For Quick Alerts
  ALLOW NOTIFICATIONS  
  For Daily Alerts

  ರಸ್ತೆ ಅಪಘಾತದಲ್ಲಿ ಮೊನ್ನೆ ಸಿರೀಯಲ್ ನಟಿ, ನಿನ್ನೆ ಬಾಲ ನಟ ಸಾವು

  |

  ಇತ್ತೀಚಿಗಷ್ಟೆ ಕನ್ನಡ ಧಾರಾವಾಹಿ ನಟಿ ಶೋಭ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚಿತ್ರದುರ್ಗದ ಹೊರವಲಯ ರಾಷ್ಟ್ರೀಯ ಹೆದ್ದಾರಿ-4ರ ಕುಂಚಿಗನಾಳು ಗ್ರಾಮದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಶೋಭ ಸೇರಿದಂತೆ ಐವರು ಮೃತಪಟ್ಟಿದ್ದರು.

  ಈ ಘಟನೆ ನಡೆದ ಒಂದು ದಿನದ ಅಂತರದಲ್ಲಿ ಮತ್ತೊಂದು ರಸ್ತೆ ಅಪಘಾತ ನಡೆದಿದ್ದು, ಹಿಂದಿ ಚಿತ್ರರಂಗದ ಬಾಲನಟ ಶಿವಲೇಖ್ ಸಿಂಗ್ ನಿಧನ ಹೊಂದಿದ್ದಾರೆ.

  ಗುರುವಾರ ಛತ್ತೀಸ್ಘಡ್ ದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 14 ವರ್ಷದ ಬಾಲನಟ ಶಿವಲೇಖ್ ಸಿಂಗ್ ದುರ್ಮಣ ಹೊಂದಿದ್ದಾರೆ. ರಾಯ್ಪುರದಿಂದ ಬಿಲಾಸ್ಪುರಕ್ಕೆ ಪ್ರಯಾಣ ಮಾಡುತ್ತಿದ್ದ ವೇಳೆ ತಾವು ಚಲಿಸುತ್ತಿದ್ದ ಕಾರಿಗೆ ಎದುರುಗಡೆಯಿಂದ ಬಂದ ಟ್ರಕ್ ಡಿಕ್ಕಿ ಹೊಡೆದಿದೆ.

  ಅಪಘಾತದಲ್ಲಿ ಸಾವನಪ್ಪಿದ 'ಮಗಳು ಜಾನಕಿ' ಖ್ಯಾತಿಯ ನಟಿ ಶೋಭಾ

  ಈ ಘಟನೆಯಲ್ಲಿ ಬಾಲನಟ ಮೃತಪಟ್ಟಿದ್ದರೆ, ಆತನ ತಾಯಿ ಮತ್ತು ತಂದೆ ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದೆ. ಸದ್ಯ ಶಿವಲೇಖ್ ಸಿಂಗ್ ಅವರ ತಾಯಿ ಸ್ಥಿತಿ ಬಹಳ ಗಂಭೀರವಾಗಿದೆ ಎನ್ನಲಾಗಿದೆ.

  ಶಿವಲೇಖ್ ತಂದೆ-ತಾಯಿ ಬಹಳ ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ. ಸಂಕಟಮೋಚಕ ಹನುಮಾನ್, ಬಾಲ್ ವೀರ್, ಸಸುರಾಲ್ ಸಿಮರ್ ಕಾ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕೆಲವು ರಿಯಾಲಟಿ ಶೋಗಳಲ್ಲೂ ಈ ಬಾಲನಟ ಅಭಿನಯಿಸಿದ್ದರು.

  English summary
  Bollywood Child artist Shivlekh Singh died in road accident on Thursday. Shivlekh Singh is acted in several hindi serials.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X