For Quick Alerts
  ALLOW NOTIFICATIONS  
  For Daily Alerts

  ಕತ್ರೀನಾ ಕೈಫ್ ಕಿವಿಕಚ್ಚಿದ ರಣ್ಬೀರ್ ಮಾಜಿ ಪ್ರೇಯಸಿ ದೀಪಿಕಾ

  By Harshitha
  |

  ಎರಡು ವರ್ಷಗಳ ಹಿಂದೆ ನಡೆದ ಸ್ಕ್ರೀನ್ ಅವಾರ್ಡ್ಸ್ ಫಂಕ್ಷನ್ ನ ಒಮ್ಮೆ ನೆನಪಿಸಿಕೊಳ್ಳಿ....ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡು ಬೀಗಿದ ಎಲ್ಲಾ ತಾರೆಯರಿಗಿಂತ ಅಂದು ಅಲ್ಲಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದು ಚಾಕಲೇಟ್ ಬಾಯ್ ರಣ್ಬೀರ್ ಕಪೂರ್.

  ವರ್ಣರಂಜಿತ ವೇದಿಕೆ ಮೇಲೆ 'ರಾಕ್ ಸ್ಟಾರ್' ಚಿತ್ರದ ನಟನೆಗಾಗಿ 'ಉತ್ತಮ ನಟ' ಪ್ರಶಸ್ತಿ ಸ್ವೀಕರಿಸಲು ಬಂದ ರಣ್ಬೀರ್, ಏಕ್ದಂ ಮಾಜಿ ಪ್ರೇಯಸಿ ದಿಪ್ಪಿ ಕಾಲಿಗೆ ಬಿದ್ದು ಬಿಟ್ಟರು. ಆಗಲೇ ಇಡೀ ಬಾಲಿವುಡ್ಡಿಗೆ ಗೊತ್ತಾಗಿದ್ದು, ದಿಪ್ಪಿಯನ್ನ ಪ್ರೀತಿಸಿ ಕೈ ಕೊಟ್ಟ ರಣ್ಬೀರ್ ಗೆ ಪಶ್ಚಾತ್ತಾಪವಾಗಿದೆ ಅಂತ.

  ಪಾಪ ಪರಿಹಾರ ಮಾಡಿಕೊಳ್ಳುವುದಕ್ಕೆ ರಣ್ಬೀರ್, ದಿಪ್ಪಿ ಕಾಲಿಗೆ ಬಿದ್ದರು ನಿಜ. ಆದ್ರೆ, ದೀಪಿಕಾ ರಣ್ಬೀರ್ ರನ್ನ ಕ್ಷಮಿಸಿದ್ದಾರಾ..? ಖಂಡಿತ ಇಲ್ಲ. ಅದಕ್ಕೆ ದೀಪಿಕಾ ಆಡಿರುವ ಲೇಟೆಸ್ಟ್ ಮಾತುಗಳೇ ಸಾಕ್ಷಿ.

  ಅಂತದ್ದು ದೀಪಿಕಾ ಮಾತನಾಡಿದ್ದಾದರೂ ಏನು ಅಂದ್ರೆ, ''ರಣ್ಬೀರ್ ಕಪೂರ್ ರನ್ನ ಕತ್ರೀನಾ ಮದುವೆಯಾಗಬಾರದು'' ಅಂತ ಸೀದಾ ಕತ್ರೀನಾ ಕೈಫ್ ಬಳಿ ದಿಪ್ಪಿ ಬಾಣ ಬಿಟ್ಟಿದ್ದಾರೆ. ಕತ್ರೀನಾ ಮತ್ತು ರಣ್ಬೀರ್ ಲಂಡನ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿಯನ್ನ ಮೊನ್ನೆಯಷ್ಟೇ ನೀವು ಓದಿದ್ದೀರಾ. [ಲಂಡನ್ ನಲ್ಲಿ ಉಂಗುರ ಬದಲಾಯಿಸಿಕೊಂಡ ಕತ್ರೀನಾ-ರಣ್ಬೀರ್]

