, ಪ್ರಸ್ತುತ ಯೂಟ್ಯೂಬರ್ ಆಗಿ, ನೃತ್ಯ ನಿರ್ದೇಶಕಿ ಆಗಿ ಬಹು ಖ್ಯಾತರು. ಕೆಲವೇ ತಿಂಗಳುಗಳಲ್ಲಿ ಚಾಹಲ್ ಹಾಗೂ ಧನುಶ್ರೀ ಗೆ ಮದುವೆ ಆಗಲಿದೆ.

  English summary
  Cricketer Yazuvendar Chahal's girlfriend Dhanashri's dance video went viral. She danced in Dubai's beach.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X