For Quick Alerts
  ALLOW NOTIFICATIONS  
  For Daily Alerts

  80s Reunion: ಮುಂಬೈನಲ್ಲಿ ಆ ಕಾಲದ ತಾರೆಯರ ಮೋಜು ಮಸ್ತಿ

  |

  ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್‌ಗಳಾಗಿ ರಾರಾಜಿಸುತ್ತಿರುವವರು ಸಾಕಷ್ಟು ಜನ ಇದ್ದಾರೆ. ಭಾಷೆಯ ಭೇದಭಾವ ಇಲ್ಲದೇ ಕಲಾವಿದರೆಲ್ಲಾ ಒಂದೇ ಎಂದು ನಟ ನಟಿಯರು ಪದೇ ಪದೇ ಸಾಬೀತು ಮಾಡುತ್ತಾ ಬರುತ್ತಿದ್ದಾರೆ. 80ರ ದಶಕದ ಸ್ಟಾರ್ ನಟ ನಟಿಯರು ಮತ್ತೊಮ್ಮೆ ಒಂದೆಡೆ ಸೇರಿ ಪಾರ್ಟಿ ಮೋಜು ಮಸ್ತಿ ಎಂದು ಎಂಜಾಯ್ ಮಾಡಿದ್ದಾರೆ.

  10 ಬಾರಿ ವಿವಿಧ ಭಾಷೆಗಳ ಸ್ಟಾರ್ ನಟನಟಿಯರು ಈ ರೀತಿ ಗೆಟ್‌ ಟು ಗೆದರ್ ಪಾರ್ಟಿ ಮಾಡಿದ್ದರು. ಇದೀಗ 11ನೇ ಬಾರಿಗೆ ಹಿಂದಿ, ತೆಲುಗು, ತಮಿಳು, ಮಲಯಾಳಂನ 80ರ ದಶಕದ ಸ್ಟಾರ್ ಕಲಾವಿದರು ಒಟ್ಟಿಗೆ ಸೇರಿ ಸಂಭ್ರಮಿಸಿದ್ದಾರೆ. ಈ ಬಾರಿ ಬಾಲಿವುಡ್ ನಟ ಜಾಕಿ ಶ್ರಾಫ್ ಹಾಗೂ ನಟಿ ಪೂನಮ್ ದಿಲ್ಲಾನ್ ಮುಂಬೈನಲ್ಲಿ ಆತಿಥ್ಯ ನೀಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಅರ್ಜುನ್ ಸರ್ಜಾ, ಅನಿಲ್ ಕಪೂರ್, ರಮ್ಯಾಕೃಷ್ಣ, ಸುಮಲತಾ ಅಂಬರೀಶ್, ವಿದ್ಯಾಬಾಲನ್, ಖುಷ್ಬು, ಸುಹಾಸಿನಿ, ಅಂಬಿಕಾ, ಅನುಪಮ್ ಖೇರ್, ಶರತ್ ಕುಮಾರ್, ನರೇಶ್, ವಿಕ್ಟರಿ ವೆಂಕಟೇಶ್ ಸೇರಿದಂತೆ ಸಾಕಷ್ಟು ನಟ -ನಟಿಯರು ಈ ಪಾರ್ಟಿಯಲ್ಲಿ ಭಾಗವಹಿಸಿ ಹಾಡಿ, ಕುಣಿದು, ತಮಾಷೆ ಮಾಡಿ ಕಾಲ ಕಳೆದಿದ್ದಾರೆ.

  ಸ್ಟಾರ್‌ ಕಲಾವಿದರ ಈ ರೀ ಯೂನಿಯನ್ ಗ್ರೂಪ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಗ್ರೂಪ್‌ನಲ್ಲಿರುವ ಸಾಕಷ್ಟು ಜನ ಕಲಾವಿದರು ಇವತ್ತಿಗೂ ಲೀಡ್‌ ರೋಲ್‌ಗಳಲ್ಲಿ ದರ್ಬಾರ್ ನಡೆಸುತ್ತಿದ್ದಾರೆ.

  30 ಜನ ಕಲಾವಿದರು ಭಾಗಿ

  30 ಜನ ಕಲಾವಿದರು ಭಾಗಿ

  ಚಿರಂಜೀವಿ, ರಜನಿಕಾಂತ್, ಮೋಹನ್ ಲಾಲ್, ಶರತ್‌ ಕುಮಾರ್, ಸುಹಾಸಿನಿ ಸೇರಿದಂತೆ ಸಾಕಷ್ಟು ಕಲಾವಿದರು ಈ ರೀತಿ 10 ವರ್ಷಗಳಿಂದ ಒಂದೆಡೆ ಸೇರಿ ಒಂದೆರಡು ದಿನ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಾ ಬರುತ್ತಿದ್ದಾರೆ. ಕೆಲವರು ಈ ಬಾರಿ ಭಾಗವಹಿಸೋಕೆ ಸಾಧ್ಯವಾಗಲಿಲ್ಲ. ಕೊರೊನಾ ಹಾವಳಿಯಿಂದ ಕಳೆದೆರಡು ವರ್ಷಗಳಿಂದ ಈ ರೀತಿ ಸ್ಟಾರ್‌ಗಳು ಒಂದೆಡೆ ಸೇರಲು ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಟಾರ್ ಕಲಾವಿದರು ಸಂಭ್ರಮ ಹೆಚ್ಚಾಗಿತ್ತು. 2019ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಈ ಗೆಟ್‌ ಟು ಗೆದರ್ ನಡೆದಿತ್ತು.