  ರಣ್ಬೀರ್-ಕತ್ರೀನಾ ಉಂಗುರ ಬದಲಾಯಿಸಿಕೊಂಡ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲಾಕಡೆ ಹಬ್ಬುತ್ತಿದ್ದಂತೆ, ಕತ್ರೀನಾಗೆ ಸಲಹೆ ಕೊಡುವುದಕ್ಕೆ ಮುಂದಾಗಿರುವ ರಣ್ಬೀರ್ ಮಾಜಿ ಪ್ರೇಯಸಿ ''ರಣ್ಬೀರ್ ರನ್ನ ಮದುವೆಯಾಗಬೇಡಿ'' ಅಂದಿದ್ದಾರೆ.

  ಅಸಲಿಗೆ ಆಗಿದ್ದು ಇಷ್ಟೆ. ಇತ್ತೀಚೆಗಷ್ಟೆ ವರ್ಣರಂಜಿತ ಪ್ರಶಸ್ತಿ ಪ್ರಧಾನ ಸಮಾರಂಭವೊಂದು ಬಾಲಿವುಡ್ ನಲ್ಲಿ ನಡೆಯಿತು. ಅಲ್ಲಿ ತನ್ನ ಅದ್ಭುತ ಪರ್ಫಾರ್ಮೆನ್ಸ್ ಬಳಿಕ ಮಾತಿಗಿಳಿದ ದೀಪಿಕಾ, ಕತ್ರೀನಾಗೆ ಸಲಹೆ ನೀಡುವ ಬಗ್ಗೆ ಪ್ರಶ್ನೆ ಎದುರಾದಾಗ, ''ರಣ್ಬೀರ್ ರನ್ನ ಮದುವೆಯಾಗಬಾರದು'' ಅಂತ ಹೇಳಿ ನಕ್ಕುಬಿಟ್ಟಿದ್ದಾರೆ.

  ನಗು ನಗುತ್ತಲೇ ಸೀರಿಯಸ್ ಮ್ಯಾಟರ್ ಬಗ್ಗೆ ಕಮೆಂಟ್ ಮಾಡಿರುವ ದಿಪ್ಪಿ, ತಮಾಷೆಗೆ ಹೇಳಿರಬಹುದು. ಆದರೆ, ಅದನ್ನ ಅಷ್ಟೇ ಮಜವಾಗಿ ಕತ್ರೀನಾ ಮತ್ತು ರಣ್ಬೀರ್ ಸ್ವೀಕರಿಸುತ್ತಾರಾ.

  ಹಿಂದೊಮ್ಮೆ ಇದೇ ರಣ್ಬೀರ್ ಗೆ ''ಕಾಂಡೋಮ್ ಪ್ಯಾಕೇಟ್ ಗಿಫ್ಟ್ ಕೊಡಬೇಕು'' ಅಂತ ಖಾಸಗಿ ವಾಹಿನಿಯಲ್ಲಿ ಹೇಳಿಕೆ ನೀಡಿದ್ದ ದಿಪ್ಪಿ, ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ರಣ್ಬೀರ್ ಮದುವೆ ಬಗ್ಗೆ ಕೊಕ್ಕೆ ಹಾಕಿದ್ದಾರೆ. ಇದನ್ನೆಲ್ಲಾ ನೋಡಿದ್ರೆ, ಹಳೆಯದ್ದನ್ನೆಲ್ಲಾ ದಿಪ್ಪಿ ಇನ್ನೂ ಮರೆತಹಾಗಿಲ್ಲ ಅನ್ನುವುದು ಪಕ್ಕಾ.

  English summary
  Bollywood Actress Deepika Padukone said ''Don't marry Ranbir Kapoor'' to Katrina Kaif. This incident happened at a recent awards event, when Deepika was asked to make a comment to Katrina Kaif.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X