»   » ಅನುಷ್ಕಾ ಶರ್ಮಾ 'ಫಿಲೌರಿ' ಚಿತ್ರಕ್ಕೆ ವಿರಾಟ್ ಕೊಹ್ಲಿ ಪ್ರೊಡ್ಯೂಸರ್?

ಅನುಷ್ಕಾ ಶರ್ಮಾ 'ಫಿಲೌರಿ' ಚಿತ್ರಕ್ಕೆ ವಿರಾಟ್ ಕೊಹ್ಲಿ ಪ್ರೊಡ್ಯೂಸರ್?

Posted By:
Subscribe to Filmibeat Kannada

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಿರ್ಮಿಸಿ, ನಟಿಸಿರುವ 'ಫಿಲೌರಿ' ಚಿತ್ರ ಮಾರ್ಚ್ 24 ರಂದು ತೆರೆಕಾಣಲಿದೆ. ಆದರೆ ಚಿತ್ರಕ್ಕೆ ವಿರಾಟ್ ಕೊಹ್ಲಿ ಬಂಡವಾಳ ಹೂಡಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಈ ರೂಮರ್ಸ್ ಗೆ ಈಗ ಅನುಷ್ಕಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.

ಅನುಷ್ಕಾ ಶರ್ಮಾ ಹಲವು ದಿನಗಳಿಂದ ಹರಿದಾಡುತ್ತಿರುವ ಗಾಳಿಸುದ್ದಿಗೆ ಬೇಸರ ವ್ಯಕ್ತಪಡಿಸಿದ್ದು, ಮಾಧ್ಯಮಗಳ ವಿರುದ್ಧ ಗುಡುಗಿದ್ದಾರೆ. ಶನಿವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅನುಷ್ಕಾ, ' 'ಫಿಲೌರಿ' ನಾನು ನಿರ್ಮಿಸುತ್ತಿರುವ ಎರಡನೇ ಚಿತ್ರ. ನಮ್ಮದೇ ಬ್ಯಾನರ್ ಆದ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಮತ್ತು ಫಾಕ್ಸ್ ಸ್ಟಾರ್ ಹಿಂದಿ ಜತೆಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ' ಎಂದಿದ್ದಾರೆ.[ಅನುಷ್ಕಾ ಶರ್ಮಾ ನಿರ್ಮಾಣದ 'ಫಿಲೌರಿ' ರಿಲೀಸ್ ಗೆ ರೆಡಿ]

Cricketer Virat Kohli Is The Producer Of Anushka Sharma’s Phillauri?

ಮಾಧ್ಯಮಗಳ ವಿರುದ್ಧ ಹರಿಹಾಯ್ದಿರುವ ಅನುಷ್ಕಾ 'ಯಾವುದೇ ಮಾಹಿತಿಯನ್ನು ನೀಡುವ ಮೊದಲು ಸತ್ಯಾಂಶ ವನ್ನು ಪರಿಶೀಲಿಸಿ. ಪತ್ರಕರ್ತರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬೋಗಸ್ ಹೇಳಿಕೆಗಳು ನನಗೆ ಮಾತ್ರವಲ್ಲದೇ, ನಾನು ಒಂದು ವರ್ಷದಿಂದ ಚಿತ್ರಕ್ಕಾಗಿ ಪಟ್ಟಿರುವ ಶ್ರಮದ ಮೇಲು ಅಗೌರವ ತೋರುತ್ತದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.[ಅನುಷ್ಕಾ ಜೊತೆ ದೀಪಾವಳಿ ಸಂಭ್ರಮಿಸಿದ ಕೊಹ್ಲಿ]

Cricketer Virat Kohli Is The Producer Of Anushka Sharma’s Phillauri?

ಅಂದಹಾಗೆ 'ಫಿಲೌರಿ' ಚಿತ್ರಕ್ಕೆ ವಿರಾಟ್ ನಿರ್ಮಾಪಕ ಎಂಬ ಸುದ್ದಿ ಹರಿದಾಡಲು ಅವರೊಂದಿಗಿನ ಗೆಳೆತನವೇ ಕಾರಣವಾಗಿದೆ. ಕಳೆದ ವರ್ಷ ಅನುಷ್ಕಾ ಜೊತೆಗೆ ವಿರಾಟ್ ಕೊಹ್ಲಿ ಎಂಗೇಜ್ ಮೆಂಟ್ ಅಗಿದೆ ಎಂಬ ಸುಳ್ಳು ಸುದ್ದಿಗಳು ಸೃಷ್ಟಿಯಾಗಿದ್ದರಿಂದ, ಈಗ ವಿರಾಟ್ 'ಫಿಲೌರಿ' ಚಿತ್ರಕ್ಕೆ ಹಣ ಹೂಡಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ ಎಂದು ಮುಂಬೈ ಮಾಧ್ಯಮಗಳು ವರದಿ ಮಾಡಿವೆ.

English summary
Actress-producer Anushka Sharma has slammed rumours that her rumoured beau and cricketer Virat Kohli has invested in her new production Phillauri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada