For Quick Alerts
  ALLOW NOTIFICATIONS  
  For Daily Alerts

  ಸಾರ್ವಕಾಲಿಕ ದಾಖಲೆ: ಚೆನೈ ಎಕ್ಸ್ ಪ್ರೆಸ್ ವೇಗಗಿಲ್ಲ ಬ್ರೇಕ್

  By ಜೇಮ್ಸ್ ಮಾರ್ಟಿನ್
  |

  ಬಾಕ್ಸಾಫೀಸಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿರುವ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಜಾಗತಿಕವಾಗಿ ಅನೇಕ ಕಡೆ 50 ದಿನ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರರಂಗದಲ್ಲಿ ಹೊಸ ಹಾದಿಯನ್ನು ಸೃಷ್ಟಿಸಿ ಶಾರುಖ್ ಚಿತ್ರ ಮುನ್ನಡೆಯುತ್ತಿದೆ. ಈ ಚಿತ್ರದ ಕ್ರೇಜ್ ದೇಶಿ ಮಾರುಕಟ್ಟೆಯಲ್ಲಿ ತುಸು ಕಡಿಮೆಯಾಗಿದೆ. ಆದರೆ, ವಿದೇಶಿ ಮಾರುಕಟ್ಟೆಯಲ್ಲಿ ಈಗಲೂ ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್ ಪ್ರೆಸ್ ಮ್ಯಾಜಿಕ್ ಮುಂದುವರೆದಿದೆ.

  2008ರಲ್ಲಿ ತೆರೆಕಂಡ ಅಮೀರ್ ಖಾನ್ ಅವರ ಘಜನಿ ಚಿತ್ರ ನಿರ್ಮಾಪಕರಿಗೆ ಮ್ಯಾಜಿಕ್ ನಂಬರ್ 100 ಕೋಟಿ ರು ದಾಟುವ ಕನಸು ನನಸು ಮಾಡಿತ್ತು. 2009ರಲ್ಲಿ ತೆರೆ ಕಂಡ 3 ಈಡಿಯಟ್ಸ್ ಚಿತ್ರ ದೇಶಿ ಮಾರುಕಟ್ಟೆಯಲ್ಲಿ 202 ಕೋಟಿ ನಿವ್ವಳ( ಒಟ್ಟಾರೆ 269 ಕೋಟಿ ರು) ಗಳಿಸಿತ್ತು. ಆದರೆ, ವಿದೇಶಿ ಮಾರುಕಟ್ಟೆಯಲ್ಲಿ 118 ಕೋಟಿ ರು(25 ಮಿಲಿಯನ್ ಡಾಲರ್) ಮಾತ್ರ ದಾಖಲಿಸಿತ್ತು. ಇದೇ ಹಾದಿಯನ್ನು ಇನ್ನಷ್ಟು ವಿಸ್ತರಿಸಿರುವ ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್ ಪ್ರೆಸ್ ದೇಶಿ ಹಾಗೂ ವಿದೇಶಿ ಮಾರುಕಟ್ಟೆ ಎರಡರಲ್ಲೂ 3 ಈಡಿಯಟ್ಸ್ ದಾಖಲೆ ಮುರಿದಿದೆ.

  ರೋಹಿತ್ ಶೆಟ್ಟಿ ಅವರ ನಿರ್ದೇಶನದ ಚಿತ್ರ ದೇಶಿ ಮಾರುಕಟ್ಟೆಯಲ್ಲಿ 226 ಕೋಟಿ ರು(ಒಟ್ಟಾರೆ 301 ಕೋಟಿ ರು ) ಗಳಿಸಿದೆ. ಸಾಗರೋತ್ತರ ದೇಶಗಳಲ್ಲಿನ ಗಳಿಕೆ 45 ದಿನಗಳಲ್ಲಿ 119 ಕೋಟಿ ರು (19 ಮಿಲಿಯನ್ ಡಾಲರ್) ದಾಟಿದೆ. ಸಾರ್ವಕಾಲಿಕ 20 ಭರ್ಜರಿ ಗಳಿಕೆ ಹಿಂದಿ ಚಿತ್ರಗಳ ಪಟ್ಟಿ ಇಲ್ಲಿದೆ ಓದಿ.

  ಭಾರತದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಚೆನ್ನೈ ಎಕ್ಸ್ ಪ್ರೆಸ್ ಇನ್ನೂ ತ್ವರಿತ ಗತಿಯಲಿ ಓಡುತ್ತಿದೆ. ಯಾವ ದೇಶದಲ್ಲಿ ಎಷ್ಟು ಗಳಿಸಿದೆ ಎಂಬುದರ ಲೆಕ್ಕಾಚಾರ ಇಲ್ಲಿದೆ ಓದಿ...

