For Quick Alerts
  ALLOW NOTIFICATIONS  
  For Daily Alerts

  ಸಾರಾ ಅಲಿ ಖಾನ್‌ ಜೊತೆ ಡೇಟಿಂಗ್: ಬಾಯ್ಬಿಟ್ಟ ಕ್ರಿಕೆಟಿಗ ಶುಬ್ಮನ್ ಗಿಲ್

  |

  ಕ್ರಿಕೆಟ್ ಹಾಗೂ ಬಾಲಿವುಡ್‌ ನಡುವಿನ ನಂಟಿಗೆ ದಶಕಗಳ ಇತಿಹಾಸವಿದೆ. ಕ್ರಿಕೆಟಿಗರು, ಬಾಲಿವುಡ್ ನಟಿಯರನ್ನು ಪ್ರೀತಿಸುವುದು ಮದುವೆಯಾಗುವುದು ಮೊದಲಿನಿಂದಲೂ ನಡೆದು ಬಂದಿದೆ. ಈಗಲೂ ನಡೆಯುತ್ತಲೇ ಇದೆ.

  ಮನ್ಸೂರ್ ಅಲಿ ಖಾನ್ ಪಟೌಡಿ ಇಂದ ಆರಂಭಿಸಿ ಈಗಿನ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ವರೆಗೆ ಕ್ರಿಕೆಟಿಗರು ಬಾಲಿವುಡ್ ನಟಿಯರ ಪ್ರೇಮಪಾಶಕ್ಕೆ ಬೀಳುತ್ತಲೇ ಬಂದಿದ್ದಾರೆ.

  ಅತಿಥಿ ಪಾತ್ರಕ್ಕೆ ಅತೀ ಹೆಚ್ಚು ಕೋಟಿ ಕೋಟಿ ಕೇಳುವ ಬಾಲಿವುಡ್ ಸ್ಟಾರ್‌ಗಳು ಇವರೇ: ಸಂಭಾವನೆ ಎಷ್ಟು?ಅತಿಥಿ ಪಾತ್ರಕ್ಕೆ ಅತೀ ಹೆಚ್ಚು ಕೋಟಿ ಕೋಟಿ ಕೇಳುವ ಬಾಲಿವುಡ್ ಸ್ಟಾರ್‌ಗಳು ಇವರೇ: ಸಂಭಾವನೆ ಎಷ್ಟು?

  ಕೆಲ ತಿಂಗಳಿನಿಂದ ಯುವ ಕ್ರಿಕೆಟ್ ಆಟಗಾರ ಶುಬ್ಮನ್ ಗಿಲ್ ಹಾಗೂ ನಟಿ ಸಾರಾ ಅಲಿ ಖಾನ್ ಲವ್ವಿ-ಡವ್ವಿ ವಿಚಾರ ಬಹಳ ಚರ್ಚೆಯಲ್ಲಿದೆ. ಇಬ್ಬರೂ ಕೆಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಸಹ. ಇಬ್ಬರು ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿಯಿದೆ. ಇದೀಗ ಈ ಬಗ್ಗೆ ಕ್ರಿಕೆಟಿಗ ಶುಬ್ಮನ್ ಗಿಲ್ ಮಾತನಾಡಿದ್ದಾರೆ.

  ಪಂಜಾಬಿ ಶೋ ಒಂದರಲ್ಲಿ ಭಾಗವಹಿಸಿದ್ದ ಶುಬ್ಮನ್ ಗಿಲ್‌ಗೆ 'ನೀವು ಸಾರಾ ಅಲಿ ಖಾನ್ ಡೇಟ್ ಮಾಡುತ್ತಿದ್ದೀರ?' ಎಂಬ ಪ್ರಶ್ನೆ ಎದುರಾಗಿದೆ. ಈ ಸುದ್ದಿಯನ್ನು ಅಲ್ಲಗಳೆಯದ ಶುಬ್ಮನ್ ಗಿಲ್, ಮೊದಲಿಗೆ 'ಇರಬಹುದು' ಎನ್ನುತ್ತಾರೆ ಬಳಿಕ ತುಸು ಸಮಯ ಯೋಚಿಸಿ 'ಇಲ್ಲದೆಯೂ ಇರಬಹುದು' ಎಂದು ಜಾಣತನದ ಉತ್ತರ ನೀಡಿದ್ದಾರೆ.