  ಮೋಜು ಮಸ್ತಿ ಮಾಡಿ ಎಂಜಾಯ್

  ಮೋಜು ಮಸ್ತಿ ಮಾಡಿ ಎಂಜಾಯ್

  ಎರಡು ದಿನಗಳ ಕಾಲ ಈ ಪಾರ್ಟಿ ನಡೆಯುತ್ತದೆ. ವಿಭಿನ್ನ ಥೀಮ್ ಕಾಸ್ಟ್ಯೂಮ್ಸ್‌ನಲ್ಲಿ ಎಲ್ಲರೂ ಮಿಂಚುತ್ತಾರೆ. ಈ ಬಾರಿ ಆರೆಂಜ್, ಗ್ರೇ, ಸಿಲ್ವರ್ ಕಲರ್ ಕಾಸ್ಟ್ಯೂಮ್ಸ್‌ನಲ್ಲಿ ಕಲಾವಿದರು ಕಾಣಿಸಿಕೊಂಡಿರೋದನ್ನು ನೋಡಬಹುದು. 12 ವರ್ಷಗಳ ಹಿಂದೆ ನಟಿ ಸುಹಾಸಿನಿ ಈ ಕಾನ್ಸೆಪ್ಟ್ ಆರಂಭಿಸಿದ್ದರು. ಅಂದಿನಿಂ ಪ್ರತಿ ವರ್ಷ ವಿವಿಧ ಚಿತ್ರರಂಗದ 80ರ ದಶಕದ ಸ್ಟಾರ್ ಕಲಾವಿದರು ಭಾಗಿ ಆಗುತ್ತಿದ್ದಾರೆ.

  ಡಾನ್ ಚಿತ್ರದ ಹಾಡು ಹಾಡಿದ ಸುಮಲತಾ

  ಡಾನ್ ಚಿತ್ರದ ಹಾಡು ಹಾಡಿದ ಸುಮಲತಾ

  ಮಹಾರಾಷ್ಟ್ರ ಸ್ಟೈಲ್‌ನಲ್ಲಿ ವೇದಿಕೆ ಸಿದ್ಧವಾಗಿತ್ತು. ಮಹಾರಾಷ್ಟ್ರ ಸ್ಟೈಲ್ ಭಕ್ಷ್ಯ ಭೋಜನದ ವ್ಯವಸ್ಥೆಯು ಇತ್ತು. ಇನ್ನು ಪಾರ್ಟಿಯಲ್ಲಿ ನಟಿ ಸುಮಲತಾ ಅಂಬರೀಶ್ 'ಡಾನ್' ಚಿತ್ರದ 'ಏ ಮೇರಾ ದಿಲ್' ಹಾಡು ಹಾಡಿದ್ದಾರೆ. ಅದೇ ರೀತಿ ನಟಿ ಸುಹಾಸಿನಿ ತಮಿಳು ಸೂಪರ್ ಹಿಟ್ ಗೀತೆಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಅದರ ಸಣ್ಣ ಸಣ್ಣ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

  ಮುಂದುವರೆಯಲಿದೆ 80s ರೀ ಯೂನಿಯನ್

  ಮುಂದುವರೆಯಲಿದೆ 80s ರೀ ಯೂನಿಯನ್

  11 ಬಾರಿ ಯಶಸ್ವಿಯಾಗಿ ನಡೆಸಿರುವ ಈ 80s ರೀ ಯೂನಿಯನ್ ಪಾರ್ಟಿಯನ್ನು ಮುಂದಿನ ವರ್ಷವೂ ಮುಂದುವರೆಸಲಾಗುತ್ತದೆ. ಮುಂದಿನ ವರ್ಷ ಯಾರು ಆತಿಥ್ಯ ನೀಡುತ್ತಾರೆ. ಯಾರೆಲ್ಲಾ ಭಾಗಿ ಆಗುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಸ್ಯಾಂಡಲ್‌ವುಡ್‌ನಿಂದ ಈ ಹಿಂದೆ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ರಮೇಶ್ ಅರವಿಂದ್ ಒಂದೆರಡು ಬಾರಿ ಭಾಗಿ ಆಗಿದ್ದರು.

  English summary
  Chiranjeevi Sumalatha Ambareesh suhasini Ramyakrishna and many Legendary actors of 80s Reunion at mumbai. Jackie Shroff and Poonam Dhillon hosted the actors from the four southern states. Know more.
  Sunday, November 13, 2022, 22:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X