  ಭಾರತದಲ್ಲಿ ಎಷ್ಟಾಗಿದೆ

  ಭಾರತದಲ್ಲಿ ಎಷ್ಟಾಗಿದೆ

  3500ಕ್ಕೂ ಅಧಿಕ ಪರದೆಗಳಲ್ಲಿ ಆಗಸ್ಟ್ 8 ರಂದು ತೆರೆ ಕಂಡ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ದೇಶಿ ಮಾರುಕಟ್ಟೆಯಲ್ಲಿ ಸತತ ನಾಲ್ಕುವಾರ ಎಲ್ಲಾ ದಾಖಲೆಗಳನ್ನು ಧ್ವಂಸಗೊಳಿಸಿತು.

  ಭಾರತದ ಮಾರುಕಟ್ಟೆಯಲ್ಲಿ ಐದು ವಾರಗಳ ನಂತರ ನಿವ್ವಳ 226 ಕೋಟಿ ರು(ಒಟ್ಟಾರೆ ಗಳಿಕೆ 301 ಕೋಟಿ ರು) ದಾಟಿದೆ. 50ದಿನಗಳ ನಂತರದ ವರದಿ ವಾರಾಂತ್ಯದಲ್ಲಿ ಹೊರಬರಲಿದೆ.

  ಅಮೆರಿಕದಲ್ಲಿ

  ಅಮೆರಿಕದಲ್ಲಿ

  ಅಮೆರಿಕ, ಕೆನಡಾ ಸೇರಿ ಒಟ್ಟು 196 ಸ್ಕ್ರೀನ್ ಗಳಲ್ಲಿ ಶಾರುಖ್ -ದೀಪಿಕಾ ಅವರ ಚಿತ್ರ ಆಗಸ್ಟ್ 9 ರಂದು ತೆರೆ ಕಂಡಿತ್ತು.

  45 ದಿನಗಳ ನಂತರ ಯುಎಸ್ ಬಾಕ್ಸಾಫೀಸ್ ನಲ್ಲಿ ಒಟ್ಟಾರೆ ಗಳಿಕೆ 33.18 ಕೋಟಿ ರು(52,94,853 ಡಾಲರ್) ಗಳಿಕೆಯಾಗಿದೆ. ಸದ್ಯ 20 ಸ್ಕ್ರೀನ್ ಗಳಲ್ಲಿ ಚಿತ್ರದ ಪ್ರದರ್ಶನ ಮುಂದುವರೆದಿದೆ.

  ಯುಕೆ ಮಾರುಕಟ್ಟೆ

  ಯುಕೆ ಮಾರುಕಟ್ಟೆ

  ಯುನೈಟೆಡ್ ಕಿಂಗ್ ಡಮ್ ಮಾರುಕಟ್ಟೆಯಲ್ಲಿ ಸುಮಾರು 126 ಸ್ಕ್ರೀನ್ ಗಳಲ್ಲಿ ಆಗಸ್ಟ್ 9 ರಂದು ಚಿತ್ರ ತೆರೆಕಂಡಿತ್ತು.

  45 ದಿನಗಳ ನಂತರದ ಗಳಿಕೆ ಲೆಕ್ಕಾಚಾರದಂತೆ 21.82 ಕೋಟಿ ರು(21,72,380 ಪೌಂಡ್) ಗಳಿಸಿತ್ತು. 5 ಸ್ಕ್ರೀನ್ ಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ.

  ಯುಎಇ ಸಿನಿ ಮಾರುಕಟ್ಟೆ

  ಯುಎಇ ಸಿನಿ ಮಾರುಕಟ್ಟೆ

  ರೋಹಿತ್ ಶೆಟ್ಟಿ-ಶಾರುಖ್ ಅವರ ಮೊದಲ ಕಾಂಬಿನೇಷನ್ ಚಿತ್ರ ಯುಎಇ, GCC ಬಾಕ್ಸಾಫೀಸ್ ನಲ್ಲಿ ಸುಮಾರು29.51 ಕೋಟಿ ರು(AED 17.3 ಮಿಲಿಯನ್) ಗಳಿಸಿದೆ. ಯಾವುದೇ ಹಿಂದಿ ಚಿತ್ರ ಮಧ್ಯಪ್ರಾಚ್ಯದಲ್ಲಿ ಇಷ್ಟು ದೊಡ್ಡ ಗಳಿಕೆ ಇದುವರೆವಿಗೂ ಮಾಡಿರಲಿಲ್ಲ.