  ಮತ್ತೂ ನಿರೂಪಕ, 'ಸಾರಾ ಸಾರಾ ಸಚ್ ಬೋಲ್ದೊ' (ಪೂರ್ತಿ ಸತ್ಯ ಹೇಳಿಬಿಡು) ಎಂದು ಕೇಳುತ್ತಾರೆ. ಆಗ ಶಬ್ಮನ್ ಗಿಲ್, 'ಸಾರಾ ಸಾರಾ ಸಚ್ ಬೋಲ್‌ ರಹಾ ಹೂ' (ಪೂರ್ತಿ ಸತ್ಯವನ್ನೇ ಹೇಳುತ್ತಿದ್ದೇನೆ) ಎಂದಿದ್ದಾರೆ.

  ಸಾರಾ ಅಲಿ ಖಾನ್ ಹಾಗೂ ಶುಬ್ಮನ್ ಗಿಲ್ ಮುಂಬೈನ ಹೋಟೆಲ್ ಒಂದರಲ್ಲಿ ಒಟ್ಟಿಗೆ ಊಟ ಮಾಡುತ್ತಿದ್ದ ಚಿತ್ರಗಳು ವೈರಲ್ ಆಗಿದ್ದವು. ಆಗಲೇ ಇವರಿಬ್ಬರೂ ಡೇಟ್ ಮಾಡುತ್ತಿರುವ ಸುದ್ದಿ ಹೊರಬಿದ್ದಿತ್ತು. ಬಳಿಕ ಮತ್ತೊಮ್ಮೆ ಈ ಜೋಡಿ ಒಂದೇ ಹೋಟೆಲ್‌ನಲ್ಲಿ ಕಾಣಿಸಿಕೊಂಡರು. ಒಂದೇ ಫ್ಲೈಟ್‌ನಲ್ಲಿ ಪ್ರಯಾಣ ಮಾಡಿದ್ದು ಸಹ ಸುದ್ದಿಯಾಯಿತು.

  ಮೊದಲಿಗೆ ಶುಬ್ಮನ್ ಗಿಲ್ ಹೆಸರು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆಗೂ ಕೇಳಿ ಬಂದಿತ್ತು. ಪರಸ್ಪರರು ಇನ್‌ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದರು. ಒಬ್ಬರ ಚಿತ್ರಗಳಿಗೆ ಮತ್ತೊಬ್ಬರು ಕಮೆಂಟ್‌ಗಳನ್ನೂ ಮಾಡಿಕೊಳ್ಳುತ್ತಿದ್ದರು. ಆದರೆ ಇವರಿಬ್ಬರ ಡೇಟಿಂಗ್ ಅನುಮಾನದ ಸುದ್ದಿಗಳು ಹೊರಬಿದ್ದಂತೆ ಇಬ್ಬರು ಪರಸ್ಪರರ ಚಿತ್ರಗಳಿಗೆ ಕಮೆಂಟ್ ಮಾಡುವುದು ಬಿಟ್ಟರು. ಇವರ ಡೇಟಿಂಗ್ ಸುದ್ದಿಗಳಿಗೂ ಬ್ರೇಕ್ ಬಿದ್ದಿತು.

  ಟಿ20 ವಿಶ್ವಕಪ್‌ನಲ್ಲಿ ಶುಬ್ಮನ್ ಗಿಲ್‌ಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಭಾರತವು ನ್ಯೂಜಿಲೆಂಡ್ ಪ್ರವಾಸ ಮಾಡಲಿದ್ದು, ಟಿ20 ಹಾಗೂ ಒನ್‌ಡೇ ಪಂದ್ಯಗಳನ್ನು ಆಡಲಿದೆ. ಎರಡೂ ತಂಡದಲ್ಲಿ ಶುಬ್ಮನ್ ಗಿಲ್‌ಗೆ ಸ್ಥಾನ ದೊರೆತಿದೆ. ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವ ಶುಬ್ಮನ್ ಗಿಲ್‌ ಗುಜರಾತ್ ತಂಡದ ಪರ ಆಡುತ್ತಿದ್ದಾರೆ.

  English summary
  Cricketer Shubman Gill talks about dating actress Sara Ali Khan. He did not deny the news of him dating Sara Ali Khan.
  Wednesday, November 16, 2022, 7:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X