»   » ಬಾಕ್ಸಾಫೀಸಲ್ಲಿ ಕಾಕ್ ಟೈಲ್ ಕಲೆಕ್ಷನ್ ರು.39 ಕೋಟಿ

ಬಾಕ್ಸಾಫೀಸಲ್ಲಿ ಕಾಕ್ ಟೈಲ್ ಕಲೆಕ್ಷನ್ ರು.39 ಕೋಟಿ

Posted By:
Subscribe to Filmibeat Kannada

ಬಾಲಿವುಡ್ ಚಿತ್ರ 'ಕಾಕ್ ಟೈಲ್' ಬಾಕ್ಸಾಫೀಸಲ್ಲಿ ಭರ್ಜರಿಯಾಗಿ ವಸೂಲಿ ಮಾಡಿದೆ. ಸೈಫ್ ಆಲಿ ಖಾನ್ ಹಾಗೂ ದೀಪಿಕಾ ಪಡುಕೋಣೆ ತಾರಾಗಣದ ಈ ಚಿತ್ರ ಬಿಡುಗಡೆಯಾದ ಮೂರೇ ದಿನಗಳಲ್ಲಿ ರು.39 ಕೋಟಿ ಬಾಚಿದೆ ಎನ್ನುತ್ತದೆ ಬಾಲಿವುಡ್ ಬಾಕ್ಸಾಫೀಸ್ ರಿಪೋರ್ಟ್.

ಸಿಂಗಲ್ ಸ್ಕ್ರೀನ್ಸ್ ಗಳಿಗೆ ಹೋಲಿಸಿದರೆ 'ಕಾಕ್ ಟೈಲ್' ಚಿತ್ರ ಅತ್ಯಧಿಕವಾಗಿ ಬಿಡುಗಡೆಯಾಗಿದ್ದು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ. ಮಲ್ಟಿಫ್ಲೆಕ್ಸ್ ಗಳಲ್ಲಿ ಅತ್ಯಧಿಕವಾಗಿ ದುಡ್ಡು ಬಾಚಿದ ಚಿತ್ರ ಸಿಂಗಲ್ ಸ್ಕ್ರೀನ್ ಗಳಿಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ.

ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ ರು.11 ಕೋಟಿ ಕಲೆಕ್ಷನ್ ಮಾಡಿತ್ತು. ಆರಂಭದಿಂದಲೂ ಚಿತ್ರ ಮಲ್ಟಿಫ್ಲೆಕ್ಸ್ ಗಳಲ್ಲಿ ಮುನ್ನುಗ್ಗುತ್ತಿರುವುದು ವಿಶೇಷ. 'ಕಾಕ್ ಟೈಲ್' ಚಿತ್ರ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿದೆ. ಚಿತ್ರ ನೋಡಿದವರು ದೀಪಿಕಾ, ಸೈಫ್ ಕೆಮಿಸ್ಟ್ರಿಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಮೊದಲ ದಿನವೇ ಚಿತ್ರದ ಬಗ್ಗೆ ಕೇಳಿಬಂದ ಮೆಚ್ಚುಗೆ ಮಾತುಗಳು ಎರಡನೇ ದಿನದ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ. 'ಕಾಕ್ ಟೈಲ್' ಎರಡನೇ ದಿನದ ಕಲೆಕ್ಷನ್ ರು.12 ಕೋಟಿ. ಕೇವಲ ಶೇ.10ರಷ್ಟು ಏರಿಕೆ ಕಂಡುಬಂದಿದೆ.

ಆದರೆ ಭಾನುವಾರ ಬರುತ್ತಿದ್ದಂತೆ ಕಲೆಕ್ಷನ್ಸ್ ಒಮ್ಮೆಲೆ ಶೇ.30ರಷ್ಟು ಏರಿಕೆಯಾಗಿದೆ. ಒಟ್ಟಾರೆಯಾಗಿ ಮೊದಲ ವಾರಾಂತ್ಯದಲ್ಲಿ 'ಕಾಕ್ ಟೈಲ್' ಸರಿಸುಮಾರು ರು.39 ಕೋಟಿ ಕಲೆಕ್ಷನ್ ಮಾಡಿದೆ. ಆದರೆ 'ಬೋಲ್ ಬಚ್ಚನ್' ಚಿತ್ರದ ಮುಂದೆ ಕಾಕ್ ಟೈಲ್ ಕಲೆಕ್ಷನ್ ಮಂಡಿಯೂರಿದೆ.

ಅಜಯ್ ದೇವಗನ್, ಅಸಿನ್, ಅಭಿಷೇಕ್ ಬಚ್ಚನ್, ಪ್ರಚಿ ದೇಸಾಯಿ ತಾರಾಗಣದ 'ಬೋಲ್ ಬಚ್ಚನ್' ಚಿತ್ರ ಮೊದಲ ವಾರಾಂತ್ಯದಲ್ಲಿ ರು.43.10 ಕೋಟಿ ಬಾಚುವ ಮೂಲಕ 'ಕಾಕ್ ಟೈಲ್' ಚಿತ್ರವನ್ನು ಹಿಂದಿಕ್ಕಿದೆ.

ಹೋಮಿ ಅದಜಾನಿಯಾ ನಿರ್ದೇಶನದ 'ಕಾಕ್ ಟೈಲ್' ಚಿತ್ರವನ್ನು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ರೊಮ್ಯಾಂಟಿಕ್ ಕಾಮಿಡಿ ಆದ ಈ ಚಿತ್ರದನ್ನು ಸೈಫ್ ಆಲಿ ಖಾನ್ ಹಾಗೂ ದಿನೇಶ್ ವಿಜನ್ ನಿರ್ಮಿಸಿದ್ದಾರೆ.

ದೀಪಿಕಾ ಪಡುಕೋಣೆಯ ಬಿಕಿನಿ ದೃಶ್ಯಗಳು ಚಿತ್ರದಲ್ಲಿ ಪ್ರಮುಖ ಆಕರ್ಷಣೆ. ಮೈಚಳಿ ಬಿಟ್ಟು ದೀಪಿಕಾ ಟೂ ಪೀಸ್ ನಲ್ಲಿ ಮಿಂಚಿದ್ದಾರೆ. ಚಿತ್ರದ ಪೋಸ್ಟರ್, ಪ್ರೊಮೋಗಳು ಪ್ರೇಕ್ಷಕರನ್ನು ಮಲ್ಟಿಫ್ಲೆಕ್ಸ್ ಗಳಿಗೆ ಸೆಳೆಯಲು ಪ್ರಮುಖ ಕಾರಣ ಇದೇ ಎನ್ನಬಹುದು. (ಏಜೆನ್ಸೀಸ್)

English summary
Bollywood movie Cocktail‬ has received a superb response at the Box Office in India in the first weekend. Saif Ali Khan and Deepika Padukone starrer movie has raked in Rs 39 crores nett at the collection centres in three days.
Please Wait while comments are loading...