  ಆಸ್ಟ್ರೇಲಿಯಾ ಮಾರುಕಟ್ಟೆ

  ಆಸ್ಟ್ರೇಲಿಯಾ ಮಾರುಕಟ್ಟೆ

  ಆಸ್ಟ್ರೇಲಿಯಾದಲ್ಲಿ 21 ಸ್ಕ್ರೀನ್ ಗಳಲ್ಲಿ ಆಗಸ್ಟ್ 9 ರಂದು ಚೆನ್ನೈ ಎಕ್ಸ್ ಪ್ರೆಸ್ ಬಿಡುಗಡೆಯಾಗಿತ್ತು.

  6 ವಾರಗಳ ನಂತರ ಆಸ್ಟ್ರೇಲಿಯಾ ಬಾಕ್ಸಾಫೀಸ್ ನಲ್ಲಿ ಸುಮಾರು 4.70 ಕೋಟಿ ರು(A$8,00,739) ಗಳಿಕೆ ಮಾಡಿದೆ. ಸದ್ಯಕ್ಕೆ ಈ ಚಿತ್ರ ಪ್ರದರ್ಶನ ಕಾಣುತ್ತಿಲ್ಲ.

  ಪಾಕಿಸ್ತಾನದಲ್ಲಿ

  ಪಾಕಿಸ್ತಾನದಲ್ಲಿ

  ಆಗಸ್ಟ್ 8 ರಂದೇ ಪಾಕಿಸ್ತಾನದಲ್ಲಿ ತೆರೆ ಕಂಡ ಚೆನ್ನೈ ಎಕ್ಸ್ ಪ್ರೆಸ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿವರೆಗೂ ಸುಮಾರು ಬಾಕ್ಸಾಫೀಸ್ ನಲ್ಲಿ ಸುಮಾರು 5.53 ಕೋಟಿ ರು ($900k) ಗಳಿಸಿದೆ.

  ನ್ಯೂಜಿಲೆಂಡ್ ನಲ್ಲಿ

  ನ್ಯೂಜಿಲೆಂಡ್ ನಲ್ಲಿ

  ನ್ಯೂಜಿಲೆಂಡ್ ನಲ್ಲಿ ದೀಪಿಕಾ-ಶಾರುಖ್ ಜೋಡಿಯ ಈ ಚಿತ್ರ ಐದು ವಾರಗಳ ನಂತರ 1.36 ಕೋಟಿ ರು (NZ$ 2,61,916) ಗಳಿಸಿದೆ. ಸದ್ಯಕ್ಕೆ ಇಲ್ಲಿ ಎಲ್ಲೂ ಪ್ರದರ್ಶನ ಕಾಣುತ್ತಿಲ್ಲ

  ಫಿಜಿ, ಪೆರು, ನಾರ್ವೆ

  ಫಿಜಿ, ಪೆರು, ನಾರ್ವೆ

  ಯುರೋಪ್ ಮಾರುಕಟ್ಟೆಗೂ ಹಿಂದಿ ಚಿತ್ರರಂಗ ವಿಸ್ತರಿಸುತ್ತಿದ್ದು, ಫಿಜಿಯಲ್ಲಿ ಎರಡು ಸ್ಕ್ರೀನ್ ಗಳಿಂದ 16.52 ಲಕ್ಷರು (FJD 51,702)

  * ಪೆರುವಿನಲ್ಲಿ 39 ಸ್ಕ್ರೀನ್ ಗಳಿಂದ 67.70 ಲಕ್ಷ ರು ((PEN 3,08,216)

  * ನಾರ್ವೆ ಬಾಕ್ಸಾಫೀಸ್ ನಲ್ಲಿ 6 ಸ್ಕ್ರೀನ್ ಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು 16.49 ಲಕ್ಷ ರು (NOK 1,57,498) ಗಳಿಸಿದೆ.

  ಜರ್ಮನಿ, ಮಲೇಷಿಯಾ

  ಜರ್ಮನಿ, ಮಲೇಷಿಯಾ

  ಜರ್ಮನಿ ಈಗ ಭಾರತೀಯ ಚಿತ್ರಗಳಿಗೆ ಉತ್ತಮ ಮಾರುಕಟ್ಟೆಯಾಗುತ್ತಿದೆ. ಜರ್ಮನಿಯಲ್ಲಿ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ 80 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಂದು 71.60 ಲಕ್ಷ ( 84,239 ಯುರೋ) ಗಳಿಸಿದೆ. ಮಲೇಷಿಯಾದಲ್ಲಿ 66.54 ಲಕ್ಷ (MYR 3,45,565) ಗಳಿಸಿದೆ.

  English summary
  Chennai Express, completes 50 days at several screens across the globe. While the craze for it died down long back in the domestic market, the Shahrukh Khan and Deepika Padukone starrer is still having a good time at key international centres like UK, USA and UAE.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X