»   » ಪಬ್ಲಿಕ್ ಡಿಮ್ಯಾಂಡ್ - ಚಿರಂಜೀವಿ 'ಡಿ.ಡಿ.ಎಲ್.ಜೆ' ಮತ್ತೆ ತೆರೆಗೆ

ಪಬ್ಲಿಕ್ ಡಿಮ್ಯಾಂಡ್ - ಚಿರಂಜೀವಿ 'ಡಿ.ಡಿ.ಎಲ್.ಜೆ' ಮತ್ತೆ ತೆರೆಗೆ

Posted By:
Subscribe to Filmibeat Kannada

''19 ವರ್ಷಗಳ ಪ್ರೇಮ ಪರ್ವಕ್ಕೆ ಫುಲ್ ಸ್ಟಾಪ್ ಬಿದ್ದಿದೆ. 1009 ವಾರಗಳ ಕಾಲ ಸುದೀರ್ಘ ಪ್ರದರ್ಶನ ಕಂಡ 'ಡಿ.ಡಿ.ಎಲ್.ಜೆ' ಚಿತ್ರಕ್ಕೆ ಕೊನೆಗೂ ತೆರೆ ಎಳೆಯಲಾಗಿದೆ.''

ಹೀಗಂತ ಮೊನ್ನೆ ಗುರುವಾರವಷ್ಟೇ ಮುಂಬೈನ 'ಮರಾಠಾ ಮಂದಿರ್' ಚಿತ್ರದ ಆಡಳಿತ ಮಂಡಳಿ ಅಧಿಕೃತವಾಗಿ ಘೋಷಿಸಿತ್ತು. ಕಾಡ್ಗಿಚ್ಚಿನಂತೆ ಈ ಸುದ್ದಿ ಹಬ್ಬುತ್ತಿದ್ದಂತೆ, 'ಮರಾಠಾ ಮಂದಿರ್' ಥಿಯೇಟರ್ ಮತ್ತು ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ಮುಂದೆ ಅಭಿಮಾನಿಗಳ ಆಕ್ರೋಶ ವ್ಯಕ್ತವಾಯ್ತು. ಸಾವಿರಾರು ಸಂದೇಶಗಳು ರವಾನೆಯಾದ್ವು.

'ಡಿ.ಡಿ.ಎಲ್.ಜೆ' ಯುಗಕ್ಕೆ ಶುಭಂ ಹಾಡಿದಕ್ಕೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು, ''ಯಾವುದೇ ಕಾರಣಕ್ಕೂ 'ಮರಾಠಾ ಮಂದಿರ್'ನಿಂದ 'ಡಿ.ಡಿ.ಎಲ್.ಜೆ' ಎತ್ತಂಗಡಿ ಮಾಡಬಾರದು'' ಅಂತ ಪಟ್ಟು ಹಿಡಿದು ಕೂತರು. ['ಡಿ.ಡಿ.ಎಲ್.ಜೆ' ಚಿತ್ರಕ್ಕಿಂದು ಸಹಸ್ರ ಸಂಭ್ರಮ]

ddlj

'ಡಿ.ಡಿ.ಎಲ್.ಜೆ' ಮೇಲೆ ಅಭಿಮಾನಿಗಳಿಟ್ಟಿರುವ ಇಂತಹ ಅಭಿಮಾನಕ್ಕೆ ಮನಸೋತ 'ಮರಾಠಾ ಮಂದಿರ್' ಮತ್ತು ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ತಮ್ಮ ನಿರ್ಧಾರವನ್ನ ಬದಲಾಯಿಸಿದೆ. 'ಡಿ.ಡಿ.ಎಲ್.ಜೆ' ಚಿತ್ರ ಪ್ರದರ್ಶನವನ್ನ ಹಿಂದಿನಂತೆ ಮುಂದುವರಿಸುವುದಕ್ಕೆ ನಿರ್ಧರಿಸಿದೆ.[''ತುಜ್ಹೆ ದೇಖಾ ತೋಯೆ ಜಾನಾ ಸನಂ....'' ಗುಡ್ ಬೈ]

ಮೀಸಲಾಗಿರುವ ಮ್ಯಾಟಿನಿ ಶೋ ಅಂದ್ರೆ 11.30ಕ್ಕೆ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ನಾಳೆಯಿಂದ ಮತ್ತೆ ಶುರುವಾಗಲಿದೆ. ನಿಜವಾದ ಪ್ರೀತಿ, ಅಭಿಮಾನಕ್ಕೆ ಸೋಲದವರು ಯಾರೂ ಇಲ್ಲ ಅನ್ನುವುದು ಇದಕ್ಕೆ ಇರಬೇಕು. (ಏಜೆನ್ಸೀಸ್)

English summary
Ever since the news went out, the Maratha Mandir management was flooded with requests to reinstate the movie based on which they decided to immediately reconsider their decision.